ಚಿಟಗುಪ್ಪಾ ತಾಲೂಕಿನ ಚಾಂಗಲೇರಾ ಗ್ರಾಮದಲ್ಲಿ ಬುದ್ಧ ಜಯಂತಿ ಕಾರ್ಯಕ್ರಮವನ್ನು ಾಸಕ ಡಾ.ಶೈಲೇಂದ್ರ ಬೆಲ್ದಾಳೆ ಉದ್ಘಾಟಿಸಿದರು. ಪೂಜ್ಯ ಭಂತೆ, ಶಿವಶರಣಪ್ಪ ಹುಗ್ಗಿ ಪಾಟೀಲ, ಮಹೇಶ ಗೋರನಾಳಕರ್, ಸತೀಶ್ ಸಾಗರ ಇತರರಿದ್ದರು.
- ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕರೆ
- ಚಾಂಗಲೇರಾದಲ್ಲಿ ಜಯಂತಿ ಬುದ್ಧನ ಶಾಂತಿ ಸಂದೇಶ ಅಳವಡಿಸಿಕೊಳ್ಳಿ
ಚಿಟಗುಪ್ಪಾ: ಪ್ರತಿಯೊಬ್ಬರೂ ಸ್ವಯಂ ಪ್ರಕಾಶಿತರಾಗಲು ಗೌತಮ ಬುದ್ಧ ಮಾರ್ಗ ತೋರಿಸಿದ್ದಾರೆ. ಅಹಂಕಾರ ಬಿಟ್ಟು ಕರುಣೆ ಮತ್ತು ಪ್ರೀತಿಯಿಂದ ಸರಳ ಜೀವನ ನಡೆಸಲು ಬುದ್ಧರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.
ಚಾಂಗಲೇರಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂದಿಂದ 2570ನೇ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೌತಮ ಬುದ್ಧರು ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿದ್ದು, ಅವು ಇಡೀ ಮಾನವಕುಲಕ್ಕೆ ಮಾನವೀಯತೆಯ ಮಾರ್ಗದರ್ಶಿಯಾಗಿವೆ ಎಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೈಜ್ಞಾನಿಕ ಧಮ್ಮವನ್ನು ಪರಿಚಯಿಸಿದ್ದು, ಅವರ ಮಾರ್ಗದಲ್ಲಿ ನಾವು ನಡೆಯಬೇಕು. ಅಂಬೇಡ್ಕರ್ ಅವರು ಜ್ಞಾನ ಸಂಪಾದನೆಗಾಗಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದ್ದ ಗ್ರಂಥಾಲಯ ನಿರ್ಮಿಸಿದ್ದರು. ಹೀಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಿ ಓದು ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೂಜ್ಯ ಭಂತೆ ಧಮ್ಮ ದೀಪ ಸಾನ್ನಿಧ್ಯದಲ್ಲಿ ತ್ರೀಶರಣ ಪಂಚಶೀಲ ಪಠಣ ನಡೆಯಿತು.
ಬುದ್ಧ&ಬಸವ&ಅಂಬೇಡ್ಕರ್ ವಿಚಾರವಾದಿ ಶಿವಶರಣಪ್ಪ ಹುಗ್ಗಿ ಪಾಟೀಲ ಅವರು ಮಾತನಾಡಿ, ಬುದ್ಧರು ಪ್ರಾಣಿ, ಪ ಸೇರಿದಂತೆ ಸಕಲ ಜೀವಿಗಳಿಗೆ ಕರುಣೆ ತೋರಿದ ಪ್ರಥಮ ಗುರು. ಧ್ಯಾನ ಮಾರ್ಗವನ್ನು ವಿಶ್ವಕ್ಕೆ ಪರಿಚಯಿಸಿದ ಬುದ್ಧರು ಮಾನವ ಕಲ್ಯಾಣಕ್ಕಾಗಿ ದು@ಖದ ಮೂಲ ಕಾರಣವನ್ನು ವಿವರಿಸಿದ ಮಹಾನ್ ತತ್ವರಾಗಿದ್ದಾರೆ ಎಂದು ತಿಳಿಸಿದರು.
ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿಜವಾದ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಡಾ. ಅಂಬೇಡ್ಕರ್ ಯುವಕ ಸಂದ ಅಧ್ಯಕ್ಷ ಸತೀಶ್ ಸಾಗರ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಪ್ರೇಮಸಾಗರ ದಾಂಡೆಕರ್, ತಾಳಮಡಗಿ ಪಿಯು ಕಾಲೇಜಿನ ಪ್ರಾಂಶುಪಾಲ ಹಣಮಂತರಾವ ಗೌಡಗಾಂವಕರ್ ಮಾತನಾಡಿದರು.
ಬೆಮಳಖೇಡಾ ಠಾಣೆಯ ಪಿಎಸ್ಐ ಸವೀತಾ ಪ್ರೀಯಾಂಕ್, ಜೈಸಿಂಗ್ ರಾಠೋಡ್, ಬಸವರಾಜ ಪವಾರ ಇತರರಿದ್ದರು. ಮಿಥುನ್ ವರ್ಮಾ ನಿರೂಪಣೆ ಮಾಡಿದರು. ಅರ್ಜುನ ಶರ್ಮಾ ಸ್ವಾಗತಿಸಿದರು. ಪ್ರಕಾಶ ಪ್ರಸಾದ್ ವಂದಿಸಿದರು.