ಆಲೂರು-ಯಂಬಳಿ ಗ್ರಾಮಗಳ ನಡುವಿನ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದು. 
ರಾಜ್ಯ

ಅಲೂರು-ಯಂಬಳಿ ರಸ್ತೆ ಕಾಮಗಾರಿ ಆರಂಭ

ಶಶಿಧರ ಎಲ್

ಪ್ರಮುಖ ಮುಖ್ಯಾಂಶಗಳು

  • ಹತ್ತಾರು ವಷರ್ಗಳ ಸಮಸ್ಯೆಗೆ ಮುಕ್ತಿ
  • ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ನಡುವಿನ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದ್ದು ಎರಡೂ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಹತ್ತಾರು ವಷರ್ಗಳ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ. ಶಾಸಕರ ಪರಿಶ್ರಮದಿಂದ ಕೋಟಿ ವೆಚ್ಚದ ಕಾಮಗಾರಿ ಚಾಲನೆ ಸಿಕ್ಕಿದ್ದು ದೀಘಕಾಲದ ಸಮಸ್ಯೆ ಬಗೆಹರಿದಂತಾಗಿದೆ.
ಅಲೂರುನಿಂದ ಯಂಬಳಿಗೆ ಹೋಗುವ ರಸ್ತೆ ಬಲ ಭಾಗದಲ್ಲಿ ಗೋಕಟ್ಟೆ ನಿರ್ಮಿಸಲಾಗಿದೆ. ಈ ಗೋಕಟ್ಟೆಯಲ್ಲಿ ಸಂಗ್ರಹವಾದ ನೀರಿನಿಂದ ರಸ್ತೆ ಸಂಪೂರ್ಣ ಜಲಾವೃತವಾಗಿ ಓಡಾಟಕ್ಕೆ ಸಮಸ್ಯೆ ಉಂಟಾಗಿತ್ತು. ಅವೈಜ್ಞಾನಿಕವಾಗಿ ಗೋಕಟ್ಟೆ ನಿರ್ಮಿಸಲಾಗಿತ್ತು. ಈಗ ಬ್ಯಾರೇಜ್ ಮತ್ತು ರಸ್ತೆ ನಿರ್ಮಾಣ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ.
ರಸ್ತೆ ಕೊನೆಭಾಗದ ಗೋಕಟ್ಟೆ ನಿರ್ಮಾಣದಿಂದ ಆಲೂರು ಮತ್ತು ಯಂಬಳಿ ನಡುವಿನ ರಸ್ತೆ ಸಂಚಾರಕ್ಕೆ ಮಾತ್ರ ಸಮಸ್ಯೆ ಸೀಮಿತವಾಗದೆ ಅಲೂರು ಗ್ರಾಮದ ಸ್ಮಶಾನ ಪ್ರದೇಶ ಸಹ ನೀರಿನಿಂದ ಜಲಾವೃತವಾಗಿತ್ತು. ಗ್ರಾಮದ ಯಾರೇ ಸತ್ತರು ತುಂಬಿದ ನೀರಿನ ಗುಂಡಿಯಲ್ಲಿ ಅಂತ್ಯಕ್ರಿಯೆ ಮಾಡಬೇಕಾದ ಅನಿವಾರ್ಯತೆ ಈ ಗ್ರಾಮದ ಜನರದಾಗಿತ್ತು.

ಅಲೂರು-ಯಂಬಳಿ ನಡುವಿನ ರಸ್ತೆ ಮಾರ್ಗದಲ್ಲಿ ಹೋಗುವಾಗ ಈ ಭಾಗದ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದೆ. ಎರಡೂ ಗ್ರಾಮದ ಜನರು ಸಮಸ್ಯೆ ಕುರಿತು ಮನವಿ ಮಾಡಿದ್ದರು. ಅಗತ್ಯ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ.

— ಡಾ.ಎನ್.ಟಿ.ಶ್ರೀನಿವಾಸ್, ಶಾಸಕರು, ಕೂಡ್ಲಿಗಿ

ಶಾಸಕರ ಸಲಹೆಯಂತೆ ಯೋಜನೆ ರೂಪಿಸಲಾಗಿದೆ. ಬ್ಯಾರೇಜ್ ಮತ್ತು ರಸ್ತೆ ಕಾಮಗಾರಿ ತ್ವರಿತವಾಗಿ ಸಾಗಿದೆ. ಮಳೆಗಾಲ ಆರಂಭದ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ. ಜತೆಗೆ ಗೋಕಟ್ಟೆಯಲ್ಲಿ ಸಹ ಮಳೆ ನೀರು ಸಂಗ್ರಹವಾದರೂ ಸಂಚಾರಕ್ಕೆ ಯಾವುದೇ ತೊಂದರೆ ಆಗದು.

— ಮಲ್ಲಿಕಾರ್ಜುನ, ಜಿಪಂ ಎಇಇ. ಕೂಡ್ಲಿಗಿ