ಭಾಲ್ಕಿ ತಾಲೂಕಿನ ಡೊಂಗರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸಂಗೀತ ಶಿಕ ಸಂಗಯ್ಯ ಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಗುರುಬಸವ ಪಟ್ಟದ್ದೇವರು, ಸೋಮಶೇಖರ ಬಿರಾದಾರ್​, ಸಂಗಮೇಶ ಬಿರಾದಾರ್​, ಸೂರ್ಯಕಾಂತ ಬಿರಾದಾರ್​, ಮಾಣಿಕ ನೇಳಗೆ ಇತರರಿದ್ದರು. 
ರಾಜ್ಯ

ಸರಳ ಜೀವನ ಮೈಗೂಡಿಸಿಕೊಳ್ಳಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುಬಸವ ಪಟ್ಟದ್ದೇವರು ಸಲಹೆ
  • ಡೊಂಗರಗಿಯಲ್ಲಿ ಸಂಗೀತ ಕಾರ್ಯಕ್ರಮ
ಭಾಲ್ಕಿ: ಸರಳ ಜೀವನವೇ ಶ್ರೇಷ್ಠ. ಆಡಂಬರ ಜೀವನದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಇದರಿಂದ ಪೈಪೋಟಿ ಉಂಟಾಗಿ ದ್ವೇಷದ ಕತ್ತಲೆ ಆವರಿಸುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಡೊಂಗರಗಿ ಗ್ರಾಮದಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್​ ಆ್ಯಂಡ್​ ಚಾರಿಟೇಬಲ್​ ಟ್ರಸ್ಟ್​ ಸೋಮವಾರ ಏರ್ಪಡಿಸಿದ್ದ ಸಂಗೀತ ಶಿಕ್ಷಕ ಸಂಗಯ್ಯ ಸ್ವಾಮಿ ಹಿರೇಮಠ ಅವರ ವಯೋನಿವೃತ್ತಿ ಅಭಿನಂದನೆ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಾರ್ಥಕ ಬದುಕಿಗೆ ಸರಳ ವ್ಯಕ್ತಿತ್ವವೇ ಬಹಳ ಮುಖ್ಯ. ಆಡಂಬರದ ಬದುಕಿಗಿಂತ ಆತ್ಮಸಾಯ ಬದುಕು ನಿಜವಾದದ್ದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್​ ಚಿದ್ರಿ ಮಾತನಾಡಿ, ಅಧಿಕಾರ, ಹುದ್ದೆ ಶಾಶ್ವತವಲ್ಲ. ಆದರೆ ಸಿಕ್ಕ ಅವಧಿಯಲ್ಲಿ ನಾವು ಮಾಡುವ ಸತ್ಕಾರ್ಯಗಳು ಸ್ಮರಣೀಯವಾಗಿ ಉಳಿಯುತ್ತವೆ. ಸರ್ಕಾರಿ ನೌಕರರು ತಮ್ಮ ಸೇವಾವಧಿ-ಯಲ್ಲಿ ಯಾವುದೇ ರೀತಿಯ ಲೋಪ ಮಾಡದಂತೆ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ನಿವೃತ್ತಿ ನಂತರವೂ ಸಾರ್ವಜನಿಕರು ಸ್ಮರಿಸುತ್ತಾರೆ ಎಂದು ಹೇಳಿದರು.
ಸಾಹಿತಿ ಹಾಗೂ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಮಾಣಿಕ ನೇಳಗೆ ಮಾತನಾಡಿ, ಸೇವೆಯಿಂದ ನಿವೃತ್ತಿ ಹೊಂದಿದ ಸಂಗಯ್ಯ ಹಿರೇಮಠ ಅವರು ಮುಂದಿನ ಪೀಳಿಗೆಗೆ ಸಂಗೀತ ಸೇವೆ ನೀಡುವುದನ್ನು ಮುಂದುವರಿಸಬೇಕು ಎಂದು ಕೋರಿದರು.
ಅಧ್ಯತೆ ವಹಿಸಿದ್ದ ವೈಷ್ಣೋದೇವಿ ಕಲ್ಚರಲ್​ ಟ್ರಸ್ಟ್​ ಅಧ್ಯಕ್ಷ ಸಂಗಮೇಶ ಬಿರಾದಾರ್​, ಜಿಪಂ ಯೋಜನಾ ನಿರ್ದೇಶಕ ಸೂರ್ಯಕಾಂತ ಬಿರಾದಾರ್​ ಮಾತನಾಡಿದರು.
ಹುಮನಾಬಾದ್​ ಪಿಎಸ್​ಐ ರಾಚಯ್ಯ ಸ್ವಾಮಿ, ನೌಕರರ ಸಂಘದ ಜಿಲ್ಲಾ ಖಜಾಂಚಿ ದೇವಪ್ಪ ಚಾಂಬೋಳೆ, ಪಿಕೆಪಿಎಸ್​ ಉಪಾಧ್ಯಕ್ಷ ಚಂದ್ರಕಾಂತ ಬಿರಾದಾರ್​, ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ್​, ಅನೀಲಕುಮಾರ, ಮಹಾಂತೇಶ, ಧನರಾಜ, ಮಹಾದೇವ, ಪಂಡಿತ, ಚಂದ್ರಕಾಂತ, ರಮೇಶ, ಶಿವರಾಜ, ಧನಯ್ಯ, ವರದಯ್ಯ, ಲೋಕೇಶ, ಆಶಿಶ್​, ಬಂಡೆಪ್ಪ, ನಾಗನಾಥ, ದತ್ತಾತ್ರಿ, ಭಾರತಿ ಬಿರಾದಾರ್​, ಮಹಾನಂದಾ, ಸಂಗೀತಾ, ಸೂಗಮ್ಮ ಇತರರಿದ್ದರು. ಶರಣಯ್ಯ ಸ್ವಾಮಿ ಸ್ವಾಗತಿಸಿದರು. ನವಲಿಂಗಕುಮಾರ ಪಾಟೀಲ್​ ನಿರೂಪಣೆ ಮಾಡಿದರು. ಪ್ರಗತಿ ಹಿರೇಮಠ ವಂದಿಸಿದರು.
ಕಲಾವಿದರಾದ ಕೆಂಭಾವಿಯ ಬಸವರಾಜ ಭಂಟನೂರ, ಜನಾರ್ಧನ ವಾಮಾರೆ, ಶಿವದೇವ ಸಂಸ್ಥಾನಮಠ ಮೈಸೂರು, ಕಲಬುರಗಿಯ ಹಣಮಂತರಾಯ ಕುಲಕರ್ಣಿ, ಬಸವಕಲ್ಯಾಣದ ರಾಮಚಂದ್ರ ಕಲಹಿಪ್ಪರ್ಗಿ, ರಾಜಕುಮಾರ ಹೂಗಾರ, ರಮೇಶ ಗರುಡಕರ್​, ಮಲ್ಲಿಕಾರ್ಜುನ ನಾಗಮಾರಪಳ್ಳಿ, ಜೈ ಹನುಮಾನ ಭಜನೆ ಮತ್ತು ಸಾಂಸತಿಕ ಸಂ ಹಾಗೂ ಅಕ್ಕಮಹಾದೇವಿ ಮಹಿಳಾ ಭಜನಾ ಸಂದವರು ಸಂಗೀತ ಸೇವೆ ನೀಡಿದರು. ಗ್ರಾಮದ ಇಬ್ಬರು ಸರ್ಕಾರಿ ನೌಕರರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.