ಬಿಇಎಲ್ -ಐ-ಟೆಕ್ ನಡುವೆ ಆದ ಒಪ್ಪಂದ ಪತ್ರವನ್ನು ಬಿಇಎಲ್ ಜಿಎಂ ಹೇಮಾವತಿ ಮುತ್ತುಸಾಮಿ ಹಾಗೂ ಐಟೆಕ್ ಎಂಡಿ ಅಶಿಮ್ ಅಶೋಕ್ ಪಾಟೀಲ ವಿನಿಮಯ ಮಾಡಿಕೊಂಡರು. ಬಿಇಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 
ರಾಜ್ಯ

ಬಿಇಎಲ್ -ಐ-ಟೆಕ್ ಆರ್​ಎಫ್ಐಡಿ ನಡುವೆ ಒಪ್ಪಂದ

ಪ್ರಮುಖ ಮುಖ್ಯಾಂಶಗಳು

  • ಬಿಇಎಲ್ -ಐ-ಟೆಕ್ ಆರ್​ಎಫ್ಐಡಿ ನಡುವೆ ಒಪ್ಪಂದ
  • ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ ಸಂಸ್ಥೆಗಳು
  • ಡೇಟಾ ಸಂಗ್ರಹ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಹೆಜ್ಜೆ

ಬೆಂಗಳೂರು:ಡಿಜಿಟಲ್ಪರಿವರ್ತನೆಗೆ ಉತ್ತೇಜನ ನೀಡುವದಿಶೆಯಲ್ಲಿ ಸಾರ್ವಜನಿಕ ಕ್ಷೇತ್ರದನವರತ್ನ ರಕ್ಷಣಾ ಸಂಸ್ಥೆ ಭಾರತಎಲೆಕ್ಟ್ರಾನಿಕ್ಸೃ್ ಲಿಮಿಟೆಡ್(ಬಿಇಎಲ್)ಹಾಗೂ ಇನ್ಫೋಟೆಕ್ಸಾಫ್ಟ್‌ವೇರ್ ಅಂಡ್ ಸಿಸ್ಟಮ್ಸ್ಪ್ರೈವೇಟ್ ಲಿಮಿಟೆಡ್ (-ಟೆಕ್) ಪರಸ್ಪರ ಒಪ್ಪಂದಕ್ಕೆಸಹಿ ಹಾಕಿವೆ.

ಬುಧವಾರ ನಡೆದಕಾರ್ಯಕ್ರಮದಲ್ಲಿ,ಸ್ವಯಂ ಗುರುತುಮತ್ತು ಡೇಟಾ ಸಂಗ್ರಹ ತಂತ್ರಜ್ಞಾನಗಳಾದಆರ್‌ಎಫ್‌ಐಡಿ ಸೇರಿದಂತೆ ಆಧುನಿಕಡಿಜಿಟಲ್ ಪರಿಹಾರಗಳನ್ನುಅಭಿವೃದ್ಧಿಪಡಿಸಿ ಜಾರಿಗೆ ತರಲುಉದ್ದೇಶಿಸಿರುವ ಪರಸ್ಪರ ಮನವಿಪತ್ರ (ಎಂಓಯು)ವಿನಿಮಯ ಮಾಡಿಕೊಂಡಿವೆ.

ಉದ್ಯಮ ಕ್ಷೇತ್ರಎದುರಿಸುತ್ತಿರುವ ಪ್ರಮುಖಸವಾಲುಗಳನ್ನು ತಂತ್ರಜ್ಞಾನಆಧಾರಿತ ಹಾಗೂ ವಿಸ್ತರಿಸಬಹುದಾದಪರಿಹಾರಗಳ ಮೂಲಕ ಸಮರ್ಥವಾಗಿಎದುರಿಸಲು ಈ ಒಪ್ಪಂದ ನೆರವಾಗಲಿದೆಎಂದು ಸಂಸ್ಥೆಗಳು ತಿಳಿಸಿವೆ.

ಈ ಸಂದರ್ಭದಲ್ಲಿಬಿಇಎಲ್ ಜಿಎಂ ಹೇಮಾವತಿ ಮುತ್ತುಸಾಮಿಹಾಗೂ ಐಟೆಕ್ ಆರ್‌ಎಫ್‌ಐಡಿವ್ಯವಸ್ಥಾಪಕ ನಿರ್ದೇಶಕ ಮತ್ತುಸಿಇಒ ಅಶಿಮ್ ಅಶೋಕ್ ಪಾಟೀಲ ಒಪ್ಪಂದವಿನಿಮಯ ಮಾಡಿಕೊಂಡರು.ಬಿಇಎಲ್ ಅಧ್ಯಕ್ಷಮತ್ತು ವ್ಯವಸ್ಥಾಪಕ ನಿರ್ದೇಶಕಮನೋಜ್ ಜೈನ್,ನಿರ್ದೇಶಕ ಕಾಮೇಶ್ ಹಾಗೂ ಜಿ.ಎಂ.ರುಚಿಪಂತ್ಉಪಸ್ಥಿತರಿದ್ದರು.

ರಕ್ಷಣಾ ಕ್ಷೇತ್ರದಲ್ಲಿಸಕ್ರೀಯವಾಗಿರುವ ಬಿಇಎಲ್

ರಕ್ಷಣಾ ಸಚಿವಾಲಯದಅಧೀನದಲ್ಲಿರುವ ಬಿಇಎಲ್ ಸಂಸ್ಥೆದೇಶದ ರಕ್ಷಣಾ ಮತ್ತು ತಂತ್ರಜ್ಞಾನಕ್ಷೇತ್ರದಲ್ಲಿ ಪ್ರಮುಖ ಸ್ಥಾನಹೊಂದಿದೆ. ರಾಡಾರ್,ಶಸಾಸಗಳು,ಸಂವಹನ ಜಾಲಗಳು,ನೌಕಾ ವ್ಯವಸ್ಥೆಗಳು,ಎಲೆಕ್ಟ್ರಾನಿಕ್ಯುದ್ಧ ವ್ಯವಸ್ಥೆಗಳು ಸೇರಿದಂತೆ600ಕ್ಕೂಹೆಚ್ಚು ಉತ್ಪನ್ನಗಳನ್ನುಅಭಿವೃದ್ಧಿಪಡಿಸುವ ಮೂಲಕ ಗಮನಸೆಳೆಯುತ್ತಿದೆ.ಜೊತೆಗೆ ನಾಗರಿಕವಿಮಾನಯಾನ,ಮಾನವರಹಿತವ್ಯವಸ್ಥೆಗಳು,ರೈಲು ಮತ್ತುಮೆಟ್ರೋ, ಸೈಬರ್ಭದ್ರತೆ, ಸ್ಮಾರ್ಟ್ಸಿಟಿ, ಬಾಹ್ಯಾಕಾಶಎಲೆಕ್ಟ್ರಾನಿಕ್ಸೃ್,ವೈದ್ಯಕೀಯಸಾಧನಗಳು ಹಾಗೂ ಕೃತಕ ಬುದ್ಧಿಮತ್ತೆಕ್ಷೇತ್ರಗಳಲ್ಲೂ ತನ್ನ ಕಾರ್ಯಚಟುವಟಿಕೆವಿಸ್ತರಿಸಿದೆ.

ಐಟೆಕ್ ಆರ್‌ಎಫ್‌ಐಡಿ

ಐಟೆಕ್ ಆರ್‌ಎಫ್‌ಐಡಿಸಂಸ್ಥೆಯು ವೈರ್‌ಲೆಸ್ ಸಲಕರಣೆಗಳಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು,ಸಾರಿಗೆ,ಲಾಜಿಸ್ಟಿಕ್ಸೃ್,ಚಿಲ್ಲರೆ ವ್ಯಾಪಾರ,ಗಣಿಗಾರಿಕೆ,ತೈಲ ಮತ್ತು ಅನಿಲಸೇರಿದಂತೆ ಹಲವು ಕ್ಷೇತ್ರಗಳಲ್ಲಿಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.