ಬಸ್​ ವ್ಯವಸ್ಥೆ  
ರಾಜ್ಯ

ವಿಜಯಪುರದಿಂದ ಬೆಂಗಳೂರಿಗೆ ಹೆಚ್ಚುವರಿ ಬಿಎಂಟಿಸಿ ಬಸ್​ಗಳು / VIJAYAPUR

ವಿಜಯಪುರ : ಪಟ್ಟಣದಿಂದ ಬೆಂಗಳೂರು ಕೆಂಪೇಗೌಡ ಬಸ್​ ನಿಲ್ದಾಣಕ್ಕೆ ಬೆಳಗ್ಗೆ 4.30ಕ್ಕೆ ಬಿಎಂಟಿಸಿ ಬಸ್​ ಸೇವೆ ಪ್ರಾರಂಭವಾಗಲಿದೆ ಎಂದು ದೇವನಹಳ್ಳಿ ಬಿಎಂಟಿಸಿ ವ್ಯವಸ್ಥಾಪಕ ಶಮೂನ್​ ಪಾಷಾ ತಿಳಿಸಿದರು. ಬೆಳಗ್ಗೆ 6 ಗಂಟೆಗೆ ಬೆಂಗಳೂರು ಕೆಂಪೇಗೌಡ ಬಸ್​ ನಿಲ್ದಾಣದಿಂದ ಬೂದಿಗೆರೆ, ಬಾಗಲೂರು ಕಡೆಯಿಂದ ವಿಜಯಪುರಕ್ಕೆ ಬಸ್​ ಸಂಚಾರ ಪ್ರಾರಂಭವಾಗುತ್ತಿದ್ದು, ಇದರ ಜತೆಯಲ್ಲಿಯೇ ಮಧ್ಯಾಹ್ನ 3 ಗಂಟೆಗೆ ವಿಜಯಪುರ ಬಸ್​ ನಿಲ್ದಾಣದಿಂದ ಬೂದಿಗೆರೆ, ಬಾಗಲೂರು, ಕೆಂಪೇಗೌಡ ಬಸ್​ ನಿಲ್ದಾಣಕ್ಕೆ ಬಿಎಂಟಿಸಿ ಬಸ್​ ಓಡಾಟ ಸಹ ಪ್ರಾರಂಭ ವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಒತ್ತಾಯ: -ವಿಜಯಪುರ ಪಟ್ಟಣದಿಂದ ಹೊಸಕೋಟೆ, ವೈಟ್​ ಫೀಲ್ಡ್​, ವರ್ತೂರು ಕೋಡಿ, ಮಾರತಳ್ಳಿ ಮುಖಾಂತರ ಮಾರ್ಕೇಟ್​ಗೆ ಈ ಹಿಂದೆ ಹಲವು ಸಿವಿಲ್​ ಬಸ್​ಗಳು ಓಡಾಡುತ್ತಿದ್ದು, ನಂತರದ ದಿನಗಳಲ್ಲಿ ಆ ಬಸ್​ಗಳ ಓಡಾಟ ನಿಂತು ಹೋಗಿದೆ. ಈಗಲೂ ಆ ಭಾಗಕ್ಕೆ ಓಡಾಡಬೇಕೆಂದರೆ ಹೊಸಕೋಟೆಗೆ ಹೋಗಿ, ಅಲ್ಲಿಂದ ಬೇರೆ ಬಸ್​ ಹಿಡಿಯಬೇಕಾಗಿದೆ. ಹೊಸಕೋಟೆಯಲ್ಲಿ ಬಸ್​ ನಿಲ್ದಾಣದಿಂದ ಹೊಸ ಬಸ್​ ನಿಲ್ದಾಣಕ್ಕೆ ತೆರಳಲು ಹಾಗೂ ವಾಪಸ್​ ಬರಲು ಸಹ ಯಾವುದೇ ವ್ಯವಸ್ಥೆಗಳಿಲ್ಲದೆ ಆ ಭಾಗದಲ್ಲಿ ಓಡಾಡುವವರು ತೊಂದರೆಪಡುತ್ತಿರುವುದರಿಂದ ವಿಜಯಪುರದಿಂದ- ಹೊಸಕೋಟೆ, ವೈಟ್​ ಫೀಲ್ಡ್​, ವರ್ತೂರು ಕೋಡಿ, ಮಾರತಹಳ್ಳಿ, ಕೃಷ್ಣರಾಜೇಂದ್ರ ಮಾರುಕಟ್ಟೆಗೆ, ಬಸ್​ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕಕು ಒತ್ತಾಯಸಿದ್ದಾರೆ.