krishi thapanda friend suicide 
ರಾಜ್ಯ

ನಟಿ ಕೃಷಿ ತಾಪಂಡಾ ಫ್ಲ್ಯಾಟ್​ನಲ್ಲಿ ಆಪ್ತ, ಉದ್ಯಮಿ ವೈಶಾಕ್​ ಆತ್ಮಹತ್ಯೆ...krishi thapanda

krishi thapanda: ನಟಿ ಹಾಗೂ ಬಿಗ್​ ಬಾಸ್​ ಮಾಜಿ ಸ್ಪರ್ಧಿಕೃಷಿ ತಾಪಂಡ ಅವರ ಫ್ಲ್ಯಾಟ್​ನಲ್ಲಿ ಅವರ ಆಪ್ತ ಗೆಳೆಯ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ರಾಜರಾಜೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ವೈಶಾಕ್(45) ಎಂದು ಗುರುತಿಸಲಾಗಿದೆ.
ರಾಜರಾಜೇಶ್ವರಿ ನಗರದ ಬಂಗಾರಪ್ಪ ಗುಡ್ಡೆ ಬಳಿಯಿರುವ ಲ್ಲಿರುವ 'ಎಲಿಗಂಟ್ಸ್ ಅಪಾರ್ಟ್‌ಮೆಂಟ್'ನಲ್ಲಿ ನಿನ್ನೆ ರಾತ್ರಿ
ಯಾರು ಇಲ್ಲದ ಸಮಯ ನೋಡಿಕೊಂಡು ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.ವಿಷಯ ತಿಳಿದ ತಕ್ಷಣ ಆರ್.ಆರ್. ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ವೈಶಾಕ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣದ ತನಿಖೆಯ ನಂತರ ಮಾಹಿತಿ ತಿಳಿಯಲಿದೆ.

ಆತ್ಮಹತ್ಯೆಗೂ ಮುನ್ನ ಕೃಷಿಗೆ ಮೆಸೇಜ್​

ವೈಶಾಕ್​ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೃಷಿ ತಾಪಂಡ ಅವರನ್ನು ಸಂಪರ್ಕಿಸಿದ್ದರಂತೆ. ನನಗೆ ಜೀವನವೇ ಸಾಕಾಗಿದೆ.. ನಂಗೆ ಬದುಕೋಕೆ ಇಷ್ಟ ಇಲ್ಲ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಆ ರೀತಿ ಮಾಡ್ಕೋಬೇಡ.ಬರ್ತೀನಿ ಬರೋವರೆಗೂ ಇರು. ಇಬ್ಬರೂ ಕುಕ್ಕೇ ಸುಬ್ರಮಣ್ಯ ಹೋಗೋಣ. ದೇವಸ್ಥಾನಕ್ಕೆ ಹೋಗಿ ಬರೋಣ ಮನಸ್ಸು ಹಗುರ ಮಾಡಿಕೋ ಎಂದಿದ್ದರು. ಇದಕ್ಕೆ ಓಕೆ ಎಂದಿದ್ದ ವೈಶಾಕ್ ​ಆದ್ರೆ ಕೃಷಿ ತಾಪಂಡ ಅವರು ಯಲಹಂಕದಿಂದ ರಾತ್ರಿ 11 ಗಂಟೆಗೆ ಮನೆಗೆ ಬರುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಉದ್ಯಮಿ ವೈಶಾಕ್​ಗೆ ಕಳೆದ 15 ವರ್ಷಗಳ ಹಿಂದೆ ಮದುವೆ ಆಗಿತ್ತು. ದಂಪತಿಗೆ14 ವರ್ಷದ ಮಗನಿದ್ದಾನೆ. ಕಾರು ಆಟೋ ಮೊಬೈಲ್ ಹಾಗೂ ಗ್ಯಾರೇಜ್ ಇಟ್ಟುಕೊಂಡಿದ್ದರು.

ವೈಶಾಕ್​ ವಿರುದ್ಧ ದೂರು

ವೈಶಾಕ್ ಮತ್ತು ಕೃಷಿ ತಾಪಂಡ ವಿರುದ್ಧ ಈ ಹಿಂದೆ ಉದ್ಯಮಿ ಎವಿಆರ್ ರೆಡ್ಡಿ (ಅರವಿಂದ್ ವೆಂಕಟೇಶ್ ರೆಡ್ಡಿ) ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಸಂಬಂಧ ವೈಶಾಕ್ ಅವರನ್ನು ಬಂಧಿಸಲಾಗಿತ್ತು. ಅರವಿಂದ್ ವೆಂಕಟೇಶ್ ರೆಡ್ಡಿ ನೀಡಿದ ದೂರಿನ ವಿಚಾರಕ್ಕೆ ಸಂಬಂಧಿಸಿದಂತೆ ವೈಶಾಕ್ ಮತ್ತು ಅವರ ಪತ್ನಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಪತ್ನಿಯೊಂದಿಗೆ ವೈಮನಸ್ಸು

ಪತ್ನಿಯೊಂದಿಗಿನ ವೈಮನಸ್ಸಿನಿಂದಾಗಿ ವೈಶಾಕ್ ಆಗಾಗ್ಗೆ ನಟಿ ಕೃಷಿ ಅವರ ಮನೆಗೆ ಬಂದು ಇರುತ್ತಿದ್ದರು. ನಿನ್ನೆ ಕೂಡ ಇದೇ ಕಾರಣಕ್ಕೆ ಕೃಷಿ ಅವರ ಮನೆಗೆ ಬಂದಿದ್ದ ವೈಶಾಕ್, ಅಲ್ಲಿಯೇ ಆತ್ಮಹತ್ಯೆಗ ಶರಣಾಗಿದ್ದಾರೆ, (ಏಜೆನ್ಸೀಸ್).