ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಗಡಿ ಭಾಗದ ಅಳವಾಯಿ ಗ್ರಾಮದಲ್ಲಿ ಶನಿವಾರ ಪಿಕೆಪಿಎಸ್​ ಸಹಕಾರ ಸಂದ ಅಧ್ಯ ಸುಭಾಷ ಹಾಗೂ & ಉಪಾಧ್ಯಕ್ಷೆ ಸುನೀತಾ ಅವರನ್ನು ಸನ್ಮಾನಿಸಲಾಯಿತು. ಪ್ರವಿಣ ಹಣಮಶೆಟ್ಟೆ, ಗೋಪಾಳ ಸೂರ್ಯವಂಶಿ, ಗುಂಡಪ್ಪ ಗಂದಗೆ ಇತರರಿದ್ದರು. 
ರಾಜ್ಯ

ಅಳವಾಯಿ ಪಿಕೆಪಿಎಸ್​ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹುಲಸೂರು: ಮಹಾರಾಷ್ಟ್ರ ಗಡಿಭಾಗದ ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದ ಪಿಕೆಪಿಎಸ್​ ಸಹಕಾರ ಸಂಘದ ಅಧ್ಯಕ್ಷರಾಗಿ ಸುಭಾಷ ಲಾಂಗಡೆ ಹಾಗೂ ಉಪಾಧ್ಯಕ್ಷರಾಗಿ ಸನೀತಾ ತಾನಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂದ ಅವಧಿ ಪೂರ್ಣಗೊಂಡಿದ್ದರಿಂದ ಕಳೆದ ಏಪ್ರಿಲ್​ನಲ್ಲಿ 12 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದು ಸುಭಾಷ ಲಾಂಡಗೆ ಪೆನಾಲ್​ನ 9 ಜನ ಸೇರಿ ಮೂವರು ನಿರ್ದೇಶಕರು ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅದ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸೈಯದ್​ ಖುದ್ದುಸ್​ ಘೋಷಿಸಿದರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾಂಗ್ರೆಸ್​ ಪ್ರಮುಖರಾದ ಪ್ರವಿಣ ಹಮಶೆಟ್ಟೆ, ಗುಂಡಪ್ಪ ಗಂದಗೆ, ಗೋಪಾಳ ಸೂರ್ಯವಂಶಿ, ಸಂದ ಸಿಇಒ ಶಿವಶಂಕರ ತಳವಾಡೆ, ನೂತನ ನಿರ್ದೇಶಕರಾದ ಚತುರ್ಭುಜ ನಾಮದೇವ, ಭಜರಂಗ ವೆಂಕಟರಾವ, ದೇವಿದಾಸ ಪ್ರಹ್ಲಾದ, ಹಣಮಂತ ಪಾಂಡು, ಭಾಮಾಬಾಯಿ ಬಾಬುರಾವ, ಧನಾಜಿ ಝಟಿಂಗರಾವ, ಖಂಡು ರಾಮಚಂದ್ರ, ಹುಸೇನಸಾಬ್​ ಮೈನೋದ್ದಿನ್​, ಭಗವಾನ ಮಾಣಿಕಪ್ಪ, ಅಮೂಲ ಅಣ್ಣಾರಾವ, ಗ್ರಾಮದ ಮುಖಂಡರಾದ ಶರದ ಗಂದಗೆ, ಬಂಡು ಲಾಂಡ ಗೆ, ಸಂದೀಪ ಕಾಸಾರ, ಖಂಡು ಕಾಸಾರ, ಲಕ್ಷ್ಮಣ ಬಿರಾದಾರ, ವಿಜಯ ಕುಮಾರ ಸೂರ್ಯವಂಶಿ ಇತರರಿದ್ದರು.