ಕಾಳಗಿ ತಾಲೂಕಿನ ಬೆಡಸೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇವಣಸಿದ್ಧೇಶ್ವರ ಪುರಾಣ ಕಾರ್ಯಕ್ರಮವನ್ನು ಮಲ್ಲಿನಾಥ ಪಾಟೀಲ್ ಕಾಳಗಿ ಉದ್ಘಾಟಿಸಿದರು. ಶ್ರೀ ರೇವಣಸಿದ್ಧ ಶಿವಾಚಾರ್ಯ, ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ್ ಗೊಣಗಿ, ಚಂದ್ರಕಾಂತ ರಾಮಾ ಇತರರಿದ್ದರು.
- ಶ್ರೀ ರೇವಣಸಿದ್ಧ ಶಿವಾಚಾರ್ಯರು ನುಡಿ
- ಬೆಡಸೂರಿನಲ್ಲಿ ಪುರಾಣ ಕಾರ್ಯಕ್ರಮ
ಕಾಳಗಿ: ಇಂದಿನ ಒತ್ತಡದ ಬದುಕಿನಲ್ಲಿ ಪುರಾಣ, ಪ್ರವಚನಗಳನ್ನು ಆಲಿಸುವುದರಿಂದ ನೆಮ್ಮದಿ ಸಿಗುತ್ತದೆ ಎಂದು ರಟಕಲ್ನ ಶ್ರೀ ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ಬೆಡಸೂರಿನಲ್ಲಿ ಶ್ರೀ ಹನುಮಾನ ದೇವಸ್ಥಾನದ ಗೋಪುರ ಉದ್ಘಾಟನೆ, ಕಳಾಸರೋಹಣ ಮತ್ತು ಶ್ರೀ ಪರ್ವತ ಮಲ್ಲಿಕಾರ್ಜುನ ರಥೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ರೇವಣಸಿದ್ಧೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಹಾ ಪುರುಷರು, ಸಂತರು& ಶರಣರ ಜೀವನ ಚರಿತ್ರೆ ಅರಿಯುವುದರ ಜತೆಗೆ ಅವರ ತತ್ವಾದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉದ್ಯಮಿ ಮಲ್ಲಿನಾಥ ಪಾಟೀಲ್ ಕಾಳಗಿ ಉದ್ಘಾಟಿಸಿದರು. ರೈತ ಸಂದ ತಾಲೂಕು ಅಧ್ಯ ವೀರಣ್ಣ ಗಂಗಾಣಿ ಮಾತನಾಡಿದರು.
ಪ್ರಮುಖರಾದ ಶಿವರಾಜ ಪಾಟೀಲ್ ಗೊಣಗಿ, ಚಂದ್ರಕಾಂತ ರಾಮಾ, ರೇವಣಸಿದ್ದ ಅಣಕಲ್, ಚಂದ್ರಕಾಂತ ಸೀಗಿ, ಸೂರ್ಯಕಾಂತ ಕಿಣ್ಣಿ, ದಯಾಸಾಗರ ಪಾಟೀಲ್, ರವೀಂದ್ರ ಪಾಟೀಲ್, ವಿದ್ಯಾಸಾಗರ ಪಾಟೀಲ್, ಸೂರ್ಯಕಾಂತ ತೆಳಮನಿ, ಚಂದ್ರಶೇಖರ ಪಾಟೀಲ್, ರಮೇಶ ಹರಸೂರ, ಮಲ್ಲಿಕಾರ್ಜುನ ತೆಳಮನಿ, ಹಣಮಂತರಾವ ಪಾಟೀಲ್, ಸಿದ್ದಣ್ಣಗೌಡ ಪಾಟೀಲ್, ಶಿವಲಿಂಗಪ್ಪ ಮೋರಪತಿ, ಸಂಜುಕುಮಾರ ತೆಳಮನಿ, ಮಲ್ಲಿನಾಥ ಭೀಮಳ್ಳಿ, ಮಲ್ಲಿಕಾರ್ಜುನ ಸಿದ್ರಾಮಗೋಳ, ನಾಗಣ್ಣ ಜಮದಾರ, ಸತೀಷ ಗುತ್ತೇದಾರ್, ಮಲ್ಲಿಕಾರ್ಜುನ ಮಂಠಾಳ, ಸಿದ್ದಣ್ಣ ಭಣಮಗಿ, ಉಸ್ಮಾನ ದಿನಮೊದ್ದಿನ್, ಅಶೋಕ ನಾಲ್ಕಮನ ಇತರರಿದ್ದರು.
ಚನ್ನಬಸಯ್ಯ ಶಾಸಿ ಪುರಾಣ ನಡೆಸಿಕೊಟ್ಟರು. ರಾಜಶೇಖರ ಮಿಣಜಗಿ ಸಂಗೀತ ಸೇವೆ ಸಲ್ಲಿಸಿದರು. ಶಿವಕುಮಾರ ಚಿಂಚನಸೂರ ತಬಲಾ ಸಾಥ್ ನೀಡಿದರು. ಪರಮೇಶ್ವರ ಸದಲಾಪುರ ನಿರೂಪಣೆ ಮಾಡಿ ವಂದಿಸಿದರು.