ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರ ನೀಡಿ ಸತ್ಕರಿಸಲಾಯಿತು. ಶ್ರೀ ಸೋಮಶೇಖರ ಶಿವಾಚಾರ್ಯ, ಶರಬಸಪ್ಪ ಸಲಾದಪುರ, ನಟರಾಜ ಬಾದಾಮಿ ಇತರರಿದ್ದರು.
- ಶ್ರೀ ಸೋಮಶೇಖರ ಶಿವಾಚಾರ್ಯರು ಕಳವಳ
- ಚಿತ್ತಾಪುರದಲ್ಲಿ ಮದ್ಯವರ್ಜನ ಶಿಬಿರ ಸಮಾರೋಪ
ಚಿತ್ತಾಪುರ: ಇಂದಿನ ಸಮಾಜದಲ್ಲಿ ಮದ್ಯವ್ಯಸನವು ಮಾನವ ಜೀವನದ ಮೌಲ್ಯಗಳನ್ನು ಕುಗ್ಗಿಸುತ್ತಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.
ಶ್ರೀ ಕಂಬಳೇಶ್ವರ ಮಠದ ಸಭಾಂಗಣದಲ್ಲಿ ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಸೋಮವಾರ ಹಮ್ಮಿಕೊಂಡಿದ್ದ 2051ನೇ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮದ್ಯಪಾನದಿಂದ ಕುಟುಂಬಗಳಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆ, ಆರ್ಥಿಕ ಹಿನ್ನಡೆ ಹಾಗೂ ಸಾಮಾಜಿಕ ಅಸ್ಥಿರತೆ ಉಂಟಾಗುತ್ತದೆ. ಯುವಪೀಳಿಗೆ ಇದರಿಂದ ದೂರವಿರುವುದು ಅತ್ಯಗತ್ಯ ಎಂದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಬಸಪ್ಪ ಸಲಾದಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ಯಪಾನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ, ಕುಟುಂಬ ಹಾಗೂ ಸಮಾಜದ ಸಮಸ್ಯೆಯಾಗಿದೆ. ಮದ್ಯವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಸರ್ಕಾರದೊಂದಿಗೆ ವಿವಿಧ ಸಂಟನೆಗಳು ಕೈಜೋಡಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುತ್ತಿರುವುದು ಶ್ಲಾನೀಯ. ಶಿಬಿರದಲ್ಲಿ ಭಾಗವಹಿಸಿದವರು ತಮ್ಮ ಜೀವನದಲ್ಲಿ ಕಂಡ ಬದಲಾವಣೆಗಳನ್ನು ಇತರರಿಗೂ ತಿಳಿಸಿ ಸಮಾಜ ಪರಿವರ್ತನೆಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ನಟರಾಜ ಬಾದಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮದ್ಯವ್ಯರ್ಜನ ಶಿಬಿರಗಳು ಅನೇಕ ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿವೆ. ವ್ಯಸನಮುಕ್ತ ಜೀವನದ ಮೂಲಕ ಕುಟುಂಬಗಳಲ್ಲಿ ಸಂತೋಷ ಹಾಗೂ ನೆಮ್ಮದಿ ಹೆಚ್ಚುತ್ತಿದೆ. ಯುವಕರು ಮೊಬೈಲ್ ಮತ್ತು ಮದ್ಯದಂತಹ ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮದ್ಯವ್ಯರ್ಜನ ಶಿಬಿರಗಳು ಕೇವಲ ಕೆಲವು ದಿನಗಳ ಕಾರ್ಯಕ್ರಮವಲ್ಲ. ಅದು ವ್ಯಕ್ತಿಯ ಮನೋಬಲ ಹೆಚ್ಚಿಸಿ ಹೊಸ ಬದುಕಿನತ್ತ ಕೊಂಡೊಯ್ಯುವ ಮಹತ್ವದ ಚಳವಳಿಯಾಗಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಯಾದಗಿರಿ ಜಿಲ್ಲಾ ನಿರ್ದೇಶಕ ವಸಂತಗೌಡ ಬಿ., ಶಿಕ ಸಿದ್ದಲಿಂಗ ಬಾಳಿ ಮಾತನಾಡಿದರು. ಪ್ರಮುಖರಾದ ಪ್ರಹ್ಲಾದ್ ವಿಶ್ವಕರ್ಮ, ಅರ್ಚನಾ, ಸೋಮಶೇಖರ ಟೋಕಾಪುರ, ಸಂತೋಷ ಪೂಜಾರಿ ಇತರರಿದ್ದರು.
41 ಶಿಬಿರಾರ್ಥಿಗಳು ಭಾಗವಹಿಸಿ ಮದ್ಯ ತ್ಯಜಿಸಿ ಹೊಸ ಜೀವನದತ್ತ ಹೆಜ್ಜೆ ಹಾಕಿದರು. ಆರೋಗ್ಯ ಸಹಾಯಕ ವೆಂಕಟೇಶ ಅವರು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ನೀಡಿದರು.
ಗೋದಾವರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ತಾಲೂಕು ಯೋಜನಾಧಿಕಾರಿ ಗುರುರಾಜ ಬಿ. ಸ್ವಾಗತಿಸಿದರು. ಜನಜಾಗೃತಿ ವಿಭಾಗದ ಜಿಲ್ಲಾ ಯೋಜನಾಧಿಕಾರಿ ರಾಜೇಶ ಕೆ. ವಂದಿಸಿದರು. ಶಿಬಿರಾಧಿಕಾರಿ ನಾಗೇಂದ್ರ ನಿರೂಪಣೆ ಮಾಡಿದರು.
"
ಧರ್ಮ, ಸಂಸ್ಕಾರ ಮತ್ತು ಆತ್ಮನಿಗ್ರಹದಿಂದ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯವಾಗುತ್ತದೆ. ಮದ್ಯವ್ಯರ್ಜನ ಶಿಬಿರಗಳು ಅನೇಕ ಕುಟುಂಬಗಳಿಗೆ ಹೊಸ ಬದುಕಿನ, ಬೆಳಕು ನೀಡುತ್ತಿವೆ. ಶಿಬಿರಾರ್ಥಿಗಳು ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಜೀವನ ಸಾಗಿಸಬೇಕು.
— > ಶ್ರೀ ಸೋಮಶೇಖರ ಶಿವಾಚಾರ್ಯ, ಕಂಬಳೇಶ್ವರ ಮಠ