ಬಸವಕಲ್ಯಾಣ ತಾಲೂಕಿನ ಯರಬಾಗದ ನೀಲಗಂಗಾ ಆಯುರ್ವೇದಿಕ ಮೆಡಿಕಲ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಾನೂ ಅಕ್ಕ ಪಡೆ ಮಹಿಳೆಯರ ರಕ್ಷಣೆ ನಮ್ಮ ಆದ್ಯತೆ ಜಾಗೃತಿ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಅಕ್ಕಪಡೆ ಕರ್ನಾಟಕ ರಾಜ್ಯ ಸಂಯೋಜಕಿ ಶೈನಿ ಪ್ರದಿಪ ಗುಂಟಿ ಉದ್ಘಾಟಿಸಿದರು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಡಾ.ಅನಿತಾ ಮಹಾಜನ, ವಿಜಯಲಕ್ಷ್ಮೀ ಹೂಗಾರ ಇತರರಿದ್ದರು.
- ರಾಜ್ಯ ಸಂಯೋಜಕಿ ಶೈನಿ ಗುಂಟಿ ಅಭಯ
- ಯರಬಾಗದಲ್ಲಿ ಜಾಗೃತಿ ಕಾರ್ಯಕ್ರಮ
ಬಸವಕಲ್ಯಾಣ: ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗಾಗಿ ಅಕ್ಕಪಡೆ ಸದಾ ಸಿದ್ಧ. ಬಸ್ ನಿಲ್ದಾಣ, ಶಾಲಾ-ಕಾಲೇಜು ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಕಿರಕುಳ ಅಥವಾ ತೊಂದರೆ ಉಂಟಾದಲ್ಲಿ ತಕ್ಷಣ ಅಕ್ಕಪಡೆಗೆ ಮಾಹಿತಿ ನೀಡಿದರೆ ತುರ್ತು ನೆರವು ನೀಡಲು ಸಂಸ್ಥೆ ಬದ್ಧವಿದೆ ಎಂದು ಅಕ್ಕಪಡೆ ರಾಜ್ಯ ಸಂಯೋಜಕಿ ಶೈನಿ ಪ್ರದಿಪ ಗುಂಟಿ ಭರವಸೆ ನೀಡಿದರು.
ಯರಬಾಗ ಗ್ರಾಮದ ನೀಲಗಂಗಾ ಆಯುರ್ವೇದಿಕ ಮೆಡಿಕಲ್ ಕಾಲೇಜು ಆವರಣದಲ್ಲಿ ಬೀದರ್ ಜಿಲ್ಲಾ ಪೊಲೀಸ್, ಕರ್ನಾಟಕ ರೂರಲ್ ಆ್ಯಂಡ್ ಅರ್ಬನ್ ಡೆವಲಪಮೆಂಟ್ ಸೊಸೈಟಿ ಬೀದರ್ ಹಾಗೂ ನೀಲಗಂಗಾ ಎಜುಕೇಷನಲ್ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನಾನು ಅಕ್ಕ ಪಡೆ- ಮಹಿಳೆಯರ ರಕ್ಷಣೆ ನಮ್ಮ ಆದ್ಯತೆ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕ್ರಮದ ವ್ಯವಸ್ಥೆ ಮಾಡಿರುವ ನೀಲಗಂಗಾ ಆಯುರ್ವೇದ ಕಾಲೇಜು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೆ ಸಾರ್ವಜನಿಕ ಸ್ಥಳದಲ್ಲಿ ಚುಡಾಯಿಸಿದರೆ ಮಾಹಿತಿ ಅಕ್ಕ ಪಡೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಸೌಲಭ್ಯ ಇರದಿದ್ದರೂ ಅಕ್ಕ ಪಡೆಗೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.
ಬೀದರ್, ಬಸವಕಲ್ಯಾಣದಲ್ಲಿ ಅಕ್ಕ ಪಡೆಯ ಕಾರ್ಯವ್ಯಾಪ್ತಿ ಹೆಚ್ಚಿದೆ. ವಾಹನಗಳನ್ನು ಒದಗಿಸಲಾಗಿದೆ. ಎರಡು ವರ್ಷಗಳ ಹಿಂದೆ ಆರಂಭವಾದ ಅಕ್ಕ ಪಡೆಯ ಕಾರ್ಯವ್ಯಾಪ್ತಿ ಇಡೀ ಕರ್ನಾಟಕದಲ್ಲಿ ವ್ಯಾಪಿಸಿದೆ. ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಅಕ್ಕ ಪಡೆಗಳಿವೆ. ಮಹಿಳೆಯರ ಸುರಕ್ಷತೆ, ಸ್ವಯಂರಕ್ಷಣೆ ಮತ್ತು ಧೈರ್ಯದ ಪ್ರತಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಕಪಡೆಗೆ ಸಿಕ್ಕಿರುವ ಈ ಗೌ ರವ ರಾಜ್ಯದ ಹೆಣ್ಣುಮಕ್ಕಳಿಗೆ ಹೆಮ್ಮೆಯ ವಿಷಯವಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕವಾಯಿತು ಪ್ರದರ್ಶನಕ್ಕೆ ಸರ್ಕಾರದಿಂದ ಅಕ್ಕ ಪಡೆಗೆ ಆಹ್ವಾನ ನೀಡಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ತ್ರಿಪುರಾಂತ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಅಕ್ಕ ಪಡೆ ಒಂದು ದೊಡ್ಡ ಶಕ್ತಿ. ಮಹಿಳೆಯರಲ್ಲಿ ಧೈರ್ಯ ತುಂಬುತ್ತದೆ ಎಂದು ಹೇಳಿದರು.
ನೀಲಗಂಗಾ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಶಂಕರಗೌಡ ಮಾತನಾಡಿ, ಅಕ್ಕ ಪಡೆ ಮಹಿಳೆಯರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಆರೋಗ್ಯದ ಮತ್ತು ಕಾನೂನಿನ ಅರಿವು ಎಲ್ಲರಿಗೂ ಬೇಕು. ಈಗಲೂ ಮಹಿಳೆಯರು ಪ್ರತಿಯೊಂದು ಕೆಲಸಕ್ಕೆ ತಂದೆ, ಅಣ್ಣ, ತಮ್ಮಂದಿರನ್ನು ಅವಲಂಬಿಸಿರುತ್ತೇವೆ. ತೊಂದರೆ ಇದ್ದಾಗ ಅಕ್ಕ ಪಡೆವರನ್ನು ಸಂಪರ್ಕಿಸಬೇಕು ಎಂದರು.
ನೀಲಗಂಗಾ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಡಾ.ಅನಿತಾ ಮಹಾಜನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ವಿಜಯಲಕ್ಷಿ$್ಮ ಮಹಾಜನ್ ವಿಶೇಷ ಉಪನ್ಯಾಸ ನೀಡಿದರು. ಸೂಸೈಟಿ ಕಾರ್ಯದರ್ಶಿ ಶಿವು ಮಠಪತಿ ಸ್ವಾಗತಿಸಿದರು. ಡಾ.ರಚನಾ ಹಾಗೂ ಡಾ.ವಿಜಯಲಕ್ಷಿ$್ಮ ನಿರೂಪಣೆ ಮಾಡಿದರು.
ಕರಬಸಯ್ಯ ಮಠಪತಿ, ಪಿಎಸ್ಐ ಸುವರ್ಣ ಮಲಶೆಟ್ಟಿ, ಗಾಯಕಿ ಶಿವಾನಿ ಶಿವದಾಸ ಸ್ವಾಮಿ, ಸಿಡಿಪಿಒ ಶಿವಪ್ರಕಾಶ ಹಿರೇಮಠ, ಕರಬಸಯ್ಯ ಮಠಪತಿ ಇತರರಿದ್ದರು. ಗಾಯಕಿ ಶಿವಾನಿ ಶಿವದಾಸ ಸ್ವಾಮಿ, ಪಿಡಿಒ ಸುಲೋಚನಾ ಬಂಡೆ ಹಾಗೂ ಕವಿತಾ ಅವರನ್ನು ಮಹಿಳಾ ಸಾಧಕಿಯರು ಎಂದು ಗುರುತಿಸಿ ಸನ್ಮಾನಿಸಲಾಯಿತು. ಉಚಿತ ಆರೋಗ್ಯ ತಪಸಣಾ ಶಿಬಿರದಲ್ಲಿ ಸುಮಾರು 500 ಜನರಿಗೆ ತಪಾಸಣೆ ನಡೆಸಲಾಯತು. ಅಕ್ಕಪಡೆ ತಂಡದ ಸದಸ್ಯೆಯರು ನಡೆಸಿಕೊಟ್ಟ ಆಕರ್ಷಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು
"
ನೀಲಗಂಗಾ ಆಯುರ್ವೇದ ಕಾಲೇಜು ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿರುವುದು ಶ್ಲಾ ಘನೀಯ.
— > ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಗವಿಮಠ
ನೀಲಗಂಗಾ ಕಾಲೇಜಿನಿಂದ ಅಕ್ಕ ಪಡೆಯವರ ಆರೋಗ್ಯ ತಪಾಸಣೆ ಮತ್ತು ರೋಗ ಗುಣಪಡಿಸುವುದಕ್ಕಾಗಿ ಆಯುರ್ವೇದ ಚಿಕಿತ್ಸೆ ಕೊಡುವುದಕ್ಕೆ ಸಿದ್ಧರಿದ್ದೇವೆ. ಮಾನಸಿಕವಾಗಿ ಅವರು ಬಲವಂತರಾಗಲು ಧ್ಯಾನ ಹಾಗೂ ವಿವಿಧ ರೀತಿಯ ಸಾಧನೆ ಕಲಿಸಿಕೊಡುತ್ತೇವೆ.
ಅಧ್ಯೆ ನೀಲಗಂಗಾ ಎಜುಕೇಷನಲ್ ಟ್ರಸ್ಟ್