ರಾಜ್ಯ

ರಂಜೋಳದಲ್ಲಿ ಅಂಬೇಡ್ಕರ್​ ಪ್ರತಿಮೆ ಅನಾವರಣ ನಾಳೆ

ಸೇಡಂ: ರಂಜೋಳ ಗ್ರಾಮದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ ಪ್ರತಿಮೆ ಅನಾವರಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ ಎಂದು ಮೂರ್ತಿ ಅನಾವರಣಾ ಸಮಿತಿ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್​ ರಂಜೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೀದರ್​ನ ಭಂತೆ ವರಜ್ಯೋತಿ, ಕೋಡ್ಲಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಗುರುಮಠಕಲ್​ನ ಶ್ರೀ ಮುರುರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅವರು ಪ್ರತಿಮೆ ಅನಾವರಣಗೊಳಿಸಿದರೆ, ಸಚಿವ ಪ್ರಿಯಾಂಕ್​ ರ್ಖಗೆ ಡಾ.ಅಂಬೇಡ್ಕರ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಜೆಡಿಎಸ್​ ಜಿಲ್ಲಾಧ್ಯಕ್ಷ ಬಾಲರಾಜ್​ ಗುತ್ತೇದಾರ್​ ಜ್ಯೋತಿ ಬೆಳಗಿಸಲಿದ್ದಾರೆ. ಅಲ್ಟ್ರಾಟೆಕ್​ ಸಿಮೆಂಟ್​ ಕಾರ್ಮಿಕರ ಸಂದ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್​ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಜಿಪಂ ಮಾಜಿ ಸದಸ್ಯ ದೂಳಪ್ಪ ದೊಡ್ಡಮನಿ, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ, ಮಾಜಿ ಸದಸ್ಯ ಅಬ್ದುಲ್​ ರಸೀದ್​ ರಂಜೋಳ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿವಿಧ ೇತ್ರಗಳಲ್ಲಿ ಸಾಧನೆಗೈದ ಮಹಾದೇವಪ್ಪ ದಿಡ್ಡಿಮನಿ, ಆನಂದರಾವ್​, ನಾಗಮ್ಮ ದಂಡುಮ, ಸೋಮಶೇಖರ ಒಡೆಯರ್​, ಶ್ರೀಕಾಂತ ಗಡ್ಡಿಮನಿ, ನಾಗೇಂದ್ರ ಮೈಲಾರಿ, ಮಹೇಶ, ವಿಜಯಕುಮಾರ, ನರೇಶ ಪಾಕಾಲ್​, ಅಬ್ದುಲ್​ ರಹಿಮಾನ್​, ವೆಂಕಟೇಶ, ಅನೀಲಕುಮಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.