ಜೇವರ್ಗಿಯ ಬಸವೇಶ್ವರ ನಗರದ ಶ್ರೀ ರಾವೇಂದ್ರ ಸ್ವಾಮಿ ಮಠದಲ್ಲಿ ಅಧಿಕ ಮಾಸ ನಿಮಿತ್ತ ಭಾನುವಾರ ಧನ್ವಂತರಿ ಹೋಮ ನೆರವೇರಿತು.  
ರಾಜ್ಯ

ಜೇವರ್ಗಿಯಲ್ಲಿ ಅಧಿಕ ಮಾಸ ಉತ್ಸವ ಸಂಪನ್ನ

ಜೇವರ್ಗಿ: ಬಸವೇಶ್ವರ ನಗರದ ಶ್ರೀರಾವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಅಧಿಕ ಮಾಸ ಉತ್ಸವಕ್ಕೆ ಭಾನುವಾರ ಧನ್ವಂತರಿ ಹೋಮ, ಸತ್ಯನಾರಾಯಣ ಪೂಜೆಯೊಂದಿಗೆ ಅದ್ದೂರಿ ತೆರೆ ಬಿದ್ದಿತು. ಬೆಳಗ್ಗೆ 6ಕ್ಕೆ ಸುಪ್ರಭಾತ, 7ಕ್ಕೆ ಅಷ್ಟೋತ್ತರ, 8ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ, 9ಕ್ಕೆ ಧನ್ವಂತರಿ ಹೋಮ ಜರುಗಿತು. ಬಳಿಕ ಮಹಿಳೆಯರಿಂದ ಲ್ಮ ಶೋಭಾನ, ಕುಂಕುಮಾರ್ಚನೆ ಸೇವೆ ಜರುಗಿತು. ಮದ್ಯಾಹ್ನ 12ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಶ್ರೀಮಠದ ಅರ್ಚಕ ಸವೋರ್ತ್ತಮಾಚಾರ್ಯ ಜೋಶಿ, ರಾವೇಂದ್ರಾಚಾರ್ಯ ಕೆಂಬಾವಿ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿಸಿದರು. ರಾವೇಂದ್ರ ಸ್ವಾಮಿಗಳ ಮಠ ಟ್ರಸ್ಟ್​ ಕಮಿಟಿ ಅದ್ಯಕ್ಷ ರಮೇಶಬಾಬು ವಕೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಪ್ರಮುಖರಾದ ಮುದಗಲರಾವ ಕುಲಕರ್ಣಿ, ಆರ್​.ಬಿ.ಕುಲಕರ್ಣಿ, ಶಾಮರಾವ ಕುಲಕರ್ಣಿ ರೇವನೂರ, ಗುರುರಾಜ ಜೋಶಿ, ಹಳ್ಳೆಪ್ಪಾಚಾರ್ಯ ಜೋಶಿ, ದತ್ತಾತ್ರೇಯರಾವ ಕುಲಕರ್ಣಿ ಕೋಳಕೂರ, ಬಾಪುರಾವ ಪಾಗಾ, ಗುರುರಾಜ ಆಲಬಾಳ, ಕಿಶನರಾವ ಕುಲಕರ್ಣಿ ಹೇಮನೂರ, ಸುಬ್ಬಾರಾವ ಸುಬೇದಾರ, ಅಪ್ಪಾರಾವ ಕೂಟನೂರ, ಪಾಂಡು ಅವರಾದ, ಲ್ಮಕಾಂತ ಕುಲಕರ್ಣಿ ಹೋತಿನಮಡು, ಅನಂತಕೃಷ್ಣ ವಕೀಲ, ಕಾರ್ತಿಕ ವಕೀಲ, ಭೀಮಸೇನ ಕುಲಕರ್ಣಿ, ದತ್ತು ರೇವನೂರ, ಗುರುರಾಜ ಪುದ್ದಾರ ಇತರರಿದ್ದರು.