ದೋರನಹಳ್ಳಿಯಲ್ಲಿ ಬಸವೇಶ್ವರ ರಥೋತ್ಸವದ ನಂತರ ಅಂಭಾಭವಾನಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.
ದೋರನಹಳ್ಳಿ: ಡೊಳ್ಳು, ಭಾಜಾ, ಹಲಗೆ ಮೇಳದೊಂದಿಗೆ ಬಸವೇಶ್ವರ ರಥೋತ್ಸವ, ಅಂಬಾಭವಾನಿ ಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರೆ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಪ್ರತಿವರ್ಷದ ಪದ್ಧತಿಯಂತೆ ಪಟ್ಟಣದ ಬಸವೇಶ್ವರ ರಥೋತ್ಸವ ಹಾಗೂ ಅಂಬಾ ಭವಾನಿ ಪಲ್ಲಕ್ಕಿ ಉತ್ಸವದೊಂದಿಗೆ ಅದ್ದೂರಿಯಾಗಿ ಜಾತ್ರೆಗೆ ದೊರಕಿದಂತಾಗಿದೆ. ಸೋಮವಾರ ಬೆಳಗ್ಗೆ ಅಂಬಾ ಭವಾನಿ ಗದ್ದುಗೆಗೆ ಬಿಲ್ವಾರ್ಚನೆ, ಕುಂಕುಮಾರ್ಚನೆಯೊಂದಿಗೆ ಪೂಜಾ ಕಾರ್ಯಗಳು ಆರಂಭವಾಗಿ ಗ್ರಾಮದ ಸದ್ಭಕ್ತರಿಂದ ನೈವೇದ್ಯ ಅರ್ಪಿಸಲಾಗಿ ಸಂಜೆ 6ಕ್ಕೆ ಬಸವೇಶ್ವರರ ಅದ್ದೂರಿ ರಥೋತ್ಸವವು ಹಿರೇಮಠದ ಅಭಿನವ ಮಹಾಂತೇಶ್ವರ ಶಿವಾಚಾರ್ಯರು ಹಾಗೂ ಸಿದ್ದಾರೂಢ ಮಠದ ಭೀಮಾಶಂಕರಾನಂದ ಅವಧೂತರ ಸಮ್ಮುಖದಲ್ಲಿ ಜರುಗಿತು.
ನೆರದಿದ್ದ ಸಾವಿರಾರು ಭಕ್ತರು ಜೈೂಷಗಳೊಂದಿಗೆ ರಥ ಎಳೆದರು. ಭಕ್ತರು ಉತ್ತತ್ತಿ, ಬಾಳೆಹಣ್ಣು, ಕೋಳಿ ಎಸೆದು ಹರಕೆ ಸಂಭ್ರಮ ತೀರಿಸಿದರು. ಮಂಗಳವಾರ ಸಂಜೆ ಅಂಬಾ ಭವಾನಿ ಬೆಳ್ಳಿ ಪಲ್ಲಕ್ಕಿಯು ಗ್ರಾಮದ ಪ್ರಮುಖ ಬದಿಗಳ ಡೊಳ್ಳು, ಭಾಜಾ, ಭಜಂತ್ರಿ, ಹಲಗೆ ಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಕಂಡು ತಡರಾತ್ರಿ ಮರಳಿ ದೇವಸ್ಥಾನ ತಲುಪಿತು.
ನಂತರ ಸ್ಥಳಿಯ ಕಲಾವಿದರಿಂದ ನಿರ್ದೇಶಿಸಿ, ನಟಿಸಿದ ಕುರುೇತ್ರ ಬಯಲಾಟ ಪ್ರದರ್ಶನ ಕಂಡಿತು. ಬುಧವಾರ ಬೆಳಗ್ಗೆ ಜಾತ್ರೆ ಆರಂಭವಾಗಿ ಭಜಿ, ಜಿಲೆಬಿ, ಬೆಂಡು ಬತ್ತಾಸು, ಆಟಿಕೆ ವಸ್ತುಗಳ ಖರೀಧಿ ಜೋರಾಗಿತ್ತು. ನಂತರ ಗ್ರಾಮೀಣ ಕ್ರೀಡೆ, ಕುಸ್ತಿ, ಚೀಲ ಎತ್ತುವ ಕಾರ್ಯಕ್ರಮ ಜರುಗಿದವು.