ಕಲಬುರಗಿ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ದೇವರ ದಾಸೀಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಮಹಾಸ್ವಾಮೀಜಿ, ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ಡಿ. ಲಕ್ಷ್ಮಿ, ಡಾ.ಕರುಣಾ ಜಮದರಖಾನಿ, ಚಂದ್ರಶೇಖರ ಸುಲ್ತಾನಪೂರ್, ರುಕ್ಮಿಣಿ ಸಂಗಾ, ಜಗದೀಶ್ವರಿ ನಾಸಿ ಇತರರಿದ್ದರು.
- ಶಾಸಕ ಅಲ್ಲಮಪ್ರಭು ಪಾಟೀಲ್ ಸಲಹೆ
- ಕಲಬುರಗಿಯಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ
ಕಲಬುರಗಿ: ಮುದನೂರಿನಲ್ಲಿ ಏಳು ತೀರ್ಥಗಳಿಂದ ಪುಟಿದೇಳುವ ನೀರು ಇಂದಿಗೂ ಹರಿಯುತ್ತದೆ, ಬರಗಾಲದಲ್ಲೂ ಬತ್ತುವುದಿಲ್ಲ. ಹೀಗಾಗಿ ದೇವರ ದಾಸಿಮಯ್ಯನವರ ಪವಾಡ ಇಂದಿಗೂ ಜೀವಂತ ಸಾ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪವಾಡ ಪುರುಷರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ದಾಸಿಮಯ್ಯನವರು ಅಪ್ಪಟ ಶಿವಭಕ್ತರು. ಒಂದು ಬಾರಿ ಭೀಕರ ಬರಗಾಲ ಬಂದಾಗ ಇವರು ದಾಸೋಹ ನಡೆಸಲು ಹರಸಾಹಸ ಪಟ್ಟ ಕಥೆಗಳು ಅವರ ಜೀವನ ಚರಿತ್ರೆಯಲ್ಲಿ ಕಾಣಬಹುದು. ಸರಳ ಕನ್ನಡದಲ್ಲಿ ಗಹನವಾದ ತತ್ವ, ವಚನಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸಿದರು. ಈ ಪವಾಡ ಪುರುಷರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನೇಕಾರರ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ಭರವಸೆ ನೀಡಿದ್ದಾರೆ. ಶಾಸಕರ ಅನುದಾನದಿಂದ ನಾನೂ ಹಣ ನೀಡುತ್ತೇನೆ. ನಿಮ್ಮ ಧ್ವನಿಯಾಗಿ ವಿಧಾನಸೌಧದಲ್ಲಿ ನಾನು ಇರುತ್ತೇನೆ. ಇಂತಹ ಪುಣ್ಯಾತ್ಮರ ಜಯಂತಿ ಅರ್ಥಪೂರ್ಣವಾಗಿ ಮಾಡಿದ್ದು ಸಂತಸದ ಸಂಗತಿ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣುಕುಮಾರ ಎಂ.ವೈ. ಪಾಟೀಲ್ ಮಾತನಾಡಿ, ಈ ಹಿಂದೆ ಬೈರಾಮಡಗಿಯಂತಹ ಗ್ರಾಮಗಳಲ್ಲಿ ನೂಲಿನ ಕೆಲಸಗಳು ವ್ಯಾಪಕವಾಗಿದ್ದವು. ಆದರೆ ಕಾಲಾನಂತರದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಈ ವೃತ್ತಿ ಕಮ್ಮಿಯಾಗಿದ್ದು, ಜನರು ಶಿಕ್ಷಣ ಪಡೆದು ವಿವಿಧ ೇತ್ರಗಳತ್ತ ಮುಖ ಮಾಡಿದ್ದಾರೆ ಎಂದರು.
ಬಸವಾದಿ ಶರಣರ ಮತ್ತು ದೇವರ ದಾಸಿಮಯ್ಯನವರ ವಚನಗಳ ಆದರ್ಶದಂತೆ ಸಮಾಜ ಸಂಟಿತವಾಗಿ ಶಕ್ತಿಯುತವಾಗಬೇಕು. ಸಮಾಜದ ಪ್ರತಿಯೊಂದು ಕಾರ್ಯಕ್ಕೂ ತಾವು ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ.ಲಕ್ಷಿ$್ಮನಾರಾಯಣ ಮಾತನಾಡಿದರು. ಮೈಂದರಗಿಯ ಸಿದ್ಧಾಶ್ರಮ ವಿರಕ್ತ ಮಠದ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿ, ದಾಸಿಮಯ್ಯನವರು ರಚಿಸಿದ 179 ವಚನಗಳನ್ನೇ ಆಧಾರವಾಗಿಟ್ಟುಕೊಂಡು 12ನೇ ಶತಮಾನದ ಶರಣರು ಕಾಯಕವೇ ಕೈಲಾಸ ಎಂದು ತಮ್ಮ ಜೀವನ ನಡೆಸಿದ್ದಾರೆ. ಭಕ್ತಿ ಯಾರಂತೆ ಮಾಡಬೇಕು ಅಂತ ಕೇಳಿದರೆ ದೇವರ ದಾಸಿಮಯ್ಯನವರಂತೆ ಭಕ್ತಿ ಮಾಡಬೇಕು ಎಂದು ಬಸವಾದಿ ಶರಣರು ಹೇಳಿದ್ದಾರೆ.
ಹೆಣ್ಣು ಸಾಾತ್ ಭಗವಂತಿ ಮತ್ತು ಪಾರ್ವತಿ ಸ್ವರೂಪಿ ಎಂಬ ಸಿದ್ಧರಾಮರ ಮಾತು ಪ್ರಸ್ತಾಪಿಸಿ, ಹೆಣ್ಣು, ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲರೊಳಗೂ ಇರುವ ಆತ್ಮ ಪರಮಾತ್ಮನ ಸ್ವರೂಪ ಎಂದು ದಾಸಿಮಯ್ಯನವರು ಸಾರಿದ್ದಾರೆ ಎಂದರು.
ಕಲಬುರಗಿ ಅನನ್ಯ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಕರುಣಾ ಜಮದಾರಖಾನಿ ವಿಶೇಷ ಉಪನ್ಯಾಸ ನೀಡಿ, ದೇವರ ದಾಸಿಮಯ್ಯನವರ ಜೀವನ, ವಚನಗಳ ಸಾರ ಕುರಿತು ಸಂಪ್ತ ಮಾಹಿತಿ ನೀಡಿದರು.
ಲಕ್ಷಿ$್ಮನಾರಾಯಣ, ರುಕ್ಮಿಣಿ ಗಣೇಶ ಸಂಗಾ ಅವರಿಗೆ ನೇಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಂಟು ಜನರಿಗೆ ದೇವರ ದಾಸಿಮಯ್ಯ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಪ್ರಾಸ್ತಾವಿಕ ಮಾತನಾಡಿದರು.
ದೇವರ ದಾಸಿಮಯ್ಯ ಸಿದ್ಧಾರೂಢ ಮಠ, ಡಬರಾಬಾದ ಅಭಿನವ ರೇವಣಸಿದ್ಧ ಪಟ್ಟದೇವರು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶಿವಪ್ರಭು ಹಿರೇಮಠ, ಕರ್ನಾಟಕ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಪ್ರದಿಪ ಗಣೇಶ ಸಂಗಾ, ಕಲಬುರಗಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್ ಯಳಸಂಗಿ, ಚಂದ್ರಶೇಖರ ಸುಲ್ತಾನಪೂರ್ ಇತರರಿದ್ದರು.
ನೇಕಾರರ ಶಕ್ತಿ ಕೇವಲ ಮತಕ್ಕೆ ಸೀಮಿತವಾಗದೆ, ಅವರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಸರ್ಕಾರ ಒತ್ತು ನೀಡಬೇಕು. ಜಿಲ್ಲಾ ಕೇಂದ್ರ ಕಲಬುರಗಿಯಲ್ಲಿ ಸಮುದಾಯದ ಚಟುವಟಿಕೆಗಳಿಗಾಗಿ ಸುಸಜ್ಜಿತ ನೇಕಾರ ಭವನ ನಿರ್ಮಿಸಬೇಕು. ಶಾಸಕರು ತಮ್ಮ ಶಕ್ತಿ ಬಳಸಿ ಸರ್ಕಾರದಿಂದ ಅನುದಾನ ಒದಗಿಸಿಕೊಡಬೇಕು.
ಸಂಸ್ಥಾಪಕ ಅಧ್ಯಕ್ಷ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.