ಎಐ ಕರಿಯರ್ಸ್‌ AI
ರಾಜ್ಯ

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ‘ಎಐ ಕರಿಯರ್ಸ್‌’ ತರಬೇತಿ: AI skills for girls

ಕೇಂದ್ರದ ಕೌಶಲಾಭಿವೃದ್ಧಿ ಮತ್ತು ನವೋದ್ಯಮ ಸಚಿವಾಲಯದ ಬೆಂಬಲ ಹಾಗೂ ರಾಜ್ಯ ಸರ್ಕಾರದ ಮಾರ್ಗದರ್ಶನದಡಿಯಲ್ಲಿ ಯೋಜನೆ ಆರಂಭಿಸಲಾಗುತ್ತಿದೆ.

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥದ ದರ್ಜೆ ಕಾಲೇಜುಗಳಲ್ಲಿ 5ನೇ ಸೆಮಿಸ್ಟರ್ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗಾಗಿ ‘ಎಐ ಕರಿಯರ್ಸ್‌ ಫಾರ್ ವುಮೆನ್’ ತರಬೇತಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ.

ಕೇಂದ್ರದ ಕೌಶಲಾಭಿವೃದ್ಧಿ ಮತ್ತು ನವೋದ್ಯಮ ಸಚಿವಾಲಯದ ಬೆಂಬಲ ಹಾಗೂ ರಾಜ್ಯ ಸರ್ಕಾರದ ಮಾರ್ಗದರ್ಶನದಡಿಯಲ್ಲಿ ಯೋಜನೆ ಆರಂಭಿಸಲಾಗುತ್ತಿದೆ.

ಕೈಗಾರಿಕಾ ಅವಶ್ಯಕತೆಗಳಿಗೆ ಅನುಗುಣವಾಗಿ ಕಲಿಕೆ, ಮೆಂಟರಿಂಗ್ ಹಾಗೂ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಈ ತರಬೇತಿಯನ್ನು ನೀಡಲಾಗುತ್ತದೆ. ರಾಜ್ಯದಲ್ಲಿ ಎಜುನೆಟ್ ೌಂಡೇಷನ್ 2026-27ನೇ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ತರಬೇತಿಯನ್ನು ನೀಡಲಿದೆ.

ಮೈಕ್ರೋಸ್‌ಟಾ, ಎಸ್‌ಎಪಿ (ಸ್ಯಾಪ್) ಹಾಗೂ ಲಿಂಕ್ಡ್‌ಇನ್ ಸಂಸ್ಥೆಗಳು ಸಹಭಾಗಿತ್ವ ನೀಡಿವೆ. ಆರಂಭದಲ್ಲಿ ಮೈಸೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ 4 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆರಂಭಿಸಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ರಾಜ್ಯಾದ್ಯಂತ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

150 ಮಂದಿಗೆ ಉಚಿತ ತರಬೇತಿ

ಆಯ್ದ ಕಾಲೇಜಿನಿಂದ ಗರಿಷ್ಠ 150 ವಿದ್ಯಾರ್ಥಿನಿಯರಿಗೆ ಅವಕಾಶವಿದ್ದು, 80 ವಿದ್ಯಾರ್ಥಿನಿಯರ ತಂಡಗಳನ್ನು ರೂಪಿಸಿ ತರಬೇತಿ ನೀಡಲಾಗುತ್ತದೆ. ಈ ತರಬೇತಿಯು ಸಂಪೂರ್ಣವಾಗಿ ಆಫ್‌ಲೈನ್ ಕಾರ್ಯಕ್ರಮವಾಗಿದ್ದು, ಒಟ್ಟು 120 ಗಂಟೆ ಅವಧಿಯ ಸರ್ಟಿಫಿಕೇಷನ್ ಕೋರ್ಸ್ ಆಗಿದೆ. ಕೋರ್ಸ್ ವಾಣಿಜ್ಯೇತರ ಚಟುವಟಿಕೆ ಆಗಿದೆ. ಉಚತಿವಾಗಿ ತರಬೇತಿ ನೀಡಲಾಗುತ್ತಿದೆ.

ಪ್ರಾಂಶುಪಾಲರಿಗೆ ಹೊಣೆಗಾರಿಕೆ

ತರಬೇತಿಗೆ ಸಂಬಂಧಪಟ್ಟಂತೆ ಪ್ರತಿ ತಿಂಗಳ ಪ್ರಗತಿ ವರದಿಯನ್ನು ಹಾಗೂ ವಿದ್ಯಾರ್ಥಿಗಳಿಂದ ಪಡೆದುಕೊಂಡ ಹಿಮ್ಮಾಹಿತಿಯನ್ನು ಸಂಬಂಧಪಟ್ಟ ಜಂಟಿ ನಿರ್ದೇಶಕರ ಕಚೇರಿಗೆ ಕಳುಹಿಸುವುದು.

ಸದರಿ ತರಬೇತಿ ಪೂರ್ಣಗೊಂಡ ನಂತರ ಕಾರ್ಯಕ್ರಮದ ಅನುಷ್ಠಾನದ ಕುರಿತು ಸಮಗ್ರ ವರದಿಯನ್ನು ಸಲ್ಲಿಸುವುದು. ವಿದ್ಯಾರ್ಥಿನಿಯರು ಪ್ರಮಾಣಪತ್ರ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು.

ಹಾಗೆಯೇ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ತರಬೇತಿಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಖಚಿತಪಡಿಸಿಕೊಳ್ಳುವುದು ಆಯಾ ವಿಭಾಗದ ಜಂಟಿ ನಿರ್ದೇಶಕರ ಹೊಣೆಗಾರಿಕೆಯಾಗಿದೆ.