ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ ಕಲಬುರಗಿಯ ಸರ್ಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ 1 ರಿಂದ 8ನೇ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಕಲಬುರಗಿಯ ಸರ್ಕಾರಿ ಕಿವುಡ ಮಕ್ಕಳ ಶಾಲೆಯ ಅಧೀಕ್ಷಕರು ತಿಳಿಸಿದ್ದಾರೆ.
ಈ ಶಾಲೆಯಲ್ಲಿ 6 ರಿಂದ 14 ವರ್ಷದೊಳಗಿನ ಶ್ರವಣದೋಷವುಳ್ಳ ಬಾಲಕರು ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶ ಪಡೆದ ಬಾಲಕರಿಗೆ ಶಿಕ್ಷಣ, ಕಂಪ್ಯೂಟರ್, ಇತ್ಯಾದಿ ತರಬೇತಿ ಜೊತೆಗೆ ಮಕ್ಕಳಿಗೆ ಉಚಿತ ವಸತಿ, ಊಟ ಮತ್ತು ಸಮವಸ್ತ್ರ ಒದಗಿಸಲಾಗುತ್ತದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಸಂತೋಷ-9741953333, ಮಹಾಂತೇಶ-743234892 ಹಾಗೂ ವೈಶಾಲಿ-9611364257 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.