ಐನಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರಿಗೆ ಚಿಂಚೋಳಿ ಮಠಾಧೀಶರು ಮನವಿಪತ್ರ ಸಲ್ಲಿಸಿದರು. ಶ್ರೀ ಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಶ್ರೀ ಸಿದ್ದಲಿಂಗ ಶಿವಾಚಾರ್ಯ, ಶ್ರೀ ಪ್ರಭುಲಿಂಗ ದೇವರು, ಶ್ರೀ ಉಪಮನ್ಯು ಶಿವಾಚಾರ್ಯ, ಶಿವಾನಂದ ಮಾಲಿಪಾಟೀಲ್​, ಗೋಪಾಲ ಎಂ.ಪಿ., ಶರಣಬಸಪ್ಪ ಮಮಶೆಟ್ಟಿ ಇತರರಿದ್ದರು. 
ರಾಜ್ಯ

ಐನಾಪುರ ಏತನೀರಾವರಿ ಕಾಮಗಾರಿ ಆರಂಭಿಸಿ

ಪ್ರಮುಖ ಮುಖ್ಯಾಂಶಗಳು

  • ಚಿಂಚೋಳಿ ಮಠಾಧೀಶರ ಒತ್ತಾಯ
  • ಶ್ರೀ ಸಿಹಿ ಸುದ್ದಿ ಎಂದ ಡಿಸಿ ಐನಾಪುರ ಏತನೀರಾವರಿ ಕಾಮಗಾರಿ ಆರಂಭಿಸಿ
ಕಲಬುರಗಿ: ಚಿಂಚೋಳಿ ತಾಲೂಕಿನ ಐನಾಪುರ ಭಾಗದ ರೈತರ ಎರಡು ದಶಕದ ಹೋರಾಟದ ಫಲವಾಗಿ ಐನಾಪುರ ಏತ ನೀರಾವರಿ ಯೋಜನೆಗೆ ಸರ್ಕಾರ 95 ಕೋಟಿ ರೂ. ಬಿಡುಗಡೆ ಮಾಡಿದ್ದು, ತಕ್ಷಣ ಕಾಮಗಾರಿ ಆರಂಭಿಸಿ ಕೃಷಿಕರಿಗೆ ಅನುವು ಮಾಡಿಕೊಡಬೇಕು ಎಂದು ಕ್ಷೇತ್ರದ ವಿವಿಧ ಮಠಾಧೀಶರು ಮತ್ತು ಮುಖಂಡರ ನಿಯೋಗ ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.
ಭರತನೂರು ಶ್ರೀ ಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು, ಐನಾಪುರ ಏತ ನೀರಾವರಿ ಹೋರಾಟ ಸಮಿತಿ ಮುಖಂಡರು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಭೇಟಿ ಮಾಡಿ ಹಣ ಬಿಡುಗಡೆಯಾದರೂ ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಬೇಗ ಕೆಲಸ ಶುರು ಮಾಡಿ ಎಂದು ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಡಿಸಿ, ಶ್ರೀವೇ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದರು ಎಂದು ಪತ್ರಕರ್ತರಿಗೆ ಶ್ರೀ ಗುರುನಂಜೇಶ್ವರ ಮಹಾಸ್ವಾಮೀಜಿ ತಿಳಿಸಿದರು.
ರೈತರು ಕೃಷಿಯಲ್ಲಿ ಅಭಿವೃದ್ಧಿಗಿಂತ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಹೆಣ್ಣು ಕೊಡಲು ಯಾರೂ ಮುಂದಾಗುತ್ತಿಲ್ಲ. ಇಂತಹ ಪರಿಸ್ಥಿತಿ ಹೋಗಲಾಡಿಸಲು ಕೃಷಿ ಚಟುವಟಿಕೆಗೆ ಪೂರಕವಾಗುವಂತಹ ಯೋಜನೆ ಜಾರಿಗೊಳಿಸಬೇಕು. ಐನಾಪುರ ಏತನೀರಾವರಿ ತಡ ಮಾಡುತ್ತಿರುವುದೇಕೆ? ಸಮಸ್ಯೆ ಪರಿಹರಿಸಿ ಕಾಮಗಾರಿ ಪ್ರಾರಂಭಿಸಿ ಜಮೀನುಗಳಿಗೆ ನೀರು ಹರಿಸಿದರೆ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಚಂದನಕೇರಾ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು,ಹೊಸಳ್ಳಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಸುಲೇಪೇಟ ಶ್ರೀ ಪ್ರಭುಲಿಂಗ ದೇವರು, ಐನಾಪುರಿನ ಶ್ರೀಉಪಮನ್ಯು ಶಿವಾಚಾರ್ಯರು, ಐನಾಪುರ ಏತ ನೀರಾವರಿ ಹೋರಾಟ ಸಮಿತಿ ಸಂಸ್ಥಾಪಕ ಶಿವಾನಂದ ಮಾಲಿಪಾಟೀಲ್​, ಗೋಪಾಲ ಎಂ.ಪಿ., ಶರಣಬಸಪ್ಪ ಮಮಶೆಟ್ಟಿ, ಧನರಾಜ ಸ್ವಾಮಿ ಇತರರಿದ್ದರು.
"

ಏತ ನೀರಾವರಿ ಅಭಿವೃದ್ಧಿ ಸಮಿತಿಯವರು ಎರಡು ದಶಕಗಳ ನಿರಂತರ ಹೋರಾಟ ಮಾಡಿದ್ದರಿಂದ ಈ ಭಾಗದ ರೈತರ ಅಭಿವೃದ್ಧಿಗೆ ಏತ ನೀರಾವರಿ ಯೋಜನೆ ಮಂಜೂರಾಗಿದೆ. ಕೃಷಿಕರ ಪ್ರಗತಿಯ ಮಹಾದಾಸೆಯಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಈಗ ಕಾಮಗಾರಿ ಆರಂಭಿಸಿ ರೈತರ ಜಮೀನುಗಳಿಗೆ ನೀರುಣಿಸುವ ಕೆಲಸ ಬೇಗನೆ ಸರ್ಕಾರ ಮಾಡಬೇಕು. ನಿಯೋಗಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ. ಆದಷ್ಟು ಬೇಗನೆ ಕಾಮಗಾರಿ ಶುರುವಾಗುವ ವಿಶ್ವಾಸ ಮೂಡಿದೆ.

— > ಶ್ರೀ ಉಪಮನ್ಯು ಶಿವಾಚಾರ್ಯರು ಸಿದ್ದಲಿಂಗೇಶ್ವರ ಮಠ ಐನಾಪುರ