Afraid to step into the park! 
ರಾಜ್ಯ

ಪಾರ್ಕ್​ಗೆ ಹೆಜ್ಜೆ ಇಡಲು ಹೆದರಿಕೆ!

ಕೋಲಾರ ಡೆಸ್ಕ್

ಮುಳಬಾಗಿಲು:

ಉದ್ಯಾನವನ ನಿಮಾರ್ಣಕ್ಕಾಗಿ ಮಣ್ಣು ತುಂಬಿ, ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಅನೇಕ ಕಾಮಗಾರಿಗಳನ್ನು ಕೈಗೊಂಡು ಎರಡು ದಶಕಗಳೇ ಕಳೆದಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಈವರೆಗೂ ಸಾರ್ವಜನಿಕ ಬಳಕೆಗೆ ದೊರೆಯದೆ ಪುಂಡು-ಪೋಕರಿಗಳ ಅಡ್ಡೆಯಾಗಿದೆ ನಗರದ ಸೊ ವಬ.ನ ಮೇಶ್ವರಪಾಳ್ಯ ಕೆರೆ ಅಂಗಳದಲ್ಲಿರುವ ಪಾರ್ಕ್​.

ಸಸಿ ನೆಟ್ಟರಷ್ಟೇ, ನಿರ್ವಹಣೆ ಇಲ್ಲ! ಅರಣ್ಯ ಇಲಾಖೆಯಿಂದ 2022&25ನೇ ಸಾಲಿನಲ್ಲಿ ಉದ್ಯಾನವನದ ಆವರಣದಲ್ಲಿ ಸಸಿಗಳನ್ನು ನೆಡಲಾಗಿದೆ. ಆದರೆ ನೆಟ್ಟ ಸಸಿಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳದ್ದರಿಂದಹಲವು ಭಾಗಗಳಲ್ಲಿಗಿಡಗಂಟಿಗಳೇ ಆವರಿಸಿವೆ.

ಸುಮಾರು 20 ವರ್ಷದ ಹಿಂದೆ ಕೆರೆ ಅಂಗಳದ ರ್ನಿದಿಷ್ಟ್ಟ ಪ್ರದೇಶಕ್ಕೆ ಮಣ್ಣು ತುಂಬಿ ಉದ್ಯಾನವನ ನಿರ್ಮಿಸಲಾಗಿತ್ತು. ವಾಯುವಿಹಾರ, ವಿಶ್ರಾಂತಿ ಹಾಗೂ ಮನರಂಜನೆಗಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಸಿಕೊಡಲಿದೆ ಎಂಬ ನಿರೀಕ್ಷೆ ಈಗ ಹುಸಿಯಾಗಿದೆ.
ಆದರೆ, ಕಾಮಗಾರಿ ಪೂರ್ಣಗೊಂಡ ಬಳಿಕವೂ ಉದ್ಯಾನವನ ಸಮರ್ಪಕವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಕಾರ್ಯ ನಡೆಯದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ವಾಯುವಿಹಾರ ಪಥವೂ ಗಿಡಗಂಟಿಗಳ ಪಾಲು:
ಉದ್ಯಾನವನದಲ್ಲಿ ನಿರ್ಮಿಸಿರುವ ವಾಕಿಂಗ್​ ಪಥ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಗಿಡ&ಗಂಟಿಗಳಿಂದ ಆವೃತವಾಗಿದ್ದು, ವಿಷ ಜಂತುಗಳ ವಾಸಸ್ಥಾನವಾಗಿದೆ. ಕುಳಿತುಕೊಳ್ಳಲು ಆಸನ, ಸಮರ್ಪಕ ವಿದ್ಯುತ್​ ದೀಪ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೆಲವೆಡೆ ವಿದ್ಯುತ್​ ಕಂಬಗಳು ಕೆರೆಯ ನೀರಿನೊಳಗೆ ನಿಂತಿವೆ. ಮಳೆಗಾಲದಲ್ಲಿ ಸಾರ್ವಜನಿಕರ ಸುರಕ್ಷತೆ ಬಗ್ಗೆಯೂ ಆತಂಕ ಮೂಡಿಸಿದೆ. ಪಾರ್ಕ್​ ಜಾಗದಲ್ಲಿ ಕುರಿ, ಮೇಕೆಗಳನ್ನು ಬಿಟ್ಟುಕೊಂಡು ಆರಾಮವಾಗಿ ಮಲಗುವವರೇ ಹೆಚ್ಚಾಗಿದ್ದಾರೆ.

ಶೌಚಗೃಹಕ್ಕೆ ಬೀಗಮುದ್ರೆ

ನಗರಸಭೆಯಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹಕ್ಕೂ ಹಲವು ವರ್ಷಗಳಿಂದ ಬೀಗ ಬಿದ್ದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಸೌಲಭ್ಯವೇ ಬಳಕೆಗೆ ಬಾರದಿರುವುದು ನಗರಸಭೆಯ ನಿರ್ವಹಣಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.

ಅನುದಾನದ ಲಕವೇ ಎಲ್ಲಿ?
ನಗರಸಭೆ, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಉದ್ಯಾನವನದ ಅಭಿವೃದ್ಧಿಗೆ ಅನುದಾನ ರ್ಖಚಾಗಿದೆ ಎನ್ನಲಾಗುತ್ತಿದೆ. ಆದರೆ, ಯಾವ ಇಲಾಖೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ, ಯಾವ ಕಾಮಗಾರಿಗೆ ಎಷ್ಟುಹಣ ರ್ಖಚಾಗಿದೆ ಎಂಬ ವಿವರಗಳ ಮಾಹಿತಿ ಫಲಕವೇ ಇಲ್ಲ. ಅಭಿವೃದ್ಧಿ ಹೆಸರಿನಲ್ಲಿ ಅನುದಾನ ರ್ಖಚಾದರೂ ಉದ್ಯಾನವನ ಮಾತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಸ್ಥಳಿಯರಿಂದ ಕೇಳಿಬರುತ್ತಿದೆ. ಸಾರ್ವಜನಿಕರ ತೆರಿಗೆ ಹಣದ ಬಳಕೆಯ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಖರ್ಚಿನ ಸಂಪೂರ್ಣ ವಿವರ ಬಹಿರಂಗಪಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಸಂಜೆಯಾಗುತ್ತಿದ್ದಂತೆ ರ್ನಿಜನ ಪ್ರದೇಶ

ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಪ್ರದೇಶ ಸಂಜೆ ವೇಳೆಗೆ ರ್ನಿಜನವಾಗುತ್ತದೆ. ಇದೇ ಕಾರಣದಿಂದ ಕೆಲವರು ಇಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ಪಡೆಯುತ್ತಿದ್ದಾರೆ ಎಂಬ ಆರೋಪ ಸ್ಥಳಿಯರಿಂದ ಕೇಳಿಬಂದಿದೆ. ಮಹಿಳೆಯರು, ಮಕ್ಕಳು ಹಾಗೂ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಉದ್ಯಾನವನದತ್ತ ತೆರಳಲು ಹಿಂದೇಟು ಹಾಕುವಂತಾಗಿದೆ. ಪ್ಲಾಸ್ಟಿಕ್​ ಬಾಟಲಿ, ತಿಂಡಿ ಪೊಟ್ಟಣ ಹಾಗೂ ವಿವಿಧ ರೀತಿಯ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ.

ಪಾರ್ಕ್​ಗೆ ಕಾಯಕಲ್ಪ ಯಾವಾಗ?
ಎರಡು ದಶಕಗಳಿಂದ ಸಾರ್ವಜನಿಕರ ಬಳಕೆಗೆ ಬಾರದ ಉದ್ಯಾನವನಕ್ಕೆ ಕಾಯಕಲ್ಪ ನೀಡಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಈವರೆಗೆ ರ್ಖಚಾದ ಅನುದಾನದ ಸಂಪೂರ್ಣ ವಿವರ ಬಹಿರಂಗಪಡಿಸಬೇಕು.ಬಾಕಿ ಕಾಮಗಾರಿಯನ್ನುತ್ವರಿತವಾಗಿ ಪೂರ್ಣಗೊಳಿಸಿ, ವಾಕಿಂಗ್​ ಪಥ, ಆಸನ ವ್ಯವಸ್ಥೆ, ವಿದ್ಯುತ್​ ದೀಪ, ಕುಡಿಯುವ ನೀರು, ಶೌಚಗೃಹ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸಿ ಉದ್ಯಾನವನವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು.
ಉದ್ಯಾನವನ ನಿಮಾರ್ಣವಾಗಿ 20 ವರ್ಷಗಳೇ ಕಳೆದರೂ ಜನರಿಗೆ ಬಳಕೆಯಾಗದಿದ್ದರೆ, ಸಾರ್ವಜನಿಕರ ಹಣದಲ್ಲಿ ಅಭಿವೃದ್ಧಿ ಮಾಡಿದ ಉದ್ದೇಶವೇನು? ಎಂಬ ಪ್ರಶ್ನೆ ಇದೀಗ ಸ್ಥಳಿಯರನ್ನು ಕಾಡುತ್ತಿದೆ. ಸಂಬಂಧಿಸಿದ ಇಲಾಖೆಗಳು ಪರಸ್ಪರ ಹೊಣೆಗಾರಿಕೆಯಿಂದ ನುಣುಚಿಕೊಳ್ಳದೆ, ಪಾರ್ಕ್​ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ ಕಾರ್ಯಗತಗೊಳಿಸುವರೇ ಎಂಬುದನ್ನು ಕಾದುನೋಡಬೇಕಿದೆ.