Akshaya Tritiya 
ರಾಜ್ಯ

ಅಕ್ಷಯ ತೃತೀಯಕ್ಕಿಲ್ಲ ಚಿನ್ನದ ಬೆಲೆ ಏರಿಕೆ ಆತಂಕ; ಕ್ವಿಕ್ ಕಾಮರ್ಸ್‌ನಲ್ಲಿ ಸಿಗತ್ತೆ ವಿಶೇಷ ಆಫರ್..Gold Offer

ಪ್ರಮುಖ ಮುಖ್ಯಾಂಶಗಳು

  • ಶೇ.5 ರಷ್ಟು ಮುಂಗಡ ನೀಡಿ ಚಿನ್ನ ಬುಕ್ ಮಾಡಲು ಅವಕಾಶ
  • ಬೆಲೆ ಏರಿಳಿತದ ಚಿಂತೆಯಿಲ್ಲದೆ ಅಕ್ಷಯ ತೃತೀಯ ಆಚರಿಸಿ
  • ಇನ್‌ಸ್ಟಾಮಾರ್ಟ್‌ನಿಂದ ಕಡಿಮೆ ಬೆಲೆಗೆ ಚಿನ್ನದ ಖಾತರಿ, ಜೊತೆಗೆ ಉಚಿತ ಬೆಳ್ಳಿ ನಾಣ್ಯ
ಬೆಂಗಳೂರು : ಮುಂಬರುವ ಅಕ್ಷಯ ತೃತೀಯ ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಜನಪ್ರಿಯ ಕ್ವಿಕ್ ಕಾಮರ್ಸ್ ವೇದಿಕೆ 'ಇನ್‌ಸ್ಟಾಮಾರ್ಟ್' ಹಾಗೂ ಪ್ರತಿಷ್ಠಿತ ಆಭರಣ ಮಳಿಗೆ 'ಕಲ್ಯಾಣ್ ಜ್ಯೂವೆಲರ್ಸ್‌' ಒಗ್ಗೂಡಿ ವಿನೂತನ ಸೌಲಭ್ಯವೊಂದನ್ನು ಪರಿಚಯಿಸಿವೆ.
'ಗೋಲ್ಡ್ ರೇಟ್ ಪ್ರೊಟೆಕ್ಷನ್' ಹೆಸರಿನ ಈ ಯೋಜನೆಯಡಿ ಗ್ರಾಹಕರು ಇಂದಿನ ಬೆಲೆಗೆ ಚಿನ್ನವನ್ನು ಮುಂಗಡವಾಗಿ ಕಾಯ್ದಿರಿಸಿ ಹಬ್ಬದ ದಿನದಂದು ಖರೀದಿಸಬಹುದು. ಕಡಿಮೆ ಬೆಲೆಯ ಗ್ಯಾರಂಟಿಯನ್ನು ಈ ಯೋಜನೆ ನೀಡುತ್ತದೆ.
ಏನಿದು ಗೋಲ್ಡ್ ರೇಟ್ ಪ್ರೊಟೆಕ್ಷನ್?
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದರಿಂದ ಮುಂದೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಬೇಡಿಕೆಯ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಳಿತಗಳಾಗುವುದು ಸಹಜ. ಈ ಆತಂಕವನ್ನು ನಿವಾರಿಸಲು, ಇನ್‌ಸ್ಟಾಮಾರ್ಟ್ ಮೂಲಕ ಕಲ್ಯಾಣ್ ಜ್ಯೂವೆಲರ್ಸ್‌ನ ಬಿಐಎಸ್‌ ಹಾಲ್‌ಮಾರ್ಕ್ ಉಳ್ಳ ಚಿನ್ನದ ನಾಣ್ಯಗಳನ್ನು ಮುಂಗಡವಾಗಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬುಕ್‌ ಮಾಡುವುದು ಹೇಗೆ?

ಗ್ರಾಹಕರು ಏಪ್ರಿಲ್ 10 ರಿಂದ 16, 2026ರ ಒಳಗೆ ಇನ್‌ಸ್ಟಾಮಾರ್ಟ್ ಆಪ್‌ ಬಳಸಿ ಕಲ್ಯಾಣ್ ಜ್ಯೂವೆಲರ್ಸ್‌ ಚಿನ್ನದ ನಾಣ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೇವಲ ಶೇ. 5ರಷ್ಟು ಮುಂಗಡ ಹಣವನ್ನು (0.5 ಗ್ರಾಂ ನಾಣ್ಯಕ್ಕೆ 500 ರೂ.ನಿಂದ ಆರಂಭ) ಪಾವತಿಸುವ ಮೂಲಕ ಚಿನ್ನದ ಬೆಲೆಯನ್ನು ಲಾಕ್ ಮಾಡಬಹುದು.
ನಂತರ ಅಕ್ಷಯ ತೃತೀಯದ ದಿನವಾದ ಏಪ್ರಿಲ್ 19ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯೊಳಗೆ ಉಳಿದ ಹಣವನ್ನು ಪಾವತಿಸಿ ಖರೀದಿಯನ್ನು ಪೂರ್ಣಗೊಳಿಸಬೇಕು. ವಿಶೇಷವೆಂದರೆ, ಗ್ರಾಹಕರು ಮುಂಗಡ ಕಾಯ್ದಿರಿಸಿದ ದಿನದ ಬೆಲೆ ಅಥವಾ ಏಪ್ರಿಲ್ 19ರ ಮಾರುಕಟ್ಟೆ ಬೆಲೆ — ಇವೆರಡರಲ್ಲಿ ಯಾವುದು ಕಡಿಮೆಯಿರುತ್ತದೆಯೋ ಅದೇ ಬೆಲೆಗೆ ಚಿನ್ನವನ್ನು ನೀಡಲಾಗುತ್ತದೆ. ಇದರ ಜೊತೆಗೆ, ಈ ಯೋಜನೆಯಡಿ ಮುಂಗಡ ಬುಕ್ಕಿಂಗ್ ಮಾಡಿದ ಪ್ರತಿಯೊಬ್ಬರಿಗೂ ಉಚಿತ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಕಳೆದ ವರ್ಷದ ಅಕ್ಷಯ ತೃತೀಯದಂದು ಇನ್‌ಸ್ಟಾಮಾರ್ಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ಮಾರಾಟವು ಶೇ. 500ಕ್ಕೂ ಹೆಚ್ಚು ಪ್ರಗತಿ ಕಂಡಿತ್ತು. ಕ್ವಿಕ್ ಕಾಮರ್ಸ್ ವೇದಿಕೆಗಳು ಕೇವಲ ದಿನಸಿ ವಸ್ತುಗಳಿಗೆ ಮಾತ್ರ ಸೀಮಿತವಾಗದೆ, ಹಬ್ಬದ ವಿಶೇಷ ಖರೀದಿಗಳಿಗೂ ವಿಶ್ವಾಸಾರ್ಹ ತಾಣವಾಗಿ ರೂಪುಗೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ಸೇವೆ ನೀಡುತ್ತಿರುವ ಇನ್‌ಸ್ಟಾಮಾರ್ಟ್, ವಿಶ್ವದಾದ್ಯಂತ 400ಕ್ಕೂ ಹೆಚ್ಚು ಶೋರೂಮ್‌ಗಳನ್ನು ಹೊಂದಿರುವ ಕಲ್ಯಾಣ್ ಜ್ಯೂವೆಲರ್ಸ್ ಜೊತೆ ಕೈಜೋಡಿಸಿರುವುದು ಆನ್‌ಲೈನ್ ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ,(ಏಜೆನ್ಸೀಸ್​).