ಹೊನಗುಂಟಾದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ಅರ್ಚಸ್ಮತಿ ಮಾತಾಜಿ, ಮರಿಯಪ್ಪ ಹಳ್ಳಿ, ಭೀಮಾಶಂಕರ ಖೇಣಿ, ಮರೆಪ್ಪ ಮೇತ್ರೆ ಇತರರಿದ್ದರು.
- ಪ್ರಾಚಾರ್ಯ ಡಾ.ಪಂಡಿತ ಬಿ.ಕೆ. ಹೇಳಿಕೆ
- ಹೊನಗುಂಟಾದಲ್ಲಿ ಬಾಬಾಸಾಹೇಬ್ ಜಯಂತಿ
ಶಹಾಬಾದ್: ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ. ನಮ್ಮೆಲ್ಲರ ನಗುವಿನ ಹಿಂದೆ, ಬಾಬಾ ಸಾಹೇಬರ ನೋವು, ಕಷ್ಟ ಇದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಪಂಡಿತ ಬಿ.ಕೆ. ಹೇಳಿದರು.
ಹೊನಗುಂಟಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಸಂವಿಧಾನದ ಮೂಲಕ ಗುಲಾಮರನ್ನು ರಾಜರನ್ನಾಗಿ ಮಾಡಿದ್ದಾರೆ. ಇಂದು ನಾವೂ ಮಂಗಳಕ್ಕೆ ಹೋಗುತ್ತಿದ್ದೇವೆ, ಆದರೆ ಪಕ್ಕದ ಮನೆಯ ಅಂಗಳಕ್ಕೆ ಹೋಗಿ ಅವರ ಕಷ್ಟ-ಸುಖ ಕೇಳುತ್ತಿಲ್ಲ. ಬಾಬಾ ಸಾಹೇಬರ ಜಯಂತಿಯನ್ನು ಮೆರವಣಿಗೆಯಲ್ಲಿ ಅಲ್ಲ, ಬರವಣಿಗೆಯಲ್ಲಿ ನೋಡಬೇಕು ಎಂದು ಅಭಿಪ್ರಾಯಪಟ್ಟರು.
ಡಾ.ವಿಜಯಕುಮಾರ ಸಾಲಿಮನಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ವಾಡಿಯ ಸಿದ್ದಾರ್ಥ ಬುದ್ಧ ವಿಹಾರದ ಬಿಕ್ಖುಣಿ ಅರ್ಚಸ್ಮತಿ ಸಾನ್ನಿಧ್ಯ, ಮರಿಯಪ್ಪ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪೀರ್ಪಾಶಾ, ಭೀಮಾಶಂಕರ ಖೇಣಿ, ಮರೆಪ್ಪ ಮೇತ್ರೆ, ದೇವಿಂದ್ರ ಕಾರೊಳ್ಳಿ, ಮಹಿಬೂಬ್ ಪಟೇಲ್, ಕೃಷ್ಣಪ್ಪ ಕರಣಿಕ, ಮಹಾದೇವ ತರನಳ್ಳಿ, ಮಲ್ಲಣ್ಣ ಮರತೂರ, ಸತೀಷ ಕೋಬಾಳ, ಮಾರ್ಥಂಡಪ್ಪ ಬುರ್ಲಿ, ಸುರೇಶ ಕುಂಬಾರ, ಮಲ್ಕಪ್ಪ ಮುದ್ದಾ, ಸಾಬಣ್ಣ ಕೊಲ್ಲೂರ, ವಿಶ್ವರಾಜ ಫಿರೋಜಾಬಾದ್, ಹಣಮಂತರಾಯ ಪಾಟೀಲ್, ಮಲ್ಲಪ್ಪ ಆಡೀನ್, ಶೌಕತ್ ಅಲಿ, ರಾಜು ಆಡೀನ್, ರಾಜು ಸಂಗ್ಮಾ, ಮೈಲಾರಿ ಓಣಿ, ಸಾಬಣ್ಣ ಶಹಾಬಾದಿ, ನಾಗಪ್ಪ ನ್ಯಾವಣಿ, ರಾವೇಂದ್ರ ಗೂಡೂರ, ಸಾಗರ ಮೇತ್ರಿ, ಸಚಿನ್ ಗಿರೇನೂರ, ಆಕಾಶ ಕವಲಗಿ ಇತರರಿದ್ದರು.
ಕೃಷ್ಣಪ್ಪ ಕರಣಿಕ, ಶಿವಯೋಗಿ ಮೇತ್ರಿ, ಮಲ್ಲಣ್ಣ ಮಸ್ಕಿ, ತಿಪ್ಪಣ್ಣ ಧನೇಕರ್, ರಾಕೇಶ ಜಾಯಿ ಅವರು ಕ್ರಾಂತಿಗೀತೆ ಹಾಡಿದರು. ಮಹಾದೇವ ಮೇತ್ರಿ ಸ್ವಾಗತಿಸಿದರು. ಪಿ.ಎಸ್.ಮೇತ್ರೆ ನಿರೂಪಣೆ ಮಾಡಿದರು. ಜೈಭೀಮ ರಸ್ತಾಪುರ ವಂದಿಸಿದರು.