ಬೆಂಗಳೂರು ವಿಶ್ವವಿದ್ಯಾಲಯ 
ರಾಜ್ಯ

ಮಾ.25ರಿಂದ ಬೆಂ.ವಿವಿಯಲ್ಲಿ ಏಜೆಂಟಿಕ್ ಎಐ ಕಾರ್ಯಾಗಾರ

ಪ್ರಮುಖ ಮುಖ್ಯಾಂಶಗಳು

  • ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಶೇಷವಾಗಿ ಏಜೆಂಟಿಕ್ ಎಐ ತಂತ್ರಜ್ಞಾನಗಳನ್ನು ಕೇಂದ್ರೀಕರಿಸಿ ಕಲಿಕೆ, ಹೊಸತನ ಮತ್ತು ಸಹಯೋಗಕ್ಕೆ ಬಲವಾದ ವೇದಿಕೆಯನ್ನು ನಿರ್ಮಿಸುವ ಉದ್ದೇಶ
  • ವಿವಿಧ ಕಾಲೇಜುಗಳಿಂದ ಸುಮಾರು 700 ವಿದ್ಯಾರ್ಥಿಗಳು ಮತ್ತು 100 ಶಿಕ್ಷಕರು ಭಾಗವಹಿಸಲಿದ್ದಾರೆ.
  • ಕಾರ್ಯಕ್ರಮದ ಕೊನೇ ದಿನ ಹ್ಯಾಕಥಾನ್ ಆಯೋಜಿಸಲಾಗಿದ್ದು, ಹತ್ತು ಉದ್ಯಮ ತಜ್ಞರ ಸಮಿತಿ ಅದನ್ನು ಮೌಲ್ಯಮಾಪನ ಮಾಡಲಿದೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಾ.25ರಿಂದ ಮೂರು ದಿನಗಳ ‘ಏಜೆಂಟಿಕ್ ಎಐ ಸಕ್ಷಮ್’ ಎಂಬ ಕಾರ್ಯಾಗಾರವನ್ನು ಆಯೋಜಿಸಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಶೇಷವಾಗಿ ಏಜೆಂಟಿಕ್ ಎಐ ತಂತ್ರಜ್ಞಾನಗಳನ್ನು ಕೇಂದ್ರೀಕರಿಸಿ ಕಲಿಕೆ, ಹೊಸತನ ಮತ್ತು ಸಹಯೋಗಕ್ಕೆ ಬಲವಾದ ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ.
ಜ್ಞಾನಭಾರತಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆ್ ಎಕನಾಮಿಕ್ಸ್ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುಷ್ಬೂ ಜಿ ಚೌದರಿ, ಕೇಂದ್ರ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ (ರೂಸಾ) ಆರ್ಮ್‌ಸ್ಟ್ರಾಂಗ್ ಪೇಮ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್. ಅವರು ಚಾಲನೆ ನೀಡಲಿದ್ದಾರೆ.
ಬೆಂ.ವಿವಿ. ಕುಲಪತಿ ಡಾ. ಎಸ್.ಎಂ. ಜಯಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವೆ ಕೆ.ಟಿ. ಶಾಂತಲಾ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೆಶಕ ಡಾ. ಕೆ.ಜಿ. ಚಂದ್ರಶೇಖರ, ಕಾರ್ಯಕ್ರಮ ಸಂಯೋಜಕ ಡಾ. ಮುರಳಿಧರ ಬಿ.ಎಲ್. ಸೇರಿ ಹಲವರು ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು 700 ವಿದ್ಯಾರ್ಥಿಗಳು ಮತ್ತು 100 ಶಿಕ್ಷಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೇ ದಿನ ಹ್ಯಾಕಥಾನ್ ಆಯೋಜಿಸಲಾಗಿದ್ದು, ಹತ್ತು ಉದ್ಯಮ ತಜ್ಞರ ಸಮಿತಿ ಅದನ್ನು ಮೌಲ್ಯಮಾಪನ ಮಾಡಲಿದೆ.