ತಾಲೂಕಿನ ಜನತೆಗೆ ಹೆಚ್ಚುವರಿ ಕೊಡುಗೆ contribution
ಮುಳಬಾಗಿಲು: ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳ ಜತೆಗೆ ತಾಲೂಕಿನ ಜನರಿಗೆ ಹೆಚ್ಚುವರಿ ಗ್ಯಾರಂಟಿ ನೀಡುವ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಆದಿನಾರಾಯಣ ಹೇಳಿದರು. contribution
ನಗರದ ಹೊರವಲಯದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ. ಫೆ.4ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೈದಾನದಲ್ಲಿ ತಾಲೂಕಿನ 20 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸುವ ಜೀವ ಸಂಜೀವಿನಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ತೆಗೆದುಕೊಂಡು ಹೋಗಬಹುದು. ಈಗಾಗಲೇ 9 ಪಂಚಾಯಿತಿಗಳಲ್ಲಿ ಧೀರ್ಘ ಸುಮಂಗಲಿಭವ ಕಾರ್ಯಕ್ರಮ ಪೂರ್ಣಗೊಳಿಸಿದ್ದು, 21 ಗ್ರಾಪಂ ಮತ್ತು ಮುಳಬಾಗಿಲು ನಗರದಲ್ಲಿ ಮುಂದುವರೆಯಲಿದೆ ಎಂದರು.
ರಾಜ್ಯ ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯಕ್ಷ ಎಮ್ಮೆನತ್ತ ಜಿ.ರಾಮಲಿಂಗಾರೆಡ್ಡಿ, ಮುಳಬಾಗಿಲು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಲೋಕೇಶ್, ಮುಖಂಡರಾದ ಎಂ.ಸಿ.ಸರ್ವಜ್ಞ ಗೌಡ, ಗೊಲ್ಲಹಳ್ಳಿ ಸತೀಶ್, ಅನುಸೂಯಮ್ಮ, ನಾಗನಾಥೇಶ್ವರಿ, ಹನುಮನಹಳ್ಳಿ ಸುಬ್ರಹ್ಮಣಿ, ಆರ್.ಎಸ್.ಸುಹಾಸ್, ಎಂ.ಪಿ.ನವೀನ್ ಕುಮಾರ್, ಅಮರ್, ನಗರಸಭೆ ಮಾಜಿ ಸದಸ್ಯರಾದ ಗರಡಿ ಶಂಕರಪ್ಪ, ಶಾಹಿನ್ ಪಾಶ, ಕಲೀಲ್ ಅಹಮದ್ ಇತರರು ಇದ್ದರು.