ಕೆಡಿಪಿ ಸಭೆಗೆ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗಲಿ KDP meeting
- ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿಕೆ
ಮುಳಬಾಗಿಲು: ಎಂಎಲ್ಎ ಗಿರಿ ದೊರೆತಿದೆ ಎಂಬ ಕಾರಣಲ್ಲಿ ಇಲ್ಲಿ ದರ್ಬಾರ್ ಮಾಡಲು ಬಂದಿಲ್ಲ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಯ ಕನಸು ನನ್ನದಾಗಿದೆ. ಆದ್ದರಿಂದ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಲು ಮುಂದಾಗಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು. KDP meeting
ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ಕೋಮುಲ್ ಶಿಬಿರ ಕಚೇರಿಯ ಸಭಾಂಗಣದಲ್ಲಿ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಗತಿ ಪರಿಶೀಲನೆ ಸಭೆಯಿಂದ ಆಯಾ ಇಲಾಖೆಗಳಲ್ಲಿ ಸಮಸ್ಯೆ, ಕುಂದು&ಕೊರತೆ ನಿವಾರಿಸಲು ಮುಕ್ತಚರ್ಚೆ ಮಾಡಲು ಈ ಸಭೆ ಉತ್ತಮವಾಗಿದೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಇಂತಹ ಸಭೆಗಳಿಗೆ ಹಾಜರಾಗಲು ಮುಂದಾಗಬೇಕೆಂದು ಸೂಚಿಸಿದರು.
ಪಶು ಇಲಾಖೆಯಲ್ಲಿ ಖಾಲಿ ಇದ್ದ 7 ಹುದ್ದೆ ಭರ್ತಿ ಮಾಡಲಾಗಿದೆ. ಈ ರೀತಿಯಲ್ಲಿ ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರೆ ಸರ್ಕಾರದ ಗಮನಕ್ಕೆ ತಂದು ಇಲ್ಲಿನ ಸಮಸ್ಯೆ ಪರಿಹರಿಸಲು ಅನುಕೂಲವಾಗುತ್ತದೆ. ತಾಲೂಕಿನಲ್ಲಿ ಪಡಿತರ ನ್ಯಾಯಬೆಲೆ ಅಂಗಡಿಗಳು ತುಂಬಾ ಕೊರತೆ ಇದ್ದವು. ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೊಸದಾಗಿ ತಾಲೂಕಿಗೆ 18 ಪಡಿತರ ಅಂಗಡಿಗಳು ತೆರೆಯಲು ಸಂಬಂಧಿಸಿದ ಸಚಿವರೊಂಗಿದೆ ಮಾತನಾಡಿ ನ್ಯಾಯಬೆಲೆ ಅಂಗಡಿಗಳು ತೆರೆಯಲು ಅನುಕೂಲ ಆಯಿತು ಎಂದರು.
ಮತ್ತೊಬ್ಬರಿಗೆ ಕಿರುಕುಳ ಕೊಡುತ್ತಿದ್ದ ಪಿಡಿಒನನ್ನು ಸಭೆಯಿಂದ ಹೊರಗೆ ಕಳಿಸಲಾಗಿದೆ. ಪಂಚಾಯಿತಿ ಕಚೇರಿ ಹೊರಗಡೆ ಬ್ರೋಕರ್ಗಳನ್ನು ಇಟ್ಟುಕೊಂಡು ತನ್ನ ಮನೆಗೆ ಕಳ್ಳತನಕ್ಕೆ ಕಳುಹಿಸುವುದು ಸರಿಯಲ್ಲ. ಇದರಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಕಡಿವಾಣ ಹಾಕಲು ಕ್ರಮ ಜರುಗಿಸಲಾಗುವುದು ಎಂದರು.