ಕಲಬುರಗಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಛಾವಣಿ ಕುಸಿತ ಖಂಡಿಸಿ, ಗಾಯಾಳು ವಿದ್ಯಾರ್ಥಿನಿಯರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಎಐಡಿಎಸ್ಒ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ತುಳಜಾರಾಮ ಪವಾರ್, ವೆಂಕಟೇಶ ದೇವದುರ್ಗ, ಪ್ರೀತಿ ದೋಡ್ಡಮನಿ, ಸ್ಫೂರ್ತಿ ಗುರಜಲ್ಕರ್, ದೇವರಾಜ್ ರಾಜೋಳ, ರಾಹುಲ್ ಜಾಧವ , ಯುವರಾಜ ರಾಠೋಡ್, ಬಾಬು ಪವಾರ್, ಬೃಂದಾ, ಅನಿತಾ , ಪ್ರೀತಿ , ಕಾವೇರಿ , ಪ್ರೀಯಾ ಇತರರಿದ್ದರು.
- ಸರ್ಕಾರಿ ಪಿ.ಯು. ಕಾಲೇಜು ಛಾವಣಿ ಕುಸಿತ
- ಗಾಯಾಳುಗಳಿಗೆ ಪರಿಹಾರ ನೀಡಲು ಆಗ್ರಹ
ಕಲಬುರಗಿ: ನಗರದ ಏಕೈಕ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಂಭವಿಸಿದ ಛಾವಣಿ ಕುಸಿತದ ದುರಂತ ಖಂಡಿಸಿ, ಗಾಯಗೊಂಡ ವಿದ್ಯಾರ್ಥಿನಿಯರಿಗೆ ತಕ್ಷಣ ಪರಿಹಾರ ನೀಡಲು ಹಾಗೂ ನೂತನ ಕಟ್ಟಡ ನಿರ್ಮಿಸಲು ಆಗ್ರಹಿಸಿ ಎಐಡಿಎಸ್ಒ ಸಂಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸಂಟನೆ ಜಿಲ್ಲಾಧ್ಯಕ್ಷ ತುಳಜಾರಾಮ ಎನ್.ಕೆ ಮಾತನಾಡಿ, ಕಲಬುರಗಿ ಜಿಲ್ಲೆಯಾದ್ಯಂತ ನೂರಾರು ಹಳ್ಳಿಗಳಿಂದ, ಬಡ ರೈತ ಹಾಗೂ ಕಾರ್ಮಿಕ ಕುಟುಂಬದ ಸಾವಿರಾರು ಹೆಣ್ಣುಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಈ ಕಾಲೇಜು ನಂಬಿ ಬರುತ್ತಿದ್ದಾರೆ. ಕಾಲೇಜಿನ ಮೂರನೇ ಮಹಡಿಯಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ತರಗತಿ ನಡೆಯುತ್ತಿದ್ದಾಗ ಛಾವಣಿಯ ಸಿಮೆಂಟ್ ಪದರು ಕುಸಿದು ಐವರು ವಿದ್ಯಾರ್ಥಿನಿಯರು ಗಾಯಗೊಂಡಿರುವುದು ಅತ್ಯಂತ ಆಘಾತಕಾರಿ ಎಂದರು.
ಈ ಟನೆಯ ನಂತರ ವಿದ್ಯಾರ್ಥಿನಿಯರು ಹಾಗೂ ಪೋಷಕರು ಜೀವಭಯದಲ್ಲೇ ಕಾಲೇಜಿಗೆ ಬರುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
ಜಿಲ್ಲೆಯಾದ್ಯಂತ ಬಹುತೇಕ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಬಂದರೆ ಯಾವಾಗ ಕಟ್ಟಡ ಕುಸಿಯುತ್ತದೋ ಎಂಬ ಭೀತಿಯಲ್ಲೇ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಕಟ್ಟಡ, ಸುರಕ್ಷತೆ ಮತ್ತು ಮೂಲ ಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಆಘಾತಕಾರಿ ಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಿ, ಭಯದ ನೆರಳಿನಲ್ಲಿರುವ ವಿದ್ಯಾರ್ಥಿನಿಯರ ಸುರಕ್ಷತೆ ಖಾತ್ರಿಪಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿನಿಯರ ಹಿತರಕ್ಷಣೆಗಾಗಿ ಸಂಟನೆಯು ಜಿಲ್ಲಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೋಡ್ಡಮನಿ, ಸ್ಫೂರ್ತಿ ಗುರಜಲ್ಕರ್, ದೇವರಾಜ್ ರಾಜೋಳ, ರಾಹುಲ್ ಜಾಧವ , ಯುವರಾಜ ರಾಠೋಡ, ಬಾಬು ಪವಾರ, ಬೃಂದಾ, ಅನಿತಾ , ಪ್ರೀತಿ , ಕಾವೇರಿ , ಪ್ರೀಯಾ ಇತರರಿದ್ದರು.
"
ಸರ್ಕಾರ ಗಾಯಗೊಂಡಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ಪರಿಹಾರ ಮಂಜೂರು ಮಾಡಬೇಕು. ಶಿಥಿಲಗೊಂಡಿರುವ ಕಟ್ಟಡ ತಕ್ಷಣ ದುರಸ್ತಿಗೊಳಿಸಿ, ನೂತನ ಕಟ್ಟಡದ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡಬೇಕು.
— ತುಳಜಾರಾಮ ಪವಾರ್, ಅಧ್ಯಕ್ಷ, ಎಐಡಿಎಸ್ಒ ಕಲಬುರಗಿ.