ಅಟಲ್​ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ಶತಮಾನೋತ್ಸವ centenary 
ರಾಜ್ಯ

ವಾಜಪೇಯಿ ಸರಳ ಗುಣ ಅಳವಡಿಸಿಕೊಳ್ಳಿ centenary

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದರೆಡ್ಡಿ ಕರೆ
ಕೆಜಿಎಫ್​- ಅಜಾತಶತ್ರುವಾಗಿದ್ದ ವಾಜಪೇಯಿ ಅವರ ಸರಳ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದರೆಡ್ಡಿ ಹೇಳಿದರು.
ನಗರದ ವಾರ್ಡ್​ ನಂ 30, ಮಶಿಕಂ ವಾರ್ಡ್​ನಲ್ಲಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಅಟಲ್​ ಬಿಹಾರಿ ವಾಜಪೇಯಿ ಮತ್ತು ಅಂಬೇಡ್ಕರ್​ ಭಾವಚಿತ್ರಗಳ ಅನಾವರಣ ಮತ್ತು ಮಶಿಕಂ "ಎ' ಬ್ಲಾಕ್​ನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಬಿಜೆಪಿ ಧ್ವಜ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಸಂಸದೀಯ ಪಟುವಾಗಿದ್ದ ವಾಜಪೇಯಿ ಅವರ ರಾಜಕೀಯ ಬದುಕು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದೆ. ವಾಜಪೇಯಿ ಅವರು ಲೋಕಸಭೆಗೆ 9 ಬಾರಿ ಹಾಗೂ ರಾಜ್ಯಸಭೆಗೆ 2 ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆಯೇ ಸರಿ ಎಂದರು.
ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಭಾರತದ ಸ್ವಾತಂತ್ರ್ಯ ನಂತರ ದೇಶೀಯ ಮತ್ತು ವಿದೇಶಿ ನೀತಿಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ವಾರ್ಡ್​ನ ಸುಮಾರು 1,200 ಮಂದಿಗೆ ಅನ್ನದಾನ ಏರ್ಪಡಿಸಲಾಗಿತ್ತು. centenary
ಬಿಜೆಪಿ ಒಬಿಸಿ ಉಪಾಧ್ಯಕ್ಷ ವಿಜಯ್​ಕುಮಾರ್​, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಸರವಣ ಸಂತೋಷ್​ ಕುಮಾರ್​, ನಗರಸಭಾ ಮಾಜಿ ಸದಸ್ಯರಾದ ರಾಧಾ ವಿಜಯ್​ಕುಮಾರ್​, ವೇಣಿ ಪಾಂಡಿಯನ್​, ಗಿರಿಜಾ ಗಾಂಧಿ, ರಾಮುಲಮ್ಮ ಗಂಟ್ಲಪ್ಪ, ಗಾಂಧಿ, ದೀನಾ, ಜನಾರ್ದನ್​ ಬಾಬು, ನವೀನ್​ ಜೈನ್​, ಗಂಟ್ಲಪ್ಪ, ಕೋಳಿ ನಾಗರಾಜ್​, ಮಹಿಳಾ ಮೋರ್ಚಾ ವಿಮಲಾ, ಕೆಜಿಎಫ್​ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಪಾಂಡಿಯನ್​, ವಿನೋದ್​, ನವೀನ್​ ಇದ್ದರು.
ಕೆಜಿಎಫ್​ನಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ 101ನೇ ಜನ್ಮ ಶತಮಾನೋತ್ಸವದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ ರೆಡ್ಡಿ ಕ್ಯಾಲೆಂಡರ್​ ಬಿಡುಗಡೆ ಮಾಡಿದರು. ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವಾಸು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಮಲ್​ನಾಥ್​, ಪ್ರಧಾನ ಕಾರ್ಯದರ್ಶಿ ಮಹೇಶ್​ ಇದ್ದರು.