Aid for orphaned children 
ರಾಜ್ಯ

ಅನಾಥ ಮಕ್ಕಳಿಗೆ ನೆರವು

ಕೋಲಾರ ಡೆಸ್ಕ್
ಮುಳಬಾಗಿಲು: ತಂದೆ-&ತಾಯಿ ಕಳೆದುಕೊಂಡ ವೈ.ಕೋಗಿಲೆರು ಗ್ರಾಮದ ಇಬ್ಬರು ಮಕ್ಕಳ ಶಿಕ್ಷಣ, ಆರೋಗ್ಯ, ಪೋಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಆವಣಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿ.ಆದಿನಾರಾಯಣ ಭರವಸೆ ನೀಡಿದರು.
ಆಲಂಗೂರು ಗ್ರಾಪಂ ವ್ಯಾಪ್ತಿಯ ವೈ.ಕೋಗಿಲೆರು ಗ್ರಾಮದ ಸುಬ್ಬಲಕ್ಷ$್ಮಮ್ಮ ಹಾಗೂ ಸುಬ್ರಮಣಿ ದಂಪತಿ ಕೌಟುಂಬಿಕ ಸಮಸ್ಯೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮಕ್ಕಳು ಅನಾಥರಾಗಿದ್ದು, ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತಮಾಡಿದ ಅವರು, ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಪೋಷಣೆಯ ಸಂಪೂರ್ಣ ವೆಚ್ಚವನ್ನು ಕಾಂಗ್ರೆಸ್​ನಿಂದ ಭರಿಸಲಾಗುವುದು. ಜತೆಗೆ ಮನೆ ದುರಸ್ತಿಗೊಳಿಸಿ, ಮುಂದಿನ ದಿನಗಳಲ್ಲಿಯೂ ಅಗತ್ಯ ಸಹಾಯ- ನೀಡಲಾಗುವುದು ಎಂದರು.
ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ ರಾಮಲಿಂಗರೆಡ್ಡಿ, ಮಂಜುನಾಥ್​, ಆಂಜನೇಯರೆಡ್ಡಿ, ಸುಬ್ರಹ್ಮಣಿ, ವೇಣುಗೋಪಾಲ್​, ಶ್ರೀನಿವಾಸ್​, ಕೃಷ್ಣಪ್ಪ, ಸತೀಶ್​, ಅಮರ್​ ಇದ್ದರು.