ಆಯುಷ್ಮಾನ್ ಭಾರತ್ ಆಯೋಗ್ಯ ಕರ್ನಾಟಕ ಯೋಜನೆ
- * ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ಸೀಮಿತಗೊಳಿಸಲಾಗಿದೆ
ಬೆಂಗಳೂರು: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಚಿಕಿತ್ಸಾ ವಿಧಾನವನ್ನು ಸೇರ್ಪಡೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆಯು ಹೃದಯದ ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಪರೀಕ್ಷಿಸಲು, ಅವುಗಳಲ್ಲಿರುವ ಅಡಚಣೆಗಳನ್ನು ಪತ್ತೆಹಚ್ಚಲು ಸಹಕಾರಿ. ಇದು ಒಂದು ವಿಶೇಷ ಎಕ್ಸ್-ರೇ ಪರೀಕ್ಷೆಯಾಗಿದೆ. 2025ರ ಅಕ್ಟೋಬರ್‌ನಲ್ಲಿ ನಡೆದ ತಾಂತ್ರಿಕ ಸಭೆಯಲ್ಲಿ ಹೃದ್ರೋಗ ತಜ್ಞರು ಈ ಚಿಕಿತ್ಸಾ ವಿಧಾನಕ್ಕೆ ಶಿಫಾರಸು ಮಾಡಿದ್ದರು.
ಈಗ ಯೋಜನೆಯಡಿ ಈ ಚಿಕಿತ್ಸಾ ವಿಧಾನವನ್ನು ಸೇರ್ಪಡೆ ಮಾಡಿ, ತಲಾ 6,500 ರೂ. ನಿಗದಿಪಡಿಸಲಾಗಿದೆ. ಯೋಜನೆಯಡಿ ಚಿಕಿತ್ಸಾ ವಿಧಾನವು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದ್ದು, ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ಸೀಮಿತಗೊಳಿಸಲಾಗಿದೆ.