Adopt the philosophy of Sri Renukacharya 
ರಾಜ್ಯ

ಶ್ರೀರೇಣುಕಚಾರ್ಯರ ತತ್ವಾದರ್ಶ ಅಳವಡಿಸಿಕೊಳ್ಳಿ

ನೊಣವಿನಕೆರೆ: ತಿಪಟೂರು ತಾಲೂಕು ನೊಣವಿನಕೆರೆ ರೇಣುಕ ಮಂದಿರದಲ್ಲಿ ಶ್ರೀಜಗದ್ಗುರು ರೇಣುಕಚಾರ್ಯ ವೀರಶೈವ ಲಿಂಗಾಯಿತ ಸವಾಜ ಹಾಗೂ ಶ್ರೀರೇಣುಕಚಾರ್ಯ ಯುವಕರ ಬಳಗದ ಸಹಯೋಗದಲ್ಲಿ ಶುಕ್ರವಾರ ಶ್ರೀಜಗದ್ಗುರು ರೇಣುಕಚಾರ್ಯ ಜಯಂತಿ ಆಚರಿಸಲಾಯಿತು.
ಜಯಂತಿ ಪ್ರಯುಕ್ತ ಗಣಹೋಮ, ರುದ್ರಹೋಮ, ನವಗ್ರಹ ಹೋಮ, ಮಹಾರುದ್ರಾಭಿಷೇಕ, ಆಷ್ಟೊತ್ತರ, ವೇದೋಷ ಹಾಗೂ ವಿಶೇಷಪೂಜೆ ನೆರವೇರಿಸಲಾಯಿತು.
ನೊಣವಿನಕೆರೆ ಶ್ರೀಕಾಡಸಿದ್ದೇಶ್ವರ ಸಂಸ್ಥಾನ ಮಠದ ಡಾ.ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ವಾತನಾಡಿ, ರೇಣುಕರ ಹನ್ನೆರಡು ಲೀಲೆ ಅಪಾರವಾದುದ್ದು, ಯುಗದ ಮಹಿಮೆಯಲ್ಲಿ ಪಂಚ ಆಚಾರ್ಯರಲ್ಲಿ ಮೊದಲನೆಯವರಾಗಿ ರೇಣುಕರ ಪೀಠ ಬಂದಿದ್ದು, ಅಗಸ್ತ್ಯ ಮಹಾಋಷಿಗಳಿಗೆ ಲಿಂಗದೀಕ್ಷೆ ನೀಡಿದ ಗುರುಗಳಾಗಿ ಮತ್ತು ಶಂಕರಚಾರ್ಯರಿಗೆ ಚಂದ್ರಮೌಳಿಲಿಂಗ, ರತ್ನ ಗರ್ಭಗಣಪತಿ ನೀಡಿ ಆರ್ಶೀವದಿಸಿದವರು, ಸರ್ವೇಜನ ಸುಖಿನೋಭವಂತು ಎಂಬಂತೆ ಎಲ್ಲ ಮತಬಾಂದವರಿಗೆ ಆಶ್ರಯದಾತರಾಗಿ ಸಮನ್ವಯ ಆರ್ಶೀವಾದ ನೀಡುವುದರ ಜತೆಗೆ ಅವರ ಕಾಲದಲ್ಲೆ ಸಾವಾಜಿಕ ಬದುಕಿನಲ್ಲಿ ಶ್ರೀಸವಾನತೆಗೆ ಅದ್ಯತೆ ನೀಡಿದಂತಹ ಮಹಾತ್ಮರು ಎಂದರು.
ಅಂತಹ ಯುಗಪುರುಷರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸುವ ಮೂಲಕ ಉತ್ತಮ ಸವಾಜಕಟ್ಟುವ ಸಂಕಲ್ಪ ವಾಡೋಣ ಎಂದರು.
ಶ್ರೀರೇಣುಕಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಲಿಂಗದ ಬೀರನಕುಣಿತ, ಭದ್ರಕಾಳಿ, ಅೋರಿ ಕುಣಿತ, ಚಂಡೆವಾದ್ಯ ಹಾಗೂ ಸಕಲ ಬಿರುದಾವಳಿಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಶ್ರೀಕಾಡಸಿದ್ದೇಶ್ವರ ಸಂಸ್ಥಾನ ಮಠದ ಕಿರಿಯ ಶ್ರೀಗಳಾದ ಶ್ರೀ ಅಭಿವನ ಕಾಡಸಿದ್ದೇಶ್ವರಸ್ವಾಮೀಜಿ, ಹೆಗಡ್ಡಹಳ್ಳಿ ಮಠದ ಶ್ರೀಷಡ್ಭಾವರ ಹಿತೇಶ್ವರಸ್ವಾಮೀಜಿ, ಸವಾಜದ ಅಧ್ಯಕ್ಷರಾದ ತಾಂಡವಮೂರ್ತಿ, ಕಾರ್ಯದರ್ಶಿ ಗಿರಿಜಾಶಂಕರ್, ಸದಸ್ಯರಾದ ಚಂದ್ರಪ್ಪ, ಮಂಜುನಾಥ್, ಯುವಕ ಬಳಗದ ಲಿಖಿತ್, ದರ್ಶನ್, ಶಶಾಂಕ್, ಮನೋಹರ್, ಪ್ರಮೋದ್, ಇತರರು ಇದ್ದರು.