ಸೇಡಂನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದ ಕರಪತ್ರವನ್ನು ಬಿಡುಗಡೆಗೊಳಸಲಾಯಿತು. ಮಹಾಂತಪ್ಪ ಸಂಗಾವಿ, ಶಿವಕುಮಾರ ತೊಟ್ನಳ್ಳಿ, ಗೌತಮ ಹಳ್ಳಿ, ವಿಲಾಸಗೌತಂ ನಿಡಗುಂದಾ, ಅರುಣ ಮುಡಬೂಳಕರ್, ಮಹಾವೀರ ಅಳ್ಳೊಳ್ಳಿ ಇದ್ದರು.
- ಉತ್ಸವ ಸಮಿತಿ ತಾಲೂಕು ಅಧ್ಯಕ್ಷ ಗೌತಮ ಹಳ್ಳಿ ಮಾಹಿತಿ
- ಬೆಳಗ್ಗೆ ಬೃಹತ್ ಬೈಕ್, ಕಾರು ರ‍್ಯಾಲಿ
ಸೇಡಂ: ದೇಶಕ್ಕೆ ಸಂವಿಧಾನವನ್ನು ನೀಡುವ ಮೂಲಕ ಸರ್ವರಿಗೂ ಸಮಾನತೆ ಬದುಕು ಕಟ್ಟಿಕೊಟ್ಟಿರುವ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಈ ಬಾರಿ ಹಬ್ಬವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೌತಮ್ ಹಳ್ಳಿ ಹೇಳಿದರು.
ಮಂಗಳವಾರ ಬೆಳಗ್ಗೆ 11ಕ್ಕೆ ಬಸವೇಶ್ವರ ವೃತದಿಂದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿವರೆಗೆ ಬೈಕ್ ಮತ್ತು ಕಾರುಗಳ ರ‍್ಯಾಲಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಕಾರ್ಯಕ್ರಮ ನಡೆಯುವ ಪುತ್ಥಳಿ ಆವರಣದವರೆಗೆ ನಾಡಿನ ಕಲಾ ತಂಡಗಳೊಂದಿಗೆ ಬಾಬಾ ಸಾಹೇಬರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಸಂಜೆ 5ಕ್ಕೆ ಪುತ್ಥಳಿ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೀದರ್ನ ಭಂತೆ ವರಜ್ಯೋತಿ, ಕೋಡ್ಲಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವನಾಗಿದೇವ ಸ್ವಾಮೀಜಿ ಸಾನ್ನಿಧ್ಯವಹಿಸುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಮಾಜಿ ಸಚಿವ ಎನ್.ಮಹೇಶ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಉತ್ಸವ ಸಮಿತಿ ಅಧ್ಯಕ್ಷ ಗೌತಮ ಹಳ್ಳಿ ಅಧ್ಯಕ್ಷತೆವಹಿಸುರು. ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ ವಿಶೇಷ ಉಪನ್ಯಾಸ ನೀಡುವರು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ ತೆಲ್ಕೂರ ಸೇರಿ ಇತರರು ಮುಖ್ಯಅತಿಥಿಗಳಾಗಿ ಭಾಗವಹಿಸುವರು. ವಿವಿಧ ಕ್ಷೇತ್ರದ ಸಾಧಕರಾದ ಮಹಾದೇವಪ್ಪ ದಿಡ್ಡಿಮನಿ, ಮಲ್ಲಿಕಾರ್ಜುನ ಗಿರಿ, ಮದನಿಕಾಂತ ಶೃಂಗೇರಿ, ಶರಣಯ್ಯಸ್ವಾಮಿ, ಗುರುರಾಜ ಕುಲಕರ್ಣಿ, ಶರಣು ಮಹಾಗಾಂವ್ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ತಿಳಿಸಿದರು.
ಮಹಾಂತಪ್ಪ ಸಂಗಾವಿ, ಶಿವಕುಮಾರ ತೊಟ್ನಳ್ಳಿ, ವಿಲಾಸಗೌತಂ ನಿಡಗುಂದಾ, ಅರುಣ ಮುಡಬೂಳಕರ್, ಸಾಗರ ಕಲಕಂಭ, ಮಹಾವೀರ ಅಳ್ಳೊಳ್ಳಿ, ಸಂತೋಷ ಬೆನಕನಹಳ್ಳಿ, ಜೈಭೀಮ ಬೆನಕನಹಳ್ಳಿ ಇದ್ದರು.