ರಾಜ್ಯ

ಅಂಬೇಡ್ಕರ್​ ಜಯಂತಿ, ಬೃಹತ್​ ಸಮಾವೇಶ 13ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಶಿವರಾಜ ಹೊಸಮನಿ ಮಾಹಿತಿ
  • ಸಚಿವ ಪ್ರಿಯಾಂಕ್​ ಸೇರಿ ಹಲವರು ಭಾಗಿ
ಅಫಜಲಪುರ: ಡಾ.ಬಿ.ಆರ್​.ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವ ನಿಮಿತ್ತ ಮೇ 13ರಂದು ನ್ಯಾಷನಲ್​ ಫಂಕ್ಷನ್​ ಹಾಲ್​ನಲ್ಲಿ ಬೃಹತ್​ ಸಮಾವೇಶ ಮತ್ತು ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ತಾಲೂಕು ಅಧ್ಯಕ್ಷ ಶಿವರಾಜ ಹೊಸಮನಿ ತಿಳಿಸಿದರು.
ಸಂಜೆ 4ಕ್ಕೆ ಪ್ರಮುಖ ಬೀದಿಗಳಲ್ಲಿ ಡಾ.ಅಂಬೇಡ್ಕರ್​ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ನ್ಯಾಷನಲ್​ ಫಂಕ್ಷನ್​ ಹಾಲ್​ನಲ್ಲಿ ಬೃಹತ್​ ಸಮಾವೇಶ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಉದ್ಘಾಟಿಸುವರು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ವೀರಮಹಾಂತ ಶಿವಾಚಾರ್ಯ, ಭಂತೆ ವರಜ್ಯೋತಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಂ.ವೈ.ಪಾಟೀಲ್​, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​, ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​, ಜಿಪಂ ಮಾಜಿ ಅಧ್ಯಕ್ಷ ನಿತೀನ್​ ಗುತ್ತೇದಾರ್​ ಭಾಗವಹಿಸಲಿದ್ದಾರೆ. ಬಸವ ರಾಷ್ಟ್ರೀಯ ಪ್ರಶಸ್ತಿ ಪುರಸತ ಡಾ.ಸಿದ್ಧರಾಮ ಬೆಲ್ದಾಳ ಶರಣರು ಹಾಗೂ ರಾಜ್ಯ ಮಟ್ಟದ ಡಾ.ಅಂಬೇಡ್ಕರ್​ ಪ್ರಶಸ್ತಿ ಪುರಸತ ಡಾ.ಹಣಮಂತರಾವ ದೊಡ್ಡಮನಿ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭೀಮರಾವ ಗೌರ, ಮಲ್ಲಿಕಾರ್ಜುನ ಖರ್ಗೆ, ಗುಂಡಪ್ಪ ಹೊಸಮನಿ, ಮಹಾನಿಂಗ ಅಂಗಡಿ, ಮಹಾಂತೇಶ ಬಡದಾಳ, ಅಶೋಕ ಗುಡ್ಡಡಗಿ, ಕುಮಾರ ಕೊಳಿಗೇರಿ, ಭಾಗಣ್ಣ ಕೊಳ್ಳಿ, ಗೌತಮ ಸಕ್ಕರಗಿ, ಪ್ರವಿಣ ಕಲ್ಲೂರ್​, ಅರವಿಂದ ದೊಡ್ಡಮನಿ, ಶರಣು ಕೊಳಗೇರಿ, ಶಾಮ ಅಳ್ಳಗಿ, ಮಹಾದೇವ ಬಂಕಲಗಿ, ಚಿನ್ನಾ ಅಫಜಲಪುರ, ಜೈಭೀಮ ಅಳ್ಳಗಿ, ಮಂಜು ಬಟಗೇರಿ ಇದ್ದರು.