- - ದೇವುಡು ನರಸಿಂಹಶಾಸಿ ಕೃತಶಾಸ ಚೂಡಾಮಣಿ ಲೋಕಾರ್ಪಣೆ
ಬೆಂಗಳೂರು: ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯಂತಹ ಕೃತಿಗಳ ಅವಲೋಕನ ಮಾಡುವ ಅಗತ್ಯವಿದೆ ಎಂದು ಜಮಖಂಡಿ ಶಾಸಕ ಜಗದೀಶ ಶಿವಯ್ಯಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಹಾಗೂ ನಿರಂತರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವುಡು ನರಸಿಂಹಶಾಸಿ ಕೃತಶಾಸ ಚೂಡಾಮಣಿ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಂಪಾದಿಸಿರುವ ‘ಸಂಗ್ರಹ ಭಾಗವತ ಹಾಗೂ ರಾಮಾಯಣ ಮತ್ತು ಭಾರತದ ಮಹಾಪುರುಷರು’ ಕೃತಿಗಳ ಲೋಕಾರ್ಪಣೆ ಬಳಿಕ ಅವರು ಮಾತನಾಡಿದರು.
ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅಗತ್ಯವಾಗಿದ್ದು, ಅದಕ್ಕಾಗಿ ಇಂತಹ ಕೃತಿಗಳ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಜಮಖಂಡಿಯಲ್ಲಿ ‘ಮನೆ ಮನೆಗೆ ಗ್ರಂಥ ಬಾಗಿನ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕೃತಿಗಳ ಲೋಕಾರ್ಪಣೆ ಮಾಡಿದ ನ್ಯಾ. ಎನ್. ಕುಮಾರ್ ಮಾತನಾಡಿ, ರಾಮಾಯಣ, ಮಹಾಭಾರತ ಕತೆಯೂ ಹೌದು, ನೀತಿಪಾಟವು ಹೌದು. ಅವನ್ನು ನಾವು ನಮ್ಮ ಜೀವನಕ್ಕೆ ಅಳವಡಿಕೊಳ್ಳುವ ಅವಶ್ಯಕತೆಯಿದೆ. ಇದನ್ನು ಮನಮುಟ್ಟುವ ಹಾಗೆ ದೇವುಡು ಅವರ ಕೃತಿಗಳಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.
ಮಲ್ಲೇಪುರಂ ಜಿ. ವೆಂಕಟೇಶ ಅವರು ದೇವುಡು ಅವರ ಜೀವನ ಸಾಧನೆ ಹಾಗೂ ಅವರ ಕೃತಿಗಳ ಕುರಿತು ಮಾತನಾಡಿದರು.
ನಾಡೋಜ ಡಾ.ವೂಡೇ ಪಿ. ಕೃಷ್ಣ, ಡಾ. ಕೆ. ಜಿ ಲಕ್ಷ್ಮೀ ನಾರಾಯಣಪ್ಪ, ಪ್ರಕಾಶಕರಾದ ಸುರೇಶ್, ಪ್ರವೀಣ್ ಜಗಾಟ ಹಾಗೂ ಚಂದ್ರಕೀರ್ತಿ ಉಪಸ್ಥಿತರಿದ್ದರು.