ಎಸ್‌ಕೆಎಸ್‌ಜೆಟಿಐ ಸರ್ಕಾರಿ ಕಾಲೇಜಿನಲ್ಲಿ ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಉದ್ಘಾಟನೆ
- ಎಸ್‌ಕೆಎಸ್‌ಜೆಟಿಐ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ‘ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ
- ಬೆಂಗಳೂರಿನಲ್ಲಿ ಆರಂಭಿಸಿರುವ ಮೊದಲ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಮೇಘಾಲಯ ಸೇರಿ ಐದು ರಾಜ್ಯಗಳಲ್ಲಿ ಆರಂಭ
- ಎಐ ತರಬೇತಿ ನೀಡಿ ಪ್ರತಿಭೆಗಳನ್ನು ಗುರುತಿಸಿ ತರಬೇತಿ ಕೊಡುವ ಜತೆಗೆ ಉದ್ಯೋಗ ಕಲ್ಪಿಸುವ ಗುರಿ
ಬೆಂಗಳೂರು: ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳ ತಂತ್ರಜ್ಞಾನ ಆಲೋಚನೆ, ಕಲ್ಪನೆ ಹಾಗೂ ಕನಸುಗಳಿಗೆ ಶ್ರೇಷ್ಠತಾ ಕೇಂದ್ರವು ಜೀವ ತುಂಬಲಿದೆ. ಮುಂದಿನ ಮೂರು ವರ್ಷದಲ್ಲಿ 30 ಸಾವಿರ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಎಸ್‌ಕೆಎಸ್‌ಜೆಟಿಐ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ‘ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಮೊದಲ ಕೇಂದ್ರ:
ಮೈಕ್ರೋಸ್‌ಟಾ, 1ಎಂ1ಬಿ ಫೌಂಡೇಶಸ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೈಟಿ ಸ್ಟಾರ್ಟಪ್ ಸಹಯೋಗದಲ್ಲಿ ಶ್ರೇಷ್ಠತಾ ಕೇಂದ್ರ ಆರಂಭಿಸಲಾಗಿದೆ. ಎಐ ತರಬೇತಿ ನೀಡಿ ಪ್ರತಿಭೆಗಳನ್ನು ಗುರುತಿಸಿ ತರಬೇತಿ ಕೊಡುವ ಜತೆಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ.
ಗ್ರೀನ್ ಎನರ್ಜಿ ಮತ್ತು ಪರಿಸರ ಕ್ಷೇತ್ರಗಳನ್ನು ಒಳಗೊಂಡ ಹೊಸ ಆವಿಷ್ಕಾರ ಹಾಗೂ ಕಲಿಕೆಯನ್ನು
ಬೆಂಗಳೂರಿನಲ್ಲಿ ಆರಂಭಿಸಿರುವ ಮೊದಲ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಮೈಕ್ರೋಸ್‌ಟಾ ಸಹಯೋಗದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಮೇಘಾಲಯ ಸೇರಿ ಐದು ರಾಜ್ಯಗಳಲ್ಲಿ ಆರಂಭಿಲಿದೆ ಎಂದು ಹೇಳಿದರು.
ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಹೊಸ ಪರ್ವ ಆರಂಭಗೊಂಡಿದೆ. ಉದ್ಯೋಗ ಆಧಾರಿತ ಶಿಕ್ಷಣ ವ್ಯವಸ್ಥೆ ತರುವ ಭಾಗವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೌಶಲಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಶ್ರೇಷ್ಠತಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ವೃತ್ತಿ ಆಯ್ಕೆ ಹಾಗೂ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಕ್ರೋಸ್‌ಟಾ ಗ್ಲೋಬಲ್ ಮುಖ್ಯಸ್ಥ ಸೋಮಣ್ಣ ಪಾಲಕಂಡ, ಮೈಕ್ರೋಸ್‌ಟಾ ಸಿಎಸ್‌ಆರ್ ಮುಖ್ಯಸ್ಥೆ ಮಂಜು ದಾಸ್ಮಾನ್, ಮೈಕ್ರೋಸ್‌ಟಾ ಹಿರಿಯ ನಿರ್ದೇಶಕಿ ಚಿಂತಾಮಣಿ ಪದ್ಮನಾಭನ್, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬು ಜಿ. ಚೌದರಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಉಪಸ್ಥಿತರಿದ್ದರು.