ಮಸ್ಕಿಯಲ್ಲಿ ಶಿರಸ್ತೇದಾರ್ ಗುರುಲಿಂಗಯ್ಯ ಸ್ವಾಮಿಗೆ ತಾಲೂಕು ಏಮ್ಸ್ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಪ್ರಮುಖರಾದ ಶಿವಪ್ರಸಾದ ಕ್ಯಾತ್ನಟ್ಟಿ, ವೀರೇಶ ಹಿರೇಮಠ, ಶಿವರಾಜ ಇತ್ಲಿ, ಬಸವಲಿಂಗಪ್ಪ ಶೆಟ್ಟಿ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಸಿದ್ದಣ್ಣ ಇತರರಿದ್ದರು. 
ರಾಜ್ಯ

ರಾಯಚೂರಿನಲ್ಲೇ ಏಮ್ಸ್ ಸ್ಥಾಪಿಸಲಿ

JAGADEESH KUMBAR
ಮಸ್ಕಿ: ರಾಯಚೂರಿನಲ್ಲೇ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ತಾಲೂಕು ಏಮ್ಸ್ ಹೋರಾಟ ಸಮಿತಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಗುರುಲಿಂಗಯ್ಯ ಸ್ವಾಮಿಗೆ ಮನವಿ ಸಲ್ಲಿಸಿದರು. 
ಹೋರಾಟ ಸಮಿತಿ ಪ್ರಮುಖ ಶಿವಪ್ರಸಾದ ಕ್ಯಾತ್ನಟ್ಟಿ ಮಾತನಾಡಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ 1500 ದಿನಗಳನ್ನು ಪೂರೈಸಿದ್ದು, ಇದೊಂದು ಸುದೀರ್ಘ ಹೋರಾಟವಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಐಐಟಿಯಿಂದ ವಂಚಿತಗೊಂಡ ಈ ಪ್ರದೇಶದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಏಮ್ಸ್ ಮಂಜೂರು ಮಾಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಹಿರೇಮಠ, ಶಿವರಾಜ ಇತ್ಲಿ, ಬಸವಲಿಂಗಪ್ಪ ಶೆಟ್ಟಿ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಲಕ್ಷ್ಮೀನಾರಾಯಣ ಶೆಟ್ಟಿ, ಅಭಿಲಾಷ್ ಇತ್ಲಿ, ಅಮರೇಶ ಬ್ಯಾಳಿ, ಚನ್ನಬಸಪ್ಪ ಮೇಟಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಸೋಮಶೇಖರಯ್ಯ ಸಿರವಾರಮಠ, ನೀಲಕಂಠಪ್ಪ ಗೋನಾಳ, ನಾಗರಾಜ ಕಂಬಾರ, ಕಿರಣ ಸಾನಬಾಳ, ಸಿದ್ದರಾಮಯ್ಯ ಗಡ್ಡಿಮಠ, ಸಿದ್ದಣ್ಣ ಇತರರಿದ್ದರು.