ಅಧಿಕ ಗುರುವಾರದ ನಿಮಿತ್ತ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆ ಆಗಮಿಸಿರುವ ಅಸಂಖ್ಯ ಭಕ್ತರು
- ತ್ರಿಮೂರ್ತಿ ಸ್ವರೂಪದ ಭಗವಂತನ ದರ್ಶನ ಪಡೆದ ಭಕ್ತರು
- ಸಂಗಮದಲ್ಲಿ ಪುಣ್ಯ ಸ್ನಾನ
ಅಫಜಲಪುರ: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಅಧಿಕ ಮಾಸದ ಗುರುವಾರದ ನಿಮಿತ್ತ ಅಸಂಖ್ಯ ಭಕ್ತರು ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.
ನಸುಕಿನ ಜಾವ 3.30ಕ್ಕೆ ಮಹಾರಾಜರಿಗೆ ಕಾಕಡಾರತಿ ಮೂಲಕ ಪೂಜಾ ಕೈಂಕರ್ಯ ಪ್ರಾರಂಭವಾದವು. ಬಳಿಕ ಶ್ರೀ ದತ್ತ ಮಹಾರಾಜರ ಪಾದುಕೆಗಳಿಗೆ ಕೇಸರಿ, ಕಸ್ತೂರಿ, ಸುಗಂಧ ಲೇಪನ ಜರುಗಿತು. ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಅಷ್ಟಗಂಧ, ಮಹಾರುದ್ರಾಭಿಷೇಕ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಅಪಾರ ಭಕ್ತರು ಬೆಳಗ್ಗೆ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಔದುಂಬರ ಮರದ ದರ್ಶನ ಪಡೆದರು. ಬಳಿಕ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ಬಂದು ಗುರುವಿನ ದರ್ಶನ ಪಡೆದರು. ಮಹಾಮಂಗಳಾರತಿ ಪಡೆಯುವುದರ ಜತೆಗೆ ಪ್ರಸಾದ ಸೇವಿಸಿ ಧನ್ಯರಾದರು.
ಅಧಿಕ ಮಾಸಕ್ಕೆ ಸ್ವತ- ಶ್ರೀ ಮಹಾವಿಷ್ಣುವೇ ಅಧಿಪತಿ. ದತ್ತಾತ್ರೇಯರು ಬ್ರಹ್ಮ, ವಿಷ್ಣು, ಮಹೇಶ್ವರರ ಏಕರೂಪವಾಗಿದ್ದು, ಹೀಗಾಗಿ ಪುರುಷೋತ್ತಮ ಮಾಸದಲ್ಲಿ ದತ್ತ ೇತ್ರಕ್ಕೆ ಹೋಗುವುದು ವಿಷ್ಣು ಮತ್ತು ದತ್ತರಿಬ್ಬರ ಅನುಗ್ರಹವನ್ನು ಒಟ್ಟಿಗೆ ಪಡೆದಂತಾಗುತ್ತದೆ ಎಂಬ ಪ್ರತಿತಿ ಇದೆ. ಅಲ್ಲದೆ ಅಧಿಕ ಮಾಸದಲ್ಲಿ ಮಾಡಿದ ತೀರ್ಥಯಾತ್ರೆ, ಪುಣ್ಯ ಸ್ನಾನ, ದಾನ, ಜಪಗಳಿಗೆ ನೂರು ಪಟ್ಟು ಹೆಚ್ಚು ಫಲ ದೊರೆಯುತ್ತದೆ. ಗಾಣಗಾಪುರದ ಸಂಗಮದಲ್ಲಿ ಮಿಂದು, ನಿರ್ಗುಣ ಮಠದಲ್ಲಿ ದತ್ತ ನಾಮ ಸ್ಮರಿಸಿದರೆ ಜನ್ಮಜನ್ಮಾಂತರದ ಕರ್ಮ ಕಳೆಯುತ್ತದೆ ಎಂಬುದು ಭಕ್ತರ ಅನುಭವದ ನುಡಿ.
ನಾಗೇಶಭಟ್ಟ ಪೂಜಾರಿ, ದತ್ತಾತ್ರೇಯ ಪೂಜಾರಿ, ಮನೋಹರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಕಲ್ಲಮಭಟ್ಟ ಪೂಜಾರಿ, ಪ್ರಿಯಾಂಕ್ ಪೂಜಾರಿ, ಉದಯ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರಫುಲ್ ಪೂಜಾರಿ, ಪ್ರವಿಣ ಪೂಜಾರಿ, ಕರುಣಾಕರ ಪೂಜಾರಿ, ದಿಗಂಬರ ಪೂಜಾರಿ, ಪ್ರಸಾದ ಪೂಜಾರಿ, ಅವಧೂತ ಪೂಜಾರಿ, ನರಹರಿ ಪೂಜಾರಿ, ಗುಂಡುಭಟ್ಟ ಪೂಜಾರಿ, ಕೌಸ್ತುಭ ಪೂಜಾರಿ, ದೇವು ಪೂಜಾರಿ, ಭರತ ಪೂಜಾರಿ, ರೋಹಿತ ಪೂಜಾರಿ, ಕಿರಣ ಪೂಜಾರಿ, ಶ್ರೀಧರ ಪೂಜಾರಿ, ಅಭಯ ಪೂಜಾರಿ, ಚಂದನ ಪೂಜಾರಿ, ಶರತ್ ಪೂಜಾರಿ, ಆಶೀರ್ವಾದ ಪೂಜಾರಿ, ಅರ್ಲಕ ಪೂಜಾರಿ, ಸರ್ವೇಶ ಪೂಜಾರಿ, ಚೇತನ್ ಪೂಜಾರಿ, ಪ್ರದ್ಯುಮ್ನ ಪೂಜಾರಿ, ಪ್ರಶಾಂತ ಪೂಜಾರಿ, ಸ್ವರೂಪ ಪೂಜಾರಿ, ಪ್ರತಿಕ್ ಪೂಜಾರಿ, ಸಮರ್ಥ ಪೂಜಾರಿ ಇತರರಿದ್ದರು.
- ಸೂಯೋರ್ದಯಕ್ಕೂ ಮುನ್ನ ಭೀಮಾ-ಅಮರ್ಜಾ ಸಂಗಮದಲ್ಲಿ ಮಿಂದು, ಪಿತೃಗಳಿಗೆ ತರ್ಪಣ ಬಿಡುವುದು ಶ್ರೇಷ್ಠ
- 7 ದಿನ ಕಾಲ ಸಂಗಮದಲ್ಲಿ ವಾಸ್ತವ್ಯ ಮಾಡಿ ಗುರುಚರಿತ್ರೆ ಪಾರಾಯಣ ಮಾಡುವುದು ಫಲದಾಯಕ
- ದಿಗಂಬರಾ ದಿಗಂಬರಾ ಶ್ರೀಪಾದ ಶ್ರೀವಲ್ಲಭ ದಿಗಂಬರಾ ಎಂಬ ಮಹಾಮಂತ್ರ ಅಥವಾ ಓಂ ದ್ರಾಂ ದತ್ತಾತ್ರೇಯಾಯ ನಮ@ ಮಂತ್ರದ ನಿರಂತರ ಜಪ
- ಶ್ರೀ ನೃಸಿಂಹ ಸರಸ್ವತಿ ಮಹಾರಾಜರು ನಿತ್ಯ ಪ್ರಸಾದಕ್ಕೆ ಬರುತ್ತಾರೆಂಬ ನಂಬಿಕೆಯಿದ್ದು, ಹೀಗಾಗಿ ಮಧುಕರಿ ಸೇವೆ ಶ್ರೇಷ್ಠ
- ನಿರ್ಗುಣ ಮಠದಲ್ಲಿರುವ ಅಶ್ವತ್ಥ ವೃಕ್ಕೆ ಪ್ರದಣೆ ಹಾಕಿ, ನೀರೆರೆಯುವುದು ದತ್ತನಿಗೆ ಪ್ರಿಯವಾದ ಸೇವೆ
"
ಅಧಿಕ ಮಾಸದಲ್ಲಿ ಗಾಣಗಾಪುರದಲ್ಲಿನ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನ ಪಡೆಯುವುದು ಪೂರ್ವ ಪುಣ್ಯವಾಗಿದೆ. ಲೌಕಿಕದ ಜಂಜಾಟವನ್ನು ತಿಂಗಳ ಕಾಲ ಬದಿಗಿಟ್ಟು, ದತ್ತನ ಪಾದದ ಬಳಿ ಕುಳಿತು ನಿನ್ನ ನಾಮವೇ ಗತಿ ಎಂದು ಶರಣಾಗೋಣ. ಪುರುಷೋತ್ತಮನಾದ ಶ್ರೀ ದತ್ತನ ಒಲುಮೆ ನಮ್ಮೆಲ್ಲರಿಗೂ ಸಿಗಲಿ.
— > ಪ್ರಿಯಾಂಕ್ ಪೂಜಾರಿ, ಸಾಲಕಾರಿ ಕಾರ್ಯದರ್ಶಿ, ನಿರ್ಗುಣ ಮಠ