- ದಕ ಸಂಘದ ಮಾಜಿ ಅಧ್ಯಕ್ಷ ಡಾ.ಪೆರ್ಲ ಹೇಳಿಕೆ
- ಕಲಬುರಗಿ ವಿಮಾನ ನಿಲ್ದಾಣದ ತ್ರಿಶಂಕು ಸ್ಥಿತಿ
ಕಲಬುರಗಿ: ಕೇಂದ್ರ ಸರ್ಕಾರ ಇತ್ತೀಚಿಗೆ ಪರಿಸ್ಕೃತ ಉಡಾನ್ ಯೋಜನೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಸೇರಿಸುವ ಪ್ರಸ್ತಾಪ ಇನ್ನೂ ಕೈಗೂಡಲಿಲ್ಲ. ಮಾರ್ಚ್ 23ರಕ್ಕೂ ಮುನ್ನ ವಿಮಾನ ಸಂಸ್ಥೆಗಳು ಸಂಚಾರದ ವೇಳಾಪಟ್ಟಿ ಹಾಗೂ ಮಾರ್ಗ ಸೂಚಿಯನ್ನು ಸರ್ಕಾರಕ್ಕೆ ಒದಗಿಸಬೇಕೆನ್ನುವ ರಾಜ್ಯ ಸರ್ಕಾರದ ಗಡುವು ಮುಗಿದರೂ ಯಾವುದೇ ಪ್ರಗತಿ ಕಾಣದಿರುವುದು ಅತ್ಯಂತ ದುರದೃಷ್ಟಕರ ಎಂದು ದಣ ಕನ್ನಡ ಸಂದ ಮಾಜಿ ಅಧ್ಯಕ್ಷ ಡಾ.ಸದಾನಂದ ಪೆರ್ಲ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಿಂದ ಸಂಚರಿಸುತ್ತಿದ್ದ ವಿಮಾನ ಸೇವೆ ಕಳೆದ ಅಕ್ಟೋಬರ್ 19ರಿಂದ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಸ್ಥಳಿಯ ಮಂತ್ರಿಗಳು, ಶಾಸಕರು, ಗಣ್ಯರು ಈಗ ಬೀದರ್ ವಿಮಾನ ಸೇವೆ ಬಳಸುತ್ತಿದ್ದು ಸಾಮಾನ್ಯರು ಮಾತ್ರ ವಿಮಾನ ಸಂಚಾರವಿಲ್ಲದೆ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರದ ನೇತೃತ್ವದಲ್ಲಿ ಇತ್ತೀಚಿಗೆ ವಿಮಾನ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿ ಮಾ. 23ರೊಳಗೆ ವಿಮಾನ ಸಂಚಾರದ ವೇಳೆ ಮತ್ತು ಮಾರ್ಗ ಸೂಚಿ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಹತ್ತು ದಿನ ಕಳೆದಿವೆ. ಆದರೆ ವಿಮಾನ ಸಂಸ್ಥೆಗಳು ಸರ್ಕಾರದ ನಿರ್ದೇಶನ ಕಡೆಗಣಿಸಿದೆ. ರಾಜ್ಯ ಸರ್ಕಾರ ತಣ ಮಧ್ಯ ಪ್ರವೇಶ ಮಾಡಿ ಆಸಕ್ತಿ ಹೊಂದಿದ ವಿಮಾನ ಸಂಸ್ಥೆಗಳ ಸಭೆ ನಡೆಸಿ ವಿಮಾನ ಸೇವೆ ಆರಂಭಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಡಾ.ಪೆರ್ಲ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಮಾರ್ಚ್ 25ರಂದು 28,840 ಕೋಟಿ ರೂ.ಮೊತ್ತದೊಂದಿಗೆ ಎರಡನೇ ಹಂತದ ಉಡಾನ್ ಯೋಜನೆ ಪ್ರಕಟ ಮಾಡಿದ್ದು, ಇದರಲ್ಲಿ ಕಲಬುರಗಿ ವಿಮಾನ ನಿಲ್ದಾಣ ಪರಿಗಣಿಸುವುದಾಗಿ ರಾಜ್ಯಸಭೆಯಲ್ಲಿ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳಿಧರ ಮೋಹೋಲ್ ತಿಳಿಸಿರುವುದು ಆಶಾದಾಯಕ ಬೆಳವಣಿಗೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ನಿರ್ದೇಶನ ಹೊರಡಿಸದಿರುವುದು ಈ ಭಾಗದ ಜನರಿಗೆ ತೀವ್ರ ಬೇಸರವನ್ನುಂಟು ಮಾಡಿದೆ.
ಕಲ್ಯಾಣ ಕರ್ನಾಟಕ ಭಾಗದ ಸಚಿವರೊಂದಿಗೆ ರಾಜ್ಯದ ಬೃಹತ್ ಕೈಗಾರಿಕಾ ಸಚಿವರೂ ಆದ ಮೂಲಸೌಕರ್ಯಗಳ ಅಭಿವೃದ್ಧಿ ಖಾತೆ ಸಚಿವ ಎಂ.ಬಿ.ಪಾಟೀಲ್ ವಿಮಾನ ಸಂಸ್ಥೆಗಳ ಮುಖ್ಯಸ್ಥರನ್ನು ಕರೆಯಿಸಿ ಇತ್ತೀಚೆಗೆ ಮಾತುಕತೆ ನಡೆಸಿದ್ದರು. ವಿಮಾನ ಸಂಸ್ಥೆಗಳಿಗೆ ಮಾರ್ಗ ಹಾಗೂ ಸಮಯ ಸೂಚಿ ನಿಗದಿಪಡಿಸುವಂತೆ ಸೂಚನೆ ನೀಡಿದ್ದರೂ ಸಕಾರಾತ್ಮಕ ಸ್ಪಂದನೆ ನೀಡದಿರುವುದು ಈ ಭಾಗದ ರ್ನಿಲಕ್ಕೆ ಜ್ವಲಂತ ಸಾ. ವಿಮಾನ ಸೇವೆ ಸ್ಥಗಿತಗೊಂಡ ಕಾರಣದಿಂದ ಕಲ್ಯಾಣಕ ಕರ್ನಾಟಕ ಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ, ಆರೋಗ್ಯ ,ಶಿಣ ಮತ್ತು ಆರ್ಥಿಕ ಪ್ರಗತಿಗೆ ತೀವ್ರ ತೊಂದರೆಯಾಗಿದ್ದು ಉಡಾನ್ ಯೋಜನೆ ಪುನರಾರಂಭಗೊಂಡರೆ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಪೂರಕವಾಗಲಿದೆ. ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದನೆ ನೀಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿಯಿಂದ ಬೆಂಗಳೂರು ಮಂಗಳೂರು, ಮುಂಬೈ, ದೆಹಲಿ ಹಾಗೂ ತಿರುಪತಿ, ಅಹಮದಾಬಾದ್ ಕಡೆಗೆ ಸಂಚಾರ ಪ್ರಾರಂಭಿಸುವಂತೆ ಪ್ರಯಾಣಿಕರಿಂದ ತೀವ್ರ ಒತ್ತಾಯ ಕೇಳಿ ಬರುತ್ತಿದೆ. ವಿಮಾನ ಸಂಸ್ಥೆಗಳು ಪ್ರಯಾಣಿಕರ ಬೇಡಿಕೆ ಈಡೇರಿಸಲು ಮುಂದೆ ಬರಲು ಸರ್ಕಾರಗಳು ಒತ್ತಡ ಹೇರಬೇಕು.
ಮಾಜಿ ಅಧ್ಯಕ್ಷ, ದಕ್ಷಿಣ ಕನ್ನಡ ಸಂಘ, ಕಲಬುರಗಿ.