ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕುಮಾರಿ ಸಂಸ್ಥೆ ಬುಧವಾರ ಏರ್ಪಡಿಸಿದ್ದ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಬಿಕೆ ಪ್ರೇಮ್​ ಉದ್ಘಾಟಿಸಿದರು. ಬಿಕೆ ವಿಜಯಾ ದೀದಿ ಇತರರಿದ್ದರು. 
ರಾಜ್ಯ

ವ್ಯಸನ ಮಾನಸಿಕ ರೋಗವಿದ್ದಂತೆ

ಪ್ರಮುಖ ಮುಖ್ಯಾಂಶಗಳು

  • ಬಿಕೆ ಪ್ರೇಮ್​ ಅಭಿಮತ
  • ಸುರಪುರದಲ್ಲಿ ವ್ಯಸನಮುಕ್ತ ಭಾರತ ಅಭಿಯಾನ
ಸುರಪುರ: ಮಾನಸಿಕ ರೋಗವಾದ ವ್ಯಸನದ ದುಷ್ಪರಿಣಾಮಗಳ ಅರಿವಿದ್ದರೂ ನಿರಂತರ ಬಳಸುತ್ತಿರುವುದು ದುರದೃಷ್ಟಕರ ಎಂದು ಬಿಕೆ ಪ್ರೇಮ್​ ಹೇಳಿದರು.
ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬ್ರಹ್ಮಕುಮಾರಿ ಸಂಸ್ಥೆ ಬುಧವಾರ ಏರ್ಪಡಿಸಿದ್ದ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅನೇಕ ಜನರು ಮನಶಾಂತಿಯಿಲ್ಲದೆ ಸಾಲ, ಸಮಸ್ಯೆಗಳ ಪರಿಹಾರಕ್ಕಾಗಿ ಚಟಗಳಿಗೆ ಬಲಿಯಾಗುತ್ತಾರೆ. ಗಾಂಜಾ, ಚರಸ, ಸಿಗರೇಟ್​, ಬೀಡಿ, ಮದ್ಯಪಾನದ ದಾಸರಾಗಿ ಆರೋಗ್ಯ, ಸಂಪತ್ತು, ಸಂಬಂಧ, ನತೆ, ಗೌರವ ಹೀಗೆ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಚಟಗಳಿಗೆ ಬದಲಾದ ವ್ಯಕ್ತಿಯ ವ್ಯವಹಾರವೂ ಬದಲಾಗುತ್ತದೆ. ಚಟಗಳಿಂದ ಲಾಭವಿಲ್ಲ, ಆದ್ರೆ ಹಾನಿ ಮಾತ್ರ ಪಕ್ಕಾ ಇದೆ ಎಂದು ಎಚ್ಚರಿಸಿದರು.
ವಿಶ್ವದಾದ್ಯಂತ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬ್ರಹ್ಮಕುಮಾರಿ ಸಂಸ್ಥೆಯ ಈ ಅಭಿಯಾನ ಸಮಾಜದಲ್ಲಿ ಆರೋಗ್ಯಕರ ಜೀವನ ಶೈಲಿ ಬೆಳೆಸುವಂಥ ಮಹತ್ವದ ಕಾರ್ಯಕ್ರಮವಾಗಿದೆ. ಶಿವ ಧ್ಯಾನ ಮಾಡಿ ವ್ಯಸನದಿಂದ ಮುಕ್ತರಾಗಬಹುದು. ಧ್ಯಾನ ಮಾನಸಿಕ ಮತ್ತು ಶಾರೀರಿಕ ಸದೃಢತೆ ತರುತ್ತದೆ. ನಮ್ಮ ಆರೋಗ್ಯ, ಪರಿವಾರದ ಸುಖ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವ್ಯಸನಗಳಿಂದ ಮುಕ್ತರಾಗಲೇಬೇಕು ಎಂದು ಕರೆ ನೀಡಿದರು.
ಬಿಕೆ ವಿಜಯಾ ದೀದಿ ಮಾತನಾಡಿ, ಅಧ್ಯಾತ್ಮ ಅರ್ಥಾತ್​ ಆತ್ಮದ ಅರಿವು, ಜೀವನ ರೂಪಿಸಿಕೊಳ್ಳುವ ಸನ್ಮಾರ್ಗ. ಸ್ವಚ್ಛ, ಸ್ವಸ್ಥ, ಸಶಕ್ತ, ಶ್ರೇಷ್ಠ ಕರ್ಮ ಮಾಡಲು ಧ್ಯಾನ ಪ್ರೇರೇಪಿಸುತ್ತದೆ. ರಾಜಯೋಗ ಕಲಿತು ವ್ಯಸನಗಳಿಂದ ಮುಕ್ತರಾಗಿ ಎಂದು ಸಲಹೆ ನೀಡಿದರು.
ಬಿಕೆ ಭಾಗೀರಥಿ, ಬಿಕೆ ಶಿವಲೀಲಾ ಮಾತನಾಡಿದರು. ಶೈಲಾ, ರಾಜಣ್ಣ ಕಡಕೋಳ, ಈಶ್ವರ ಲಕ್ಷಿ$್ಮಪುರ, ಮಾಣಿಕ ಲಾಹೋಟಿ, ಬಸವರಾಜ ದೋರನಹಳ್ಳಿ, ಲಿಂಗಣ್ಣ, ದೇವಿಂದ್ರಪ್ಪ, ರಾವೇಂದ್ರ ಭಕ್ರಿ ಇತರರಿದ್ದರು. ಬಿಕೆ ಉಷಾ ನಿರೂಪಣೆ ಮಾಡಿ ವಂದಿಸಿದರು.