ನೇಗಿನಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ಪುರಸತ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. ಶಾಸಕ ಬಾಬಾಸಾಹೇಬ ಪಾಟೀಲ, ನಿಜಗುಣಾನಂದ ಸ್ವಾಮೀಜಿ ಇತರರಿದ್ದರು. 
ರಾಜ್ಯ

ಮಾತಿಗೆ ಸೀಮಿತಗೊಳಿಸದೆ ಬದುಕಿನಲ್ಲಿ ಕನ್ನಡ ರೂಢಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಎಲ್ಲೆಡೆ ರಾರಾಜಿಸಿದ ಹಳದಿ&ಕೆಂಪು ಬಾವುಟಗಳು, ಪ್ರಮುಖ ಬೀದಿ, ಮನೆಗಳ ಚಾವಣಿಗಳಲ್ಲೂ ಕನ್ನಡದ ಕಂಪು, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ. ಅರ ಹಬ್ಬದ ಅಂಗವಾಗಿ ಬೈಲಹೊಂಗಲ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದ ನೇಗಿನಹಾಳದಲ್ಲಿ ಮಂಗಳವಾರ ಕಂಡು ಬಂದ ದೃಶ್ಯಗಳಿವು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ಪುರಸತ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿ ಮಾತನಾಡಿ, ಕನ್ನಡ ನಮ್ಮ ಬದುಕಿನ ಉಸಿರು. ಎಲ್ಲರೂ ಕನ್ನಡವನ್ನು ಕೇವಲ ಮಾತನಾಡಲು ಸೀಮಿತಗೊಳಿಸದೆ, ಬದುಕಿನಲ್ಲಿ ಬೆಳೆಸಬೇಕು. ಕನ್ನಡ ನಮ್ಮ ಅಸ್ತಿತ್ವದ ಗುರುತು ಎಂದು ಕರೆ ನೀಡಿದರು.
ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಎಸ್​.ಕೌಜಲಗಿ ತಮ್ಮ ಭಾಷಣದಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಭಾಷೆ ಮತ್ತು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಬಾರದು. ತಾಲೂಕಿನ ಪ್ರಗತಿ, ಜನರ ಸಮಸ್ಯೆ, ವರ್ತಮಾನದ ಸವಾಲು ಹಾಗೂ ಭವಿಷ್ಯದ ದಾರಿಗಳ ಕುರಿತು ಸಮಗ್ರ ಚಿಂತನೆ ನಡೆಯುವ ವೇದಿಕೆಯಾಗಬೇಕು. ಭಾಷೆ, ಸಾಹಿತ್ಯ, ಸಂಸತಿ, ಜಾನಪದ ಹಾಗೂ ಲಲಿತಕಲೆಗಳ ಸ್ಥಿತಿಗತಿ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದು ತಿಳಿಸಿದರು. ಸಮ್ಮೇಳನದ ಅಧ್ಯತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಯುವ ಬರಹಗಾರರು, ಕವಿಗಳು ಬೆಳೆಯಬೇಕು. ಸಮ್ಮೇಳನಗಳು ಯುವ ಪೀಳಿಗೆಗೆ ಪ್ರೇರಣೆಯಾಗುತ್ತವೆ ಎಂದರು. ನಿಜಗುಣಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡವನ್ನು ತಾಯಿಯಾಗಿ ಸ್ವೀಕರಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂದೇಶ ನೀಡಿದರು. ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಸ್ಥಳಿಯ ಅದ್ವೆ$ೃತಾನಂದ ಸ್ವಾಮೀಜಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಮಾಜಿ ಉಪಾಧ್ಯ ಮಹಾಂತೇಶ ತುರಮರಿ, ತಹಸೀಲ್ದಾರ್​ ಎಚ್​.ಎನ್​.ಶಿರಹಟ್ಟಿ, ಬಿಇಒ ಸಿ.ವೈ.ತುಬಾಕಿ, ಶಿವಾನಂದ ಕುಡಸೋಮಣ್ಣವರ, ಕಲಾವಿದ ಸಿ.ಕೆ.ಮೆಕ್ಕೇದ, ಮೋಹನ ಪಾಟೀಲ, ಗ್ರಾಪಂ ಅಧ್ಯೆ ಮಹಾದೇವಿ ಕೋಟಗಿ, ಮಡಿವಾಳಪ್ಪ ಕಲ್ಲೋಳಿ, ಎಂ.ಎಸ್​.ಕುಡವಕ್ಕಲಗಿ, ಎಸ್​.ಡಿ.ಗಂಗಣ್ಣವರ, ಲಿಂಗರಾಜ ಅಂಗಡಿ, ವೈ.ಎಂ.ಯಾಕೊಳ್ಳಿ ಇತರರಿದ್ದರು. ಎನ್​.ಆರ್​.ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು.