ಭುವನಹಳ್ಳಿ ಗ್ರಾಮದ ನರಸಿಂಹ ಸ್ವಾಮಿ ದೇಗುಲ ಆವರಣದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಬಿ.ಕೆ.ಚನ್ನೇಗೌಡ, ಗಂಗಾಧರ್, ಬಿ.ಕೆ.ರಾಮೇಗೌಡ, ಶಂಕ್ರಯ್ಯ, ಶಿವಣ್ಣ, ಹಾಲಪ್ಪ, ಬಸವರಾಜ್, ರಾಜು, ನಿಜಾನಂದ ಇದ್ದರು. 
ರಾಜ್ಯ

ಸಾವಯವ ಕೃಷಿ ಪದ್ಧತಿ ಅನುಸರಿಸಲು ಸಲಹೆ

ಪ್ರಮುಖ ಮುಖ್ಯಾಂಶಗಳು

  • ಸಾವಯವ ಕೃಷಿ ಪದ್ಧತಿಯಿಂದ ಭೂಮಿಯ ಫಲವತ್ತತೆ
  • ತೆಂಗು ಸೇರಿದಂತೆ ಇತರ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯ
ನುಗ್ಗೇಹಳ್ಳಿ: ಸಾವಯವ ಕೃಷಿ ಪದ್ಧತಿಯಿಂದ ಭೂಮಿಯ ಫಲವತ್ತತೆ ಹೆಚ್ಚುವುದರ ಜತೆಗೆ ತೆಂಗು ಸೇರಿದಂತೆ ಇತರ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕೆರಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಭುವನಹಳ್ಳಿ ಗ್ರಾಮದ ಕಂಬದ ನರಸಿಂಹಸ್ವಾಮಿ ದೇಗುಲ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ರಾಸಾಯನಿಕ ಗೊಬ್ಬರ ಹಾಗೂ ಕಿಟನಾಶಕಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಗಾಳಿ ಮಲಿನಗೊಳ್ಳುತ್ತಿದೆ. ಜತೆಗೆ ಸಸ್ಯ ಸಂಕುಲಗಳು ನಾಶವಾಗುತ್ತಿವೆ. ಮಣ್ಣಿನ ಫಲವತ್ತತೆಯಲ್ಲಿ ಕುಸಿತ ಕಂಡು ಬರುತ್ತಿದೆ. ಈ ನಷ್ಟದ ಪ್ರಮಾಣವನ್ನು ತಡೆಗಟ್ಟಿ ಭೂಮಿಗೆ ಚೈತನ್ಯ ನೀಡಲು ಸಾವಯವ ಕೃಷಿ ಪದ್ಧತಿ ಅಗತ್ಯ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಬಿ.ಕೆ.ರಾಮೇಗೌಡ, ಗಂಗಾಧರ್, ಬಿ.ಜಿ.ಶಿವಣ್ಣ, ಕುಂಟೇಗೌಡ, ಬಸವರಾಜು, ಹಾಲಪ್ಪ, ಮಲ್ಲೇಶ್, ಬಿ.ಎಸ್. ಶಂಕರಯ್ಯ, ಬಿ.ಸಿ.ಮಂಜುನಾಥ್, ಬಿ.ಎಸ್.ಬಸವರಾಜ್, ಹೊಸಳ್ಳಿ ತಿಮ್ಮೇಗೌಡ, ಬಿ.ಜಿ.ಕುಮಾರ್, ಬಿ.ಎಸ್.ಕುಮಾರ್, ಬಿ.ಎಂ.ರಾಜು, ನಿಜಾನಂದ, ವಿನಯ್, ಪ್ರದೀಪ್ ಇತರರು ಹಾಜರಿದ್ದರು.