ಚಿತ್ತಾಪುರದ ಚಿತಾವಲಿ ಚೌಕ್ನ ಗೊಬ್ಬೂರ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರವನ್ನು ಪಿಎಲ್ಡಿ ಬ್ಯಾಂಕ್ ಅಧ್ಯ ಭೀಮಣ್ಣ ಸಾಲಿ ಉದ್ಘಾಟಿಸಿದರು. ಆರತಿ ತುಪ್ಪದ, ಮಹ್ಮದ್ ರಸೂಲ್ ಮುಸ್ತಫಾ, ವೀರಣ್ಣ ಸುಲ್ತಾನಪುರ, ರವಿ ಗೊಬ್ಬೂರ, ಮಂಜುನಾಥ ಪೊಲೀಸ್ ಪಾಟೀಲ್ ಇತರರಿದ್ದರು.
- ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅನಿಸಿಕೆ
- ಚಿತ್ತಾಪುರದಲ್ಲಿ ಕೇಂದ್ರ ಉದ್ಘಾಟನೆ
ಚಿತ್ತಾಪುರ: ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಅವರಲ್ಲಿನ ಪ್ರತಿಭೆ ಹೊರತರುವಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯ ಭೀಮಣ್ಣ ಸಾಲಿ ಹೇಳಿದರು.
ಚಿತಾವಲಿ ಚೌಕ್ನ ಗೊಬ್ಬೂರ ಬಡಾವಣೆಯಲ್ಲಿ ಶನಿವಾರ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಅಂಗನವಾಡಿಗಳಲ್ಲಿ ಕೇವಲ ಅರ ಾನವಷ್ಟೇ ಅಲ್ಲದೆ, ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ನೀಡುವ ಕೆಲಸವಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಆರತಿ ತುಪ್ಪದ ಮಾತನಾಡಿ, ಗೊಬ್ಬೂರ ಬಡಾವಣೆ ಜನರ ದೀರ್ಕಾಲದ ಬೇಡಿಕೆಯಾಗಿದ್ದ ಅಂಗನವಾಡಿ ಕೇಂದ್ರ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸುವ ಮೂಲಕ ಸರ್ಕಾರದ ಸೌಲಭ್ಯ ಸದುವಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ಮಹ್ಮದ್ ರಸೂಲ್ ಮುಸ್ತಫಾ, ವೀರಣ್ಣ ಸುಲ್ತಾನಪುರ, ಪ್ರಭು ಹಲಕರ್ಟಿ, ಸುರೇಶ ಗುತ್ತೇದಾರ್, ರವಿ ಗೊಬ್ಬೂರ, ಮಂಜುನಾಥ ಪೊಲೀಸ್ ಪಾಟೀಲ್, ನಾಗರೆಡ್ಡಿ ಗೋಪಸೇನ್, ಮೇಲ್ವಿಚಾರಕಿ ರಮಾಬಾಯಿ ಇತರರಿದ್ದರು. ಶಿಕಿ ಖಮರುನ್ನೀಸಾ ಬೇಗಂ ನಿರೂಪಣೆ ಮಾಡಿದರು. ಮಸ್ತಾನ್ ಪಟೇಲ್ ವಂದಿಸಿದರು.