ಹಳ್ಳಖೇಡ(ಬಿ)ದ ಗುರು ಸಿದ್ದೇಶ್ವರ ಚಿಕ್ಕಮಠದಲ್ಲಿ ಬುಧವಾರ ಗುರುಪೂರ್ಣಿಮೆ ನಿಮಿತ್ತ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಅವರನ್ನು ಭಕ್ತರು ಸನ್ಮಾನಿಸಿ ದರ್ಶನ ಪಡೆದರು. ಬಾವಗಿ ಭದ್ರೇಶ್ವರ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸಂದೀಪ ಪ್ರಭಾ, ವಿಜಯಕುಮಾರ್ ಸಾಲಿ, ಲಿಂಗಾನಂದ ತಿಬಶೆಟ್ಟಿ, ಯುವರಾಜ್ ಬಿರಾದಾರ್, ರಮೇಶ ರಡ್ಡಿ ಇತರರಿದ್ದರು.
ಹುಮನಾಬಾದ್: ಗುರು ಜೀವನಕ್ಕೆ ದಾರಿದೀಪವಾಗಿದ್ದು, ಸಾಮಾನ್ಯ ವ್ಯಕ್ತಿಯನ್ನೂ ಸಮಾಜದ ಶಕ್ತಿಯಾಗಿ ರೂಪಿಸುವ ಸಾಮರ್ಥ್ಯ ಗುರುವಿನಲ್ಲಿದೆ ಎಂದು ಹಳ್ಳಿಖೇಡ್ (ಬಿ)ದ ಗುರು ಸಿದ್ದೇಶ್ವರ ಸಂಸ್ಥಾನದ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಹಳ್ಳಿಖೇಡ್(ಬಿ)ದ ಗುರು ಸಿದ್ದೇಶ್ವರ ಸಂಸ್ಥಾನದಲ್ಲಿ ಬುಧವಾರ ನಡೆದ ಗುರುಪೂರ್ಣಿಮೆ ನಿಮಿತ್ತ ಆಶೀರ್ವಚನ ನೀಡಿದ ಅವರು, ಭಾರತೀಯ ಸಂಸ್ಕತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಯುವಜನತೆ ಗುರು-&ಹಿರಿಯರ ಮಾರ್ಗದರ್ಶನದಲ್ಲಿ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಬಾವಗಿ ಭದ್ರೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಗುರು ಸಿದ್ಧೇಶ್ವರರ ಕೃಪೆ ಮತ್ತು ಆಶೀರ್ವಾದದ ಮೇಲೆ ನಂಬಿಕೆ ಇಟ್ಟು ನಡೆದವರಿಗೆ ಜೀವನದಲ್ಲಿ ಹಿನ್ನ್ನೆಡೆಯಾಗಿಲ್ಲ. ಭಕ್ತಿ ಮತ್ತು ಭಾವ ಶುದ್ಧವಾಗಿದ್ದರೆ ದೇವರ ಅನುಗ್ರಹ ಖಂಡಿತ ದೊರೆಯುತ್ತದೆ ಎಂದು ತಿಳಿಸಿದರು.
ಪ್ರಮುಕರಾದ ಬಸವರಾಜ ಪೆದ್ದಪೂರಿ, ವೀರಯ್ಯ ಸ್ವಾಮಿ, ದತ್ತು, ಬಸಯ್ಯ ಸ್ವಾಮಿ, ಓಂಕಾರ ಸ್ವಾಮಿ, ಶ್ರೀಶೈಲ ಸ್ವಾಮಿ, ಶಾಂತಕುಮಾರ, ನಾಗು ಚಂದನಕೇರಿ, ಆನಂದ ಹಳ್ಳಿಖೇಡ್, ಸಂದೀಪ್ ಪ್ರಭಾ, ವಿಜಯಕುಮಾರ ಸಾಲಿ, ಲಿಂಗಾನಂದ ತಿಬಶೆಟ್ಟಿ, ಯುವರಾಜ್ ಬಿರಾದಾರ್, ರಮೇಶ ರಡ್ಡಿ ಹಾಗೂ ಅನೇಕ ಭಕ್ತರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು.