ಛಲವಾದಿ ಯುವ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ನೀಲಕಂಠನಹಳ್ಳಿ ಎನ್.ಆರ್.ಆತ್ಮಾನಂದ
- ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ
- ರಾಜ್ಯಮಟ್ಟದ ಅಂಬೇಡ್ಕರ್ ಪ್ರಶಸ್ತಿ
ಮದ್ದೂರು: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ (ಎವಿಎಸ್‌ಎಸ್) ಕೊಡ ಮಾಡುವ ರಾಜ್ಯಮಟ್ಟದ ಅಂಬೇಡ್ಕರ್ ಪ್ರಶಸ್ತಿಗೆ ಛಲವಾದಿ ಯುವ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ನೀಲಕಂಠನಹಳ್ಳಿ ಎನ್.ಆರ್.ಆತ್ಮಾನಂದ ಭಾಜನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಆ.30 ರಂದು ಆಯೋಜಿಸಿದ್ದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ತಾಲೂಕಿನ ನೀಲಕಂಠನಹಳ್ಳಿ ಗ್ರಾಮದವರಾದ ಆತ್ಮಾನಂದ ಅವರು 30 ವರ್ಷಗಳಿಂದ ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಮ್ ಅವರು ಸ್ಥಾಪಿಸಿದ ಛಲವಾದಿ ಮಹಾ ಸಭಾ ಮೂಲಕ ದಲಿತ ಜನಾಂಗದ ಏಳಿಗೆಗಾಗಿ ದುಡಿದಿದ್ದಾರೆ.