ತಿಮ್ಮೇಗೌಡನದೊಡ್ಡಿಯ ಬಸವೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ಶಿಬಿರದಲ್ಲಿ ಸಿಪಿಐ ವಿಜಯಕುಮಾರ್, ಪ್ರಾಂಶುಪಾಲ ಡಾ. ಬಿ. ರಾಜೇಶ್, ಉಪನ್ಯಾಸಕರು, ವಿದ್ಯಾರ್ಥಿಗಳಿ ಇದ್ದರು.
ಬಿಡದಿ:ಸ್ವಸ್ಥ ಸಮಾಜದ ನಿರ್ಮಾಣ ಯುವಕರ ಜವಾಬ್ದಾರಿ ಎಂದು ಬಿಡದಿ ಪೊಲೀಸ್ ಠಾಣೆ ಸಿಪಿಐ ವಿಜಯಕುಮಾರ್ ತಿಳಿಸಿದರು.
ತಿಮ್ಮೇಗೌಡನದೊಡ್ಡಿಯ ಶ್ರೀ ಬಸವೇಶ್ವರ ಪದವಿ ಕಾಲೇಜು, ಶ್ರೀ ಎಚ್.ಎನ್. ಅನಂತಕುಮಾರ್ ಪದವಿ ಪೂರ್ವ ಕಾಲೇಜು ಮತ್ತು ಬಿಡದಿ ಪೊಲೀಸ್ ಠಾಣೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ಇಂದಿನ ಯುವ ಜನಾಂಗವು ಮಾದಕ ದ್ರವ್ಯಗಳಿಗೆ ದಾಸರಾಗುತ್ತಿರುವುದು ಕಳವಳಕಾರಿ ಎಂದರು. society
ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯ ಇಂದಿನ ಯುವಜನಾಂಗಕ್ಕಿದೆ. ಆದರೆ, ಇಂದಿನ ಯುವಜನಾಂಗವು ಮಾದಕ ವ್ಯಸನಿಗಳಾಗಿ ಮನೆಯವರಿಗಷ್ಟೇ ಅಲ್ಲ, ಸಮಾಜಕ್ಕೂ ಕಂಠಕಪ್ರಾಯರಾಗುತ್ತಿದ್ದಾರೆ. ಹಾಗಾಗಿ ಯುವ ಸಮೂಹ ತಮ್ಮ ಜವಾಬ್ದಾರಿ ಅರಿತು ವ್ಯಸನಮುಕ್ತ ಕರ್ನಾಟಕವನ್ನಾಗಿ ಮಾಡಬೇಕಾಗಿದೆ. ಇದಕ್ಕೆ ನಿಮ್ಮ ಪಾತ್ರ ಮಹತ್ವದ್ದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲ ಡಾ. ಬಿ. ರಾಜೇಶ್ ಮಾತನಾಡಿ, ಇಂತಹ ವ್ಯಸನ ಮುಕ್ತ ಕಾರ್ಯಕ್ರಮಗಳು ಇಂದಿನ ಯುವ ಜನಾಂಗಕ್ಕೆ ಅತ್ಯವಶ್ಯಕವಾಗಿದೆ. ಸಮಾಜದಲ್ಲಿ ಮಹತ್ವದ ಪಾತ್ರ ಎಂದರೆ ಯುವಜನಾಂಗ
ಇಂದಿನ ಯುವ ಜನಾಂಗ ಮಾದಕ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ. ತಮ್ಮ ಕುಟುಂಬದ ಜತೆಗೆ
ಸಮಾಜಕ್ಕೂ ಕಂಠಕಪ್ರಾಯರಾಗಿ ಸಮಾಜದಲ್ಲಿ ಆತಂಕವನ್ನು ಸೃಷ್ಠಿಸುತ್ತಿದ್ದಾರೆ ಎಂದು ಹೇಳಿದರು.
ಉತ್ತಮ ಸಮಾಜದ ನಿರ್ಮಾಣ ಇಂದಿನ ಯುವಜನಾಂಗದ ಕೈಯಲ್ಲಿದೆ. ತಮ್ಮ ಜವಾಬ್ದಾರಿ ಅರಿತು ವ್ಯಸನಮುಕ್ತ ಕರ್ನಾಟಕವನ್ನು ನಿರ್ಮಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವ್ಯಸನಮುಕ್ತ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಕಾಲೇಜಿನ ಉಪನ್ಯಾಸಕರು, ಬಿಡದಿ ಪೊಲೀಸ್ ಠಾಣೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.