ಮುನವಳ್ಳಿ ಸೋಮಶೇಖರಮಠದಲ್ಲಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಹೂವಕ್ಕ ಜಗಮನಿ ಹಾಗೂ ನಿರಂಜನ ಬಟಕುರ್ಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುರುಂದ್ರ ಸ್ವಾಮೀಜಿ, ಶಿವಾನಂದ ಮೇಟಿ, ಅಂಬರೀಷ ಯಲಿಗಾರ, ಉಮೇಶ ಬಾಳಿ ಇತರರಿದ್ದರು. 
ರಾಜ್ಯ

ಕೃಷಿ ಉಳಿವಿಗೆ ಒಗ್ಗಟ್ಟು ಅಗತ್ಯ

ಮುನವಳ್ಳಿ: ಕೃಷಿಕರು ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಕೃಷಿ ೇತ್ರ ಉಳಿಯಲು ಸಾಧ್ಯ ಎಂದು ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಹೇಳಿದರು.
ಸೋಮಶೇಖರಮಠದ ಸಭಾಭವನದಲ್ಲಿ ಕಳಸಾ ಬಂಡೂರಿ ನಾಲಾ ಜೋಡಣಾ ಹೋರಾಟ ಸಮಿತಿ ಹಾಗೂ ರೈತರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 46ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಜೀವನಾಡಿಯಾಗಿರುವ ರೈತನಿಗೆ ಜಗತ್ತಿನಲ್ಲಿ ಮೊದಲ ಸ್ಥಾನ ಸಿಗಬೇಕು. ರೈತರು ಒಗ್ಗೂಡಿ ತಾವು ಬೆಳೆದ ಬೆಳೆಗೆ ಸೂಕ್ತ ದರಕ್ಕಾಗಿ ಪಟ್ಟು ಹಿಡಿಯಬೇಕು ಎಂದರು.
ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಮಾತನಾಡಿ, ಎಂಬತ್ತರ ದಶಕದಲ್ಲಿ ನಡೆದ ನರಗುಂದ ಬಂಡಾಯದಲ್ಲಿ ಮಡಿದ ರೈತರ ಕೊಡುಗೆ ಅಪಾರವಾಗಿದೆ ಎಂದರು.
ಸಹಕಾರಿ ಧುರೀಣ ಅಂಬರೀಷ ಯಲಿಗಾರ, ಉಮೇಶ ಬಾಳಿ ಮಾತನಾಡಿದರು. ಪ್ರಗತಿಪರ ರೈತರಾದ ಹೂವಕ್ಕ ಜಗಮನಿ ಹಾಗೂ ನಿರಂಜನ ಬಟಕುರ್ಕಿಗೆ "ನೇಗಿಲಯೋಗಿ ಕಾಯಕಜೀವಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಸಭೆ ಅಧ್ಯ ಈಶ್ವರ ಕರೀಕಟ್ಟಿ, ಎಂ.ಆರ್​.ಗೋಪಶೆಟ್ಟಿ, ಐ.ಜಿ.ಚಂದರಗಿ, ಪಂಚಪ್ಪ ಹನಸಿ, ಗಿರೆಪ್ಪ ಹಂಜಿ, ಅರುಣಗೌಡ ಪಾಟೀಲ, ಈರಣ್ಣ ಬಸಲಿಗುಂದಿ, ಗಂಗಾಧರ ಗೊರಾಬಾಳ, ರಾಮನಗೌಡ ಗೀದೀಗೌಡ್ರ, ಮಲ್ಲಿಕಾರ್ಜುನ ಗೋಕಾಕ, ಸುರೇಶ ಬಾಳಿಕಾಯಿ, ಜಗದೀಶ ಹಿರೇಮಠ, ಕಲ್ಲಪ್ಪ ನಲವಡೆ, ಸಂಗಮೇಶ ಬಟಕುರ್ಕಿ ಇತರರಿದ್ದರು.