ಮುಳಬಾಗಿಲು Building ತಾಲೂಕು ಮಲ್ಲನಾಯಕನಹಳ್ಳಿ ಗ್ರಾಪಂ ಕಾರ್ಯಾಲಯದ ನೂತನ ಕಟ್ಟಡವನ್ನು ಶಾಸಕ ಸಮೃದ್ಧಿ ವಿ.ಮಂಜುನಾಥ್ ಲೋಕಾರ್ಪಣೆ ಮಾಡಿದರು. ಪಿಡಿಒ ಎಲ್. ವರದರಾಜ್, ಗ್ರಾಪಂ ಅಧ್ಯಕ್ಷೆ ಪುಷ್ಪಾ ವಿಶ್ವನಾಥ್, ಮಾಜಿ ಅಧ್ಯಕ್ಷ ಬಿ.ಎಸ್. ರಮೇಶ್, ಉಪಾಧ್ಯಕ್ಷೆ ಲಕ್ಷ$್ಮಮ್ಮಗುರಪ್ಪ ಇದ್ದರು.
- ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿಕೆ
ಮುಳಬಾಗಿಲು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ Building ಯೋಜನೆ ಅದ್ಬುತವಾಗಿದ್ದು, ಉದ್ಯೋಗ ಮತ್ತು ನ್ಯಾಯಯುತ ವೇತನದ ಜತೆಗೆ ಹಿಂದೆ ಇದ್ದ 100 ದಿನಗಳನ್ನು ಈಗ 125 ದಿನಗಳಿಗೆ ಹೆಚ್ಚಿಸಿರುವುದರಿಂದ ಗ್ರಾಮೀಣರಿಗೆ ಅನುಕೂಲ ಜತೆಗೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಪಂ ಕಾರ್ಯಾಲಯದ ನೂತನ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನಗೊಳ್ಳುವುದರಿಂದ 15 ದಿನಗಳಲ್ಲಿ ಡಿಬಿಟಿ ಮೂಲಕ ಫಲಾನುಭವಿಗಳ ವೇತನ ಪಾವತಿ ಬ್ಯಾಂಕುಗಳಿಗೆ ಜಮಾ ಆಗಲಿದೆ. ಆದುದರಿಂದ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ತಮ್ಮ ಹೆಸರುಗಳನ್ನು ಮತ್ತು ಕಾಮಗಾರಿಯ ಬಗ್ಗೆ ನೋಂದಣಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ನೂತನ ಗ್ರಾಪಂ ಕಾರ್ಯಾಲಯವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಿದ್ದು, ಇದರಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ. ಗ್ರಾಪಂ ಕಟ್ಟಡ ನಿಮಾರ್ಣಕ್ಕೆ ನರೇಗಾ ಯೋಜನೆಯಡಿ 20 ಲಕ್ಷ ರೂ., ಗ್ರಾಮ ವಿಕಾಸ ಯೋಜನೆಯಡಿ 31.50 ಲಕ್ಷ ರೂ. ಹಾಗೂ 15ನೇ ಹಣಕಾಸು ಯೋಜನೆಯಡಿ 10 ಲಕ್ಷ ರೂ. ಅನುದಾನದಲ್ಲಿ ಕಟ್ಟಡ ನಿಮಾರ್ಣ ಮಾಡಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಅನುದಾನ ಬಳಸಿಕೊಂಡು ನಿಮಾರ್ಣ ಮಾಡಿರುವುದು ಹೆಮ್ಮೆಯ ವಿಚಾರ ಎಂದರು.
ತಾಪಂ ಇಒ ಎನ್.ವಿ. ಬಾಬು, ತಾಲೂಕು ಆರಾಧನಾ ಸಮಿತಿ ಮಾಜಿ ಅಧ್ಯಕ್ಷ ಎಂ.ವಿ.ಅನಂತ ಪದ್ಮನಾಭರಾವ್, ಮುಖಂಡರಾದ ದೊಮ್ಮಸಂದ್ರ ಡಿ.ವಿ.ರಘುಪತಿ ಗೌಡ, ನಲ್ಲೂರು ವಿ.ರಘುಪತಿ ರೆಡ್ಡಿ, ಎಚ್.ಗೊಲ್ಲಹಳ್ಳಿ ಜಗದೀಶ್, ಪಿಡಿಒ ಎಲ್.ವರದರಾಜ್, ಮಾಜಿ ಉಪಾಧ್ಯಕ್ಷ ಎಂ. ಕುಮಾರ್, ಸದಸ್ಯರಾದ ಜಗನ್ನಾಥ್, ದೊಮ್ಮಸಂದ್ರ ಹರಿ ಇದ್ದರು.