ಕೋಟೂರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ಮಹಾದೇವ ಗಡ್ಡಿ,ತವನಪ್ಪ ಟೋಪಣ್ಣವರ, ಸಿಂಗಯ್ಯ ಮಠಪತಿ, ಶ್ರೀಕಾಂತ ದೇಸಾಯಿ, ಸಿದ್ದಯ್ಯ ಪೂಜೇರಿ ಇತರರಿದ್ದರು. 
ರಾಜ್ಯ

ಗ್ರಾಮದ ಅಭಿವೃದ್ಧಿಗೆ ಸದಾ ಬದ್ಧ

ಕೋ.ಶಿವಾಪುರ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿರುವ ಕೋಟೂರ ಪರಮಾನಂದ ದೇವಸ್ಥಾನದವರೆಗಿನ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ೇತ್ರದ ಕಟ್ಟಕಡೆಯ ಹಳ್ಳಿಗೂ ಉತ್ತಮ ಸೌಕರ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಈ ರಸ್ತೆ ನಿರ್ಮಾಣದಿಂದ ಸುತ್ತಲಿನ ಗ್ರಾಮಸ್ಥರಿಗೆ, ಭಕ್ತಾದಿಗಳ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು. ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ಮಹಾದೇವ ಗಡ್ಡಿ, ತವನಪ್ಪ ಟೋಪಣ್ಣವರ, ಸಿಂಗಯ್ಯ ಮಠಪತಿ, ಶ್ರೀಕಾಂತ ದೇಸಾಯಿ, ಸಿದ್ದಯ್ಯ ಪೂಜೇರಿ, ಪರಮೇಶ ಚಂದರಗಿ, ಬಸವರಾಜ ವಾಲಿ, ಸೋಮನಿಂಗ ದೇಸಾಯಿ, ಮಹಾದೇವಯ್ಯ ಪೂಜೇರಿ, ಸಂಜು ಕುರಿ, ಹೊನ್ನಪ್ಪ ಖಂಡ್ರಿ, ಪರಮಾನಂದ ಪೂಜೇರಿ, ಸಿದ್ದಲಿಂಗಯ್ಯ ಪೂಜೇರಿ, ಕುಮಾರ ಟೋಪಣ್ಣವರ, ಮೇರಾಸಾಬ ಮುಗಟಖಾನ, ಶಿವಲಿಂಗಪ್ಪ ಪೊಲೀಸ್​, ರಾಮಯ್ಯ ಪೂಜೇರಿ ಇತರರಿದ್ದರು.