ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ವಿಳಂಬ ಖಂಡಿಸಿ, ಬಿಜೆಪಿ ಮುಖಂಡ ನಂಜುಂಡ ಮೈಮ್ ಮಂಗಳವಾರ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.
ಚನ್ನರಾಯಪಟ್ಟಣ: ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ವಿಳಂಬ ಖಂಡಿಸಿ, ಬಿಜೆಪಿ ಮುಖಂಡ ನಂಜುಂಡ ಮೈಮ್ ಮಂಗಳವಾರ ಪ್ರತಿಮೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಪ್ರತಿಮೆ ನಿರ್ಮಾಣಗೊಂಡು 6 ತಿಂಗಳುಗಳು ಕಳೆದರೂ ಅನಾವರಣಗೊಂಡಿಲ್ಲ. ಜ.26ರಂದು ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಪಡಿಸಿ ನಂತರ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇಲ್ಲಿಯವರೆಗೆ ಪ್ರತಿಮೆ ಅನಾವರಣಗೊಂಡಿಲ್ಲ. ಹೀಗಾಗಿ ಶೀಘ್ರ ಪ್ರತಿಮೆಯನ್ನು ಅನಾವರಣಗೊಳಿಸಬೇಕೆಂದು ಆಗ್ರಹಿಸಿದರು. ನಂತರ ಶಿರಸ್ತೆದಾರ್ ಪವನ್ ಅವರಿಗೆ ಮನವಿ ಸಲ್ಲಿಸಿದರು.