ಅಂಬೇಡ್ಕರ್ ಒಂದು ಧರ್ಮಕ್ಕೆ ಸೀಮಿತವಲ್ಲ Ambedkar
ಮಡಿವಾಳ: ಡಾ. ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಧರ್ಮಕ್ಕೆ ಹಾಗೂ ಜಾತಿಗೆ ಸೀಮಿತರಲ್ಲ. ಅವರು ಸಂವಿಧಾನದಲ್ಲಿ ಎಲ್ಲರಿಗೂ ಸ್ವ ಇಚ್ಛೆಯಂತೆಯೇ ಬದುಕಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ದೇವರ ಸಮಾನರು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. Ambedkar
ಮಾಲೂರು ತಾಲೂಕು ಮಡಿವಾಳ ಜೈ ಭೀಮ್ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಸಂವಿಧಾನದಲ್ಲಿ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ, ಸಮಾನತೆ ಕೊಡಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಮಾಜಿ ಅಧ್ಯಕ್ಷ ಜಯರಾಮೇಗೌಡ, ವೆಂಕಟೇಶ್, ಮಂಜುನಾಥ್. ಕೆ.ಚನ್ನಚಾರಿ ಬಾಬು, ಪಾಪಣ್ಣ, ನಟರಾಜ್, ಅಶ್ವತ್ಥ್, ಸುರೇಶ್, ಭರತ್, ವಿಜಿ, ಮುನಿರಾಜ್, ಆನಂದ್, ಅರುಣ್ ಇದ್ದರು.