ಬೆಂಗಳೂರಿನ ಹೈಕೋರ್ಟ್​ನ ಮಧ್ಯಸ್ಥಿಕೆ ಮತ್ತು ಸೌಹಾರ್ದ ಕೇಂದ್ರ ಹಾಗೂ ಅಲಯನ್ಸ್​ ವಿವಿಯು ವಿದ್ಯಾರ್ಥಿಗಳ ಇಂರ್ಟನ್​ಶಿಪ್​ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜಿಲ್ಲಾ ನ್ಯಾಯಾಧೀಶ ದಿನೇಶ್​ ಹೆಗ್ಡೆ ರಿಜಿಸ್ಟ್ರಾರ್​ ಡಾ.ಮತಂ ವಿಶ್ವನಾಥಯ್ಯ, ಅಲಯನ್ಸ್​ ವಿವಿ ರಿಜಿಸ್ಟ್ರಾರ್​ ಜನರಲ್​ ಸುರೇಖಾ ಶೆಟ್ಟಿ, ಕೇಂದ್ರದ ಉಪನಿರ್ದೇಶಕ ವಿಘ್ನೇಶ್​ ಕುಮಾರ್​, ಅಲಯನ್ಸ್​ ಸ್ಕೂಲ್​ ಆಫ್​ ಲಾನ ಡೀನ್​ ಡಾ.ವಿ.ಶ್ಯಾಮ್​ ಕಿಶೋರ್​ ಇತರರು ಇದ್ದರು. 
ರಾಜ್ಯ

ಇಂರ್ಟನ್​ಶಿಪ್​ಗೆ ಅಲಯನ್ಸ್​ ವಿವಿ ಒಪ್ಪಂದ / ANEKAL

ಆನೇಕಲ್​ : ಕಾನೂನು ವಿದ್ಯಾರ್ಥಿಗಳಿಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳ ಪ್ರಾಯೋಗಿಕ ಅನುಭವ ಪಡೆಯಲು ಅವಕಾಶ ಕೊಡುವ ನಿಟ್ಟಿನಲ್ಲಿ ಅಲಯನ್ಸ್​ ವಿಶ್ವವಿದ್ಯಾಲಯವು ಹೈಕೋರ್ಟ್​ನ ಮಧ್ಯಸ್ಥಿಕೆ ಮತ್ತು ಸೌಹಾರ್ದ ಕೇಂದ್ರ (ದೇಶೀಯ ಮತ್ತು ಅಂತಾರಾಷ್ಟ್ರೀಯ) ದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಪರ್ಯಾಯ ವಿವಾದ ಪರಿಹಾರ, ವಿಶೇಷವಾಗಿ ಮಧ್ಯಸ್ಥಿಕೆ ಮತ್ತು ಸೌಹಾರ್ದ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಹಕಾರ, ಸಂಶೋಧನೆ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂರ್ಟನ್​ಶಿಪ್​ ಸಹಯೋಗ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಒಪ್ಪಂದಕ್ಕೆ ಮಧ್ಯಸ್ಥಿಕೆ ಮತ್ತು ಸೌಹಾರ್ದ ಕೇಂದ್ರದ ಪರವಾಗಿ ನಿರ್ದೇಶಕ ಜಿಲ್ಲಾ ನ್ಯಾಯಾಧೀಶ ದಿನೇಶ್​ ಹೆಗ್ಡೆ ಹಾಗೂ ಅಲಯನ್ಸ್​ ವಿಶ್ವವಿದ್ಯಾಲಯದ ಪರವಾಗಿ ರಿಜಿಸ್ಟ್ರಾರ್​ ಡಾ.ಮತಂ ವಿಶ್ವನಾಥಯ್ಯ ಸಹಿ ಹಾಕಿದರು.
ಕಾನೂನು ವಿದ್ಯಾರ್ಥಿಗಳಿಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳ ಪ್ರಾಯೋಗಿಕ ಅನುಭವ ನೀಡುವ ಉದ್ದೇಶ ಹೊಂದಲಾಗಿದೆ. ಇಂರ್ಟನ್​ಶಿಪ್​ ಅವಕಾಶಗಳು, ಕಾರ್ಯಾಗಾರಗಳು, ಸಂಸ್ಥೆಗೆ ಭೇಟಿ ಹಾಗೂ ತಜ್ಞರೊಂದಿಗೆ ಶೈಕ್ಷಣಿಕ ಸಂವಾದಗಳ ಮೂಲಕ ವಿದ್ಯಾರ್ಥಿಗಳ ಅನುಭವಾತ್ಮಕ ಕಲಿಕೆಯನ್ನು ಮತ್ತಷ್ಟು ಬಲಪಡಿಸಲು ಇದು ಸಹಕಾರಿಯಾಗಲಿದೆ.
ರಿಜಿಸ್ಟ್ರರ್​ ವಿಶ್ವನಾಥಯ್ಯ ಮಾತನಾಡಿ, ಕಾನೂನು ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಪರ್ಯಾಯ ಪರಿಹಾರ ವ್ಯವಸ್ಥೆಗಳಲ್ಲಿ ಮಧ್ಯಸ್ಥಿಕೆಯ ಮಹತ್ವ ಹೆಚ್ಚುತ್ತಿದೆ. ಇಂತಹ ಶೈಕ್ಷಣಿಕ- ಉದ್ಯಮ ಸಹಯೋಗಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ವೃತ್ತಿಪರ ಪರಿಣತಿ ಬೆಳೆಸಲು ಹಾಗೂ ಭಾರತದ ಸಂಸತಿಯನ್ನು ಉತ್ತೇಜಿಸುವಲ್ಲಿ ಪಾತ್ರವಹಿಸಲಿವೆ ಎಂದರು.
ಯುಜಿ ಪ್ರೋಗ್ರಾಂ ನಿರ್ದೇಶಕ ಡಾ. ಎನ್​.ಜಿ.ದೇವಯ್ಯ, ಅಸೋಸಿಯೇಟ್​ ಡೈರೆಕ್ಟರ್​ ಡಾ.ಕೆ.ಇ. ಚಂದ್ರಶೇಖರ್​, ಪ್ರೊ.ಡಾ.ಟಿ.ಜಯಶ್ರೀ, ಪ್ರೊ.ವಿಶಾಲ್​ ರಣಾವರೆ ಹಾಗೂ ಕರಿಯರ್​ ಅಡ್ವಾನ್ಸ್​ಮೆಂಟ್​ ಮತ್ತು ನೆಟ್​ವರ್ಕಿಂಗ್​ ಕಚೇರಿಯ ಅಸೋಸಿಯೇಟ್​ ಡೈರೆಕ್ಟರ್​ ಪ್ರೀತಿ ಜೈನ್​ ಇದ್ದರು.