Rukmini Vasanth bikini photo viral case FIR
- ನಟಿ ರುಕ್ಮಿಣಿ ವಸಂತ ಬಿಕಿನಿ AI ವಿಡಿಯೋ ಹರಿಬಿಟ್ಟವರ ವಿರುದ್ಧ FIR ದಾಖಲು
- ನಟಿ ರುಕ್ಮಿಣಿ ಕೊಟ್ಟ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ FIR
- 29 ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳ ಮೇಲೆ ದೂರು
ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ವುಡ್ ನಟಿ ರುಕ್ಮಿಣಿ ವಸಂತ್ ಅವರ ಡೀಪ್ ಫೇಕ್ ಬಿಕಿನಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಆ ವಿರುದ್ಧ ನಟಿ ರುಕ್ಮಿಣಿ ವಸಂತ್(Rukmini Vasanth) ಕೊಟ್ಟ ದೂರಿನ ಮೇರೆಗೆ ಸೈಬರ್ ಕ್ರೈ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸದ್ಯ ಪೊಲೀಸರ ಈ ಕ್ರಮವು ಆರೋಪಿಗಳಿಗೆ ನಡುಕ ಹುಟ್ಟಿಸಿದಂತಾಗಿದೆ.
ಎಐ ಹಾಗೂ ಡೀಪ್ ಫೇಕ್ ಬಳಕೆ ಮಾಡಿಕೊಂಡು ಬೇರೊಬ್ಬರ ವಿಡಿಯೋಗೆ ರುಕ್ಮಿಣಿ ವಸಂತ್ ಅವರ ಮುಖವನ್ನು ಜೋಡಿಸಿ, ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಇದರಿಂದ ನನಗೆ ತೀವ್ರ ಮುಜುಗರ ಉಂಟಾಗಿದೆ. ನನ್ನ ಚಾರಿತ್ರ್ಯಹರಣ ಮಾಡಲಾಗಿದೆ ಎಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ ಎನ್ನಲಾಗಿದೆ.
ಎಷ್ಟು ಸೋಶಿಯಲ್ ಮೀಡಿಯಾ ಅಕೌಂಟ್ ವಿರುದ್ಧ ಕ್ರಮ?
ನಟಿ ರುಕ್ಮಿಣಿ ವಸಂತ್ ಅವರು ಕೊಟ್ಟ ದೂರಿನ ಮೇರೆಗೆ ಪೊಲೀಸರು ಸದ್ಯ 29 ಸೋಶಿಯಲ್ ಮೀಡಿಯಾದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. 9 ಇನ್ಸ್ಟಾಗ್ರಾಂ ಅಕೌಂಟ್ ಆದರೆ, ಇನ್ನು 14 ಟ್ಟೀಟರ್ ಅಕೌಂಟ್ ಹಾಗೂ 6 ಫೇಸ್ ಬುಕ್ ಅಕೌಂಟ್ ಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಐಟಿ ಆಕ್ಟ್ 66C ,66 D ಬಿಎನ್ಎಸ್,75(3), 79, 336, ,356, 351, 352 294 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ ಎನ್ನಲಾಗಿದೆ
ವಿಡಿಯೋದಲ್ಲಿ ಏನಿತ್ತು?
ಕಾಂತಾರ-2, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಟಿ ರುಕ್ಮಿಣಿ ವಸಂತ್ ಅವರು ಸ್ವಿಮ್ಮಿಂಗ್ ಪೂಲ್ಗೆ ಇಳಿಯುವಂತೆ, ಬಿಕಿನಿಯಲ್ಲಿ ಅಲ್ಲಿಂದ ಹೊರಬರುವಂತೆ ಎಐ ವಿಡಿಯೋ ಕ್ರಿಯೇಟ್ ಮಾಡಿ ಹಂಚಿಕೊಳ್ಳಲಾಗಿತ್ತು. ಇದು ನನಗೆ ತೀರಾ ಮಜುಗುರಕ್ಕೆ ಒಳಗಾಗುವಂತೆ ಮಾಡಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಜೊತೆಗೆ ಪೊಲೀಸರಿಗೆ ದೂರು ನೀಡಿದ್ದರು.
ನಟಿಯರಿಗೆ ತಪ್ಪದ ಡೀಪ್ಫೇಕ್ ಕಾಟ
ಈ ಮೊದಲು ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ಬಳಕೆ ಮಾಡಿಕೊಂಡು ಡೀಪ್ಫೇಕ್ ವಿಡಿಯೋ ಕ್ರಿಯೇಟ್ ಮಾಡಲಾಗಿತ್ತು. ಅದು ರಾತ್ರೋರಾತ್ರಿ ವೈರಲ್ ಆಗಿತ್ತು. ಆಸಂಬಂಧ ಅವರು ನೀಡಿದ್ದ ದೂರಿನ ಮೇರೆಗೆ ದೆಹಲುಇ ಪೊಲೀಸರು ಆಂಧ್ರ ಪ್ರದೇಶದ ಗುಂಟೂರು ಮೂಲದ ನವೂನ್ ಈಮಾನಿ ಎಂಬಾತನನ್ನು ಬಂಧಿಸಿದ್ದರು. ಕತ್ರಿನಾ ಕೈಫ್, ಕಾಜೋಲ್ ಹಾಗೂ ನೋರಾ ಫತೇಹಿ, ಶ್ರೀ ಲೀಲಾ ಅವರನ್ನು ಸಹ ಡೀಪ್ಫೇಕ್ಗೆ ಬಳಕೆ ಮಾಡಿಕೊಳ್ಳಲಾಗಿತ್ತು,. ನಟಿ ಆಲಿಯಾ ಭಟ್ ಅವರನ್ನು ತೀರಾ ಕೆಟ್ಟದಾಗಿ ಬಿಂಬಿಸುವ ಡೀಪ್ಫೇಕ್ ವಿಡಿಯೋವನ್ನು 2023 ನವೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು, (ಏಜೆನ್ಸೀಸ್).