ಔರಾದ್ ತಾಲೂಕಿನ ಎಕಲಾರ ಪ್ರೌಢಶಾಲೆಯ ಮೂವರು ಮಕ್ಕಳನ್ನು ಹೈದರಾಬಾದ್ನಿಂದ ತಿರುಪತಿಗೆ ವಿಮಾನದಲ್ಲಿ ಕರೆದೊಯ್ಯುತ್ತಿರುವುದು. ಶಿಕ ಸತೀಶ ಮಜಗೆ
- ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ಎಕಲಾರ ಶಾಲೆ
ಔರಾದ್(ಬೀದರ್): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಕಲಾರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳನ್ನು ಹೈದರಾಬಾದ್ನಿಂದ ತಿರುಪತಿಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಇಂಗ್ಲಿಷ್ ವಿಷಯದಲ್ಲಿ 95ಕ್ಕಿಂತ ಹೆಚ್ಚು ಅಂಕ ಪಡೆದ ಓಂಕಾರ ಕಲ್ಲಪ್ಪ ರಾಮಗೊಂಡ (97 ಅಂಕ), ಭಾಗ್ಯವಂತಿ ಅಶೋಕ ಬಿರಾದಾರ (96) ಹಾಗೂ ಅಂಕಿತಾ ಸಿದ್ದಪ್ಪ ದೇಶಟ್ಟೆ (96) ಭಾನುವಾರ ಹೈದರಾಬಾದ್ನಿಂದ ತಿರುಪತಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಶಿಕ ಸತೀಶ ಮಜಗೆ, ಮಕ್ಕಳಲ್ಲಿ ಓದಿನ ಕುರಿತು ಆಸಕ್ತಿ ಮತ್ತು ಸಾಧನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಹಿಂದೆಯೇ ವಿಮಾನಯಾನ ಕುರಿತು ಮಾಹಿತಿ ನೀಡಿದ್ದರು. ಗ್ರಾಮೀಣ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಮೂಡಿಸುವುದಲ್ಲದೇ ಹೆಚ್ಚಿನ ಅಂಕ ಪಡೆಯಲು ಇಂತಹ ಪ್ರಯೋಗಗಳು ಪ್ರೇರಣೆಯಾಗಿದೆ. ಜೀವನದಲ್ಲಿ ವಿಮಾನಯಾನ ಕನಸು ನನಸಾಗುತ್ತಿರುವುದು ಖುಷಿ ನೀಡುತ್ತಿದೆ ಎಂದು ಮಕ್ಕಳು ಸಂತಸ ಹಂಚಿಕೊಂಡರು.
"
ಕೋಟ್ಶಾಲೆಗೆ ವಿವಿಧ ಗ್ರಾಮಗಳಿಂದ ಮಕ್ಕಳು ಬರುತ್ತಾರೆ. ಅವರಲ್ಲಿ ಆರೋಗ್ಯಕರ ಸ್ಪರ್ಧೆ ಬೆಳೆಸುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಮಾನದಲ್ಲಿ ಕರೆದೊಯ್ಯುವ ನಿಟ್ಟಿನಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಂತೆ ಅತಿ ಹೆಚ್ಚು ಅಂಕ ಪಡೆದ ಮೂವರು ಮಕ್ಕಳು ಅರ್ಹರಾಗಿದ್ದು, ಪಾಲಕರ ಅನುಮತಿ ಪಡೆದು ನಾನು ಕರೆದೊಯ್ಯುತ್ತಿರುವೆ.
— > ಸತೀಶ ಮಜಗೆ ಶಿಕ್ಷಕ